newsfirstkannada.com

5 ಪಂದ್ಯಗಳಲ್ಲೇ ಅಸಲಿ ಸಾಮರ್ಥ್ಯ ಬಟಾಬಯಲು.. ಬದಲಾಗಲಿಲ್ಲ RCB ನಸೀಬು..!

Share :

Published April 11, 2024 at 2:09pm

Update April 11, 2024 at 2:10pm

    ಇದು ಆರ್​ಸಿಬಿ ವೇಗಿಗಳ ಪರದಾಟದ ಕಹಾನಿ..!

    ಫಾಸ್ಟ್ ಬೌಲರ್​ಗಳಲ್ಲಿ ಹೋರಾಟದ ಛಲವೇ ಮಾಯ

    ಒಂದೇ ಒಂದು ಪಂದ್ಯದಲ್ಲೂ ಮೈಕೊಡವಿ ನಿಲ್ಲಲಿಲ್ಲ

ಹರಾಜಿನ ಬಳಿಕ ಆರ್​ಸಿಬಿ ಬೌಲಿಂಗ್​​ ಲೈನ್​​ ಅಪ್​​​​​​​​​​​​​ ಅನ್ನ ಎಲ್ಲರೂ ಕೊಂಡಾಡಿದ್ರು. ಈ ಸಲ ಖಂಡಿತ ಆರ್​ಸಿಬಿ ನಸೀಬು ಬದಲಾಗಲಿದೆ ಅಂತ ಫ್ಯಾನ್ಸ್ ಭಾವಿಸಿದ್ರು. ಆದ್ರೆ ಪ್ರಸಕ್ತ ಐಪಿಎಲ್​ನಲ್ಲಿ ಆರ್​​ಸಿಬಿ ಪೇಸರ್ಸ್​ ಯಾರೂ ಮಾಡದಷ್ಟು ಖರಾಬ್​ ಬೌಲಿಂಗ್ ಮಾಡ್ತಿದ್ದಾರೆ. ಪಂದ್ಯ ಗೆಲ್ಲಿಸಿಕೊಡಬೇಕಾದ್ರೆ ತಂಡಕ್ಕೆ ವಿಲನ್ಸ್ ಆಗ್ತಿದ್ದಾರೆ.

ಎಂತಹ ತಂಡವೇ ಆಗ್ಲಿ..! ಎಂತಹ ಸೋಲೆ ಆಗ್ಲಿ. ಮರು ಪಂದ್ಯದಲ್ಲಿ ಮೈಕೊಡವಿ ನಿಲ್ಲಬೇಕು. ಆಗಲೇ ಆ ತಂಡದಿಂದ ಉತ್ತಮ ರಿಸಲ್ಟ್​ ನಿರೀಕ್ಷಿಸಲು ಸಾಧ್ಯ. ಸದ್ಯ ಆರ್​ಸಿಬಿ ಕಮ್​ಬ್ಯಾಕ್​ ಪದವನ್ನೇ ಮರೆತು ಬಿಟ್ಟಿದೆ. ಸತತ ಮೂರರಲ್ಲಿ ಮುಗ್ಗರಿಸಿ ಗೆಲುವಿಗಾಗಿ ಹೆಣಗಾಡ್ತಿದೆ. ಕಂಪ್ಲೀಟ್​​ ಫೇಲ್ಯೂರ್​​​ ತಂಡವನ್ನ ಇಂತಹ ದುಸ್ಥಿತಿಗೆ ತಂದಿಟ್ಟಿದೆ. ಎಸ್ಪೆಷಲಿ ಫಾಸ್ಟ್ ಬೌಲರ್ಸ್​ ಕಳಪೆ ಆಟ ತಂಡಕ್ಕೆ ದೊಡ್ಡ ಸೆಟ್​ಬ್ಯಾಕ್ ಆಗಿದೆ.

ಇದನ್ನೂ ಓದಿ: ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?

ಹೆಸರಿಗಷ್ಟೇ ಬಲಿಷ್ಠ ಫಾಸ್ಟ್​ ಬೌಲಿಂಗ್ ಅಟ್ಯಾಕ್​​​..!
ಫಾಸ್ಟ್​ ಬೌಲರ್ಸ್​ ತಂಡಕ್ಕೆ ದೊಡ್ಡ ಶಕ್ತಿ. ಕರಾರುವಕ್ ದಾಳಿ ಮೂಲಕ ಪಂದ್ಯವನ್ನ ಗೆಲ್ಲಿಸಿಕೊಡುವ ತಾಕತ್ತು ವೇಗಿಗಳಿದೆ. ಆರ್​ಸಿಬಿ ತಂಡದಲ್ಲೂ ಅಂತಹ ವೇಗಿಗಳಿಗೆ ಬರವಿಲ್ಲ. ಅನುಭವಿ ಮೊಹಮ್ಮದ್ ಸಿರಾಜ್​​​, ರೀಸಿ ಟಾಪ್ಲೆ, ಅಲ್ಜಾರಿ ಜೋಸೆಫ್​​​​​​, ವೈಶಾಕ್ ವಿಜಯ್​ಕುಮಾರ್​​, ಲೂಕಿ ಫರ್ಗೂಸನ್ ಹಾಗೂ ಯಶ್​ ದಯಾಳ್​​ರಂತ ಕ್ವಾಲಿಟಿ ಬೌಲರ್​ಗಳಿದ್ದಾರೆ. ಆದ್ರೂ ಇವರಿಂದ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗ್ತಿಲ್ಲ.

ಇದನ್ನೂ ಓದಿ: ಆರ್​ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್​​ ಸವಾಲ್; ಪ್ಲೇಯಿಂಗ್​-11ರಲ್ಲಿ ಭಾರೀ ಬದಲಾವಣೆ?

ರಾಜಸ್ಥಾನ, ಲಕ್ನೋ ಸೂಪರ್​ ಜೈಂಟ್ಸ್​​​, ಸಿಎಸ್​ಕೆ ಹಾಗೂ ಸನ್​ರೈಸರ್ಸ್​ ಹೈದ್ರಾಬಾದ್​ಗಳು ತಂಡಗಳು ಬೌಲಿಂಗ್​​ನಿಂದಲೇ ಪಂದ್ಯ ಗೆಲ್ತಿವೆ. ಆದ್ರೆ ಆರ್​ಸಿಬಿ ಶರವೇಗಿಗಳ ದಂಡನ್ನೆ ಹೊಂದಿದ್ರೂ ಯಾವುದೇ ಪ್ರಯೋಜನಕ್ಕೆ ಬರ್ತಿಲ್ಲ. ಮೊಣಚಿಲ್ಲದ ಬೌಲಿಂಗ್​​​. ವಿಕೆಟ್ ಪಡೆಯಲು ಪರದಾಟ. ಐದು ಪಂದ್ಯಗಳಲ್ಲೆ ಆರ್​ಸಿಬಿ ವೇಗಿಗಳ ಅಸಲಿ ಹಕೀಕರ್​ ಬಟಾಬಯಲಾಗಿದೆ.

ಪ್ರಸಕ್ತ IPL ನಲ್ಲಿ ಆರ್​ಸಿಬಿ ವೇಗಿಗಳು
17ನೇ ಐಪಿಎಲ್​​ನಲ್ಲಿ ಆರ್​ಸಿಬಿ ವೇಗಿಗಳು 5 ಪಂದ್ಯಗಳಲ್ಲಿ ಒಟ್ಟು 70.5 ಓವರ್ಸ್​ ಬೌಲಿಂಗ್ ಮಾಡಿದ್ದಾರೆ. ದುಬಾರಿ 9.5 ರ ಎಕಾನಮಿಯಲ್ಲಿ ಬರೀ 16 ವಿಕೆಟ್​​​ ಕಬಳಿಸಿದ್ದಾರೆ. ಅಂದ್ರೆ ಸರಾಸರಿ 42.1 ರನ್​ಗೆ ಒಂದೊಂದು ವಿಕೆಟ್​​ ಬೇಟೆಯಾಡಿದ್ದಾರೆ. ಹಾಗೇ ಸರಾಸರಿ 26.6 ಬಾಲ್​​ಗೆ ಒಂದೊಂದು ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ: RCB vs MI: ವಾಂಖೆಡೆ ಮೈದಾನದಲ್ಲಿ ಯಾರಿಗೆ ಹೆಚ್ಚು ಲಾಭ..? ಪಿಚ್ ರಿಪೋರ್ಟ್..!

RCB ವೇಗಿಗಳ ಪರದಾಟಕ್ಕೆ ಕೊನೆ ಬೀಳೋದ್ಯಾವಾಗ..?
ಕಳೆದ 5 ಪಂದ್ಯಗಳಲ್ಲಿ ಆರ್​ಸಿಬಿ ವೇಗಿಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಇದರಿಂದ ಗೆಲುವಿನ ಆಸೆ ಕಮರಿದೆ. ಕನಿಷ್ಠ ಪಕ್ಷ ಇಂದಾದ್ರು ಆರ್​ಸಿಬಿ ಸ್ಪೀಡ್​​ಸ್ಟರ್ಸ್​ ಗುಡ್​​ರಿದಮ್​​​ ಕಂಡುಕೊಳ್ಳಬೇಕಿದೆ. ಯಾಕಂದ್ರೆ ಇಂದು ಆರ್​ಸಿಬಿಗೆ ಸವಾಲೆಸೆಯುತ್ತಿರೋದು ಅಂತಿಂಥ ತಂಡವಲ್ಲ. ಬಲಾಢ್ಯ ಮುಂಬೈ. ಐದು ಬಾರಿ ಚಾಂಪಿಯನ್​​​​​ ತಂಡವನ್ನ ಬಗ್ಗುಬಡಿಯಬೇಕಾದ್ರೆ ವೇಗಿಗಳು ಅಸಲಿ ಖದರ್​​ ತೋರುವುದು ಅನಿವಾರ್ಯವಾಗಿದೆ. ಹಾಗಾದ್ದಲ್ಲಿ ಮಾತ್ರ ಇಂದು ಆರ್​ಸಿಬಿ ಸೋಲಿನ ಚಕ್ರವ್ಯೂಹ ಬೇಧಿಸಿ ಗೆಲುವಿನ ಗೆಲುವಿನ ಬಾವುಟ ಹಾರಿಸಲು ಸಾಧ್ಯ. ಹಾಗಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

5 ಪಂದ್ಯಗಳಲ್ಲೇ ಅಸಲಿ ಸಾಮರ್ಥ್ಯ ಬಟಾಬಯಲು.. ಬದಲಾಗಲಿಲ್ಲ RCB ನಸೀಬು..!

https://newsfirstlive.com/wp-content/uploads/2024/04/Mohammed-Siraj.jpg

Load More