newsfirstkannada.com

ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿದ್ರಾ ಫಾಫ್​​​​ ಡುಪ್ಲೆಸಿಸ್​? ಆರ್​​ಸಿಬಿ ನಾಯಕ ಬೇಸರ ಹೊರಹಾಕಿದ್ದೇಕೆ..?

Share :

Published April 2, 2024 at 4:47pm

    ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಇಂಡಿಯನ್​ ಪ್ರೀಮಿಯರ್​ ಲೀಗ್​​​

    ಕಳೆದ ತಿಂಗಳು ಮಾರ್ಚ್​​ 22ನೇ ತಾರೀಕಿನಿಂದ ಶುರುವಾದ ಐಪಿಎಲ್​ ಮೆಗಾ ಟೂರ್ನಿ

    2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಕರೆಯೋ ಇಂಡಿಯನ್ ಪ್ರೀಮಿಯರ್ 17ನೇ ಸೀಸನ್​ ಶುರುವಾಗಿದೆ. ಕಳೆದ ತಿಂಗಳು ಮಾರ್ಚ್​​ 22ನೇ ತಾರೀಕಿನಿಂದಲೇ ಶುರುವಾದ ಈ ಸೀಸನ್​​ನಲ್ಲಿ ಇದುವರೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಂದ್ಯಗಳು ಆಡಿವೆ. ಈ ಪೈಕಿ ಕೇವಲ ಒಂದು ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆದ್ದಿದ್ದು, ಇನ್ನುಳಿದ ಎರಡು ಮ್ಯಾಚ್​​ಗಳಲ್ಲಿ ಸೋತಿದೆ. ಇದಕ್ಕೆ ಕಾರಣ ಆರ್​​​ಸಿಬಿ ಬ್ಯಾಟಿಂಗ್​​ ಮತ್ತು ಬೌಲಿಂಗ್​ ವೈಫಲ್ಯ. ಅದರಲ್ಲೂ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಅಂತೂ ಮೂರು ಪಂದ್ಯಗಳಲ್ಲೂ ಹೇಳಿಕೊಳ್ಳುವ ಪ್ರದರ್ಶನವೇನು ನೀಡಿಲ್ಲ. ಹಾಗಾಗಿ ನಾಯಕತ್ವದ ಒತ್ತಡಕ್ಕೆ ಸಿಲುಕಿ ಫಾಫ್​ ಡುಪ್ಲೆಸಿಸ್​​ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು, ಈ ಸಂಬಂಧ ಮಾತಾಡಿರೋ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​, ಆರ್​​ಸಿಬಿಯನ್ನು ಮುನ್ನಡೆಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ತಂಡದಲ್ಲಿ ಹಲವಾರು ಸ್ಟಾರ್ ಆಟಗಾರರು ಇದ್ದಾರೆ. ನನಗೆ ಆ ಆಟಗಾರರ ಸಾಮರ್ಥ್ಯ ತುಂಬಾ ಇಷ್ಟ. ಅವರು ಉತ್ತಮ ಪ್ರದರ್ಶನ ನೀಡಿ ನನ್ನ ಜವಾಬ್ದಾರಿ ಕಡಿಮೆ ಮಾಡಲಿ ಎಂದು ಬಯಸುತ್ತೇನೆ ಎಂದರು.

ಬೇಸರ ಹೊರಹಾಕಿದ ಫಾಫ್​​..!

ಯಾರಿಗೆ ತಂಡದಲ್ಲಿ ಅವಕಾಶ ಬೇಕೋ ಅವರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಅದರಲ್ಲೂ ಮ್ಯಾಕ್ಸ್​ವೆಲ್​​, ರಜತ್​ ಪಾಟಿದಾರ್​ ಅವರು ಫಾರ್ಮ್​ಗೆ ಮರಳಬೇಕಕಿದೆ. ಸ್ಪಿನ್ನರ್​ಗಳ ಎದುರು ಚೆನ್ನಾಗಿ ಆಡಬೇಕು. ಆಕ್ರಮಣಕಾರಿ ಆಟದಿಂದ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸಬೇಕು. ಇದರಿಂದ ನನ್ನ ನಾಯಕತ್ವದ ಒತ್ತಡ ಕಡಿಮೆ ಆಗುತ್ತದೆ ಎಂದರು.

ಇದನ್ನೂ ಓದಿ: ‘ಮುಂಬೈ ಇಂಡಿಯನ್ಸ್​ಗೆ ಮತ್ತೆ ರೋಹಿತ್​ ಶರ್ಮಾ ಕ್ಯಾಪ್ಟನ್​​’- ಮಾಜಿ ಕ್ರಿಕೆಟರ್​ ಮನೋಜ್​ ತಿವಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿದ್ರಾ ಫಾಫ್​​​​ ಡುಪ್ಲೆಸಿಸ್​? ಆರ್​​ಸಿಬಿ ನಾಯಕ ಬೇಸರ ಹೊರಹಾಕಿದ್ದೇಕೆ..?

https://newsfirstlive.com/wp-content/uploads/2024/04/FAF-1.jpg

Load More