ಇಂದು ಮುಂಬೈ ಹೈದರಾಬಾದ್ ವಿರುದ್ಧ ಗೆದ್ದರೆ ಆರ್ಸಿಬಿಗೆ ಅವಕಾಶ
ಪ್ಲೇ ಆಫ್ಗೆ ಹೋಗಲು ಆರ್ಸಿಬಿ ಟೀಮ್ಗೆ ಇದೆ ಸುವರ್ಣಾವಕಾಶ!
ಆರ್ಸಿಬಿ ಮಾಡಬೇಕಿರೋ ಕೆಲಸ, ಉಳಿದ ಮೂರು ಪಂದ್ಯ ಗೆಲ್ಲೋದು
ಇಂದು ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡಗಳು ಭಾಗಿಯಾಗುತ್ತಿವೆ. ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಮುಂಬೈ ಟೀಮ್ಗೆ 174 ರನ್ಗಳ ಬಿಗ್ ಟಾರ್ಗೆಟ್ ನೀಡಿದೆ. ಇಂದು ಮುಂಬೈ ಒಂದು ವೇಳೆ ಗೆದ್ದರೆ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಸುವರ್ಣಾವಕಾಶ ಸಿಗಲಿದೆ.
ಹೌದು, ಹೈದರಾಬಾದ್ ಪ್ಲೇ ಆಫ್ಗೆ ಹೋಗಲು ಇನ್ನೂ 2 ಪಂದ್ಯ ಗೆಲ್ಲಬೇಕಿದೆ. ಇಂದು ಮುಂಬೈ ವಿರುದ್ಧ ಸೋತರೆ ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ ಅವಕಾಶ ಕಡಿಮೆ ಆಗಲಿದೆ. ಮುಂಬೈ ಗೆದ್ರೂ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರೋ ಕಾರಣ ಯಾವುದೇ ಅವಕಾಶ ಇಲ್ಲ. ಹೈದರಾಬಾದ್ ಮುಂದೆ ಲಕ್ನೋ, ಪಂಜಾಬ್, ಗುಜರಾತ್ ವಿರುದ್ಧ ಆಡಲಿದ್ದು, ಎಲ್ಲಾ ತಂಡಗಳು ಪ್ಲೇ ಆಫ್ಗೆ ಹೋಗಲು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಇನ್ನು ಆರ್ಸಿಬಿ ಕೂಡ ಮುಂದೆ ಪಂಜಾಬ್, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಆಡಲಿದ್ದು, ಎಲ್ಲಾ ಪಂದ್ಯಗಳಲ್ಲೂ ಭಾರೀ ರನ್ಗಳಿಂದ ಗೆದ್ದು ರನ್ ರೇಟ್ ಹೆಚ್ಚಿಸಿಕೊಂಡರೆ ಪ್ಲೇ ಆಫ್ಗೆ ಹೋಗೋ ಅವಕಾಶ ಇನ್ನೂ ಇದೆ. ಅದರಲ್ಲೂ ಮೊದಲು ಬ್ಯಾಟಿಂಗ್ ಮಾಡಿ 200-250 ರನ್ ಟಾರ್ಗೆಟ್ ನೀಡಿ ಎದುರಾಳಿಗಳನ್ನ 150 ರನ್ ಒಳಗೆ ಆಲೌಟ್ ಮಾಡಬೇಕು. ಕನಿಷ್ಠ 100 ರನ್ ಮತ್ತು ಸಾಧ್ಯವಾದಷ್ಟು ವಿಕೆಟ್ಗಳಿಂದ ಗೆಲುವು ಸಾಧಿಸಬೇಕು.
ಸದ್ಯ ಆರ್ಸಿಬಿ ತಾನು ಆಡಿರೋ 11 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕ ಪಡೆದುಕೊಂಡಿದೆ. ತಂಡದ ರನ್ ರೇಟ್ ಕೂಡ ಸುಧಾರಿಸಿದೆ. ಮೂರಕ್ಕೆ ಮೂರು ಪಂದ್ಯ ಗೆದ್ದರೆ ಇನ್ನೂ ಒಂದು ಚಾನ್ಸ್ ಇದೆ.
ಈಗಾಗಲೇ ಅರ್ಧ ಸೀಸನ್ ಮುಗಿದಿದೆ. ಆರ್ಸಿಬಿ ಇನ್ನೂ 3 ಪಂದ್ಯಗಳು ಆಡಲಿದ್ದು. ಮೂರಕ್ಕೆ ಮೂರು ಗೆಲ್ಲಬೇಕಿದೆ. ಆಗ ಆರ್ಸಿಬಿಗೆ ಇನ್ನೂ 6 ಅಂಕ ದೊರೆಯಲಿದ್ದು, ಟೋಟಲ್ 14 ಪಾಯಿಂಟ್ಸ್ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್ ಕನ್ಫರ್ಮ್. 14 ಅಂಕ ಪಡೆದ್ರೂ ಪ್ಲೇ ಆಫ್ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್ ಆಗಿರಲಿದೆ. ಹಾಗಾಗಿ ಆರ್ಸಿಬಿ 3 ಮ್ಯಾಚ್ ಗೆದ್ದು ಒಳ್ಳೇ ರನ್ ರೇಟ್ ಇದ್ದರೆ ಪ್ಲೇ ಆಫ್ಗೆ ಹೋಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ