ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತಯಾರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರೀಟೈನ್ ಲಿಸ್ಟ್ ಲೀಕ್
2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ..!
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆ ಡಿಸೆಂಬರ್ನಲ್ಲಿ ನಡೆಯಲಿರೋ 2025ರ ಐಪಿಎಲ್ ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು ಎಂಬುದು ಆರ್ಸಿಬಿ ಪ್ಲಾನ್.
ಇನ್ನು, ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದು ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಕೆ.ಎಲ್ ರಾಹುಲ್ ಜತೆಗೆ ಮತ್ತೋರ್ವ ಸ್ಟಾರ್ ಕ್ರಿಕೆಟರ್ ದೇವದತ್ ಪಡಿಕ್ಕಲ್ ಕೂಡ ಆರ್ಸಿಬಿ ತಂಡ ಸೇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಮಧ್ಯೆ ಆರ್ಸಿಬಿ ಯಾರನ್ನು ರೀಟೈನ್ ಮಾಡಿಕೊಳ್ಳಬಹುದು ಅನ್ನೋ ಚರ್ಚೆ ಶುರುವಾಗಿದೆ.
ಆರ್ಸಿಬಿ ರೀಟೈನ್ ಮಾಡಿಕೊಳ್ಳಬಹುದಾದ 4 ಆಗಾಟರರ ಲಿಸ್ಟ್ ಹೀಗಿದೆ..!
ವಿರಾಟ್ ಕೊಹ್ಲಿ ಎಂದರೆ ಆರ್ಸಿಬಿ, ಆರ್ಸಿಬಿ ಎಂದರೆ ವಿರಾಟ್ ಕೊಹ್ಲಿ. ರೀಟೈನ್ ವಿಚಾರಕ್ಕೆ ಬಂದರೆ ಆರ್ಸಿಬಿ ಮೊದಲ ಆಯ್ಕೆ ಕೊಹ್ಲಿ. ಕೊಹ್ಲಿ ನಂತರ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕೂಡ ರೀಟೈನ್ ಲಿಸ್ಟ್ನಲ್ಲೇ ಇದ್ದಾರೆ. ಇವರೊಂದಿಗೆ ವಿದೇಶಿ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಕ್ಯಾಮೆರಾನ್ ಗ್ರೀನ್ ಅವರನ್ನು ಕೂಡ ಆರ್ಸಿಬಿ ರೀಟೈನ್ ಮಾಡಿಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೆ.ಎಲ್ ರಾಹುಲ್ ಬೆನ್ನಲ್ಲೇ ಆರ್ಸಿಬಿಗೆ ಮತ್ತೋರ್ವ ಕರ್ನಾಟಕದ ಕ್ರಿಕೆಟರ್ ಎಂಟ್ರಿ.. ಯಾರದು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್