/newsfirstlive-kannada/media/post_attachments/wp-content/uploads/2024/05/KL-Rahul-next-captain.jpg)
ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಸೀಸನ್​​ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಪ್ಲೇ ಆಫ್​​ಗೆ ಹೋಗಲು ಆರ್​​ಸಿಬಿ ಮುಂದಿನ ಪಂದ್ಯ ಚೆನ್ನೈ ವಿರುದ್ಧ ಗೆಲ್ಲಲೇಬೇಕಿದೆ. ಈ ಮಧ್ಯೆ ಫಾಫ್​ ಡುಪ್ಲೆಸಿಸ್​ ಬಳಿಕ ಆರ್​​ಸಿಬಿ ಮುಂದಿನ ಕ್ಯಾಪ್ಟನ್​ ಯಾರು ಅನ್ನೋ ಚರ್ಚೆ ಜೋರಾಗಿದೆ.
ಯೆಸ್​​, ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ಗೆ ಈಗ 39 ವರ್ಷ. ಮುಂದಿನ ಸೀಸನ್​​ ವೇಳೆಗೆ ಫಾಫ್​ಗೆ 40 ವರ್ಷ ಆಗಲಿದೆ. ಹಾಗಾಗಿ ತನಗೆ ವಯಸ್ಸಾದ ಕಾರಣ ಫಾಫ್​​​ ಐಪಿಎಲ್​​ಗೆ ನಿವೃತ್ತಿ ಘೋಷಿಸಲಿದ್ದಾರೆ. ಈ ಕಾರಣಕ್ಕೆ ಆರ್​​ಸಿಬಿ ತಂಡ ಹೊಸ ನಾಯಕನನ್ನು ಹುಡುಕಬೇಕಾಗಿದೆ.
/newsfirstlive-kannada/media/post_attachments/wp-content/uploads/2024/01/Rajat-Patidar.jpg)
ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಆರ್​​ಸಿಬಿ ತಂಡದಲ್ಲಿರೋ ಕೊಹ್ಲಿ ಆಪ್ತ ರಜತ್​ ಪಾಟಿದಾರ್​​ ಅವರಿಗೆ ನಾಯಕತ್ವ ಪಟ್ಟ ಕಟ್ಟಬಹುದು. ಇಲ್ಲದೆ ಹೋದಲ್ಲಿ ಕರ್ನಾಟಕದ ಹುಡುಗ ಲಕ್ನೋ ತಂಡದ ಕ್ಯಾಪ್ಟನ್​ ಆಗಿರೋ ಕೆ.ಎಲ್​ ರಾಹುಲ್​​ ಅವರನ್ನು ಆರ್​​ಸಿಬಿ ಕ್ಯಾಪ್ಟನ್​ ಮಾಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.
ಇತ್ತೀಚೆಗಷ್ಟೇ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆ.ಎಲ್​ ರಾಹುಲ್​ ಮಧ್ಯೆ ಜೋರು ಗಲಾಟೆ ಆಗಿತ್ತು. ಕನ್ನಡಿಗ ರಾಹುಲ್​ ಮುಂದಿನ ಸೀಸನ್​ ವೇಳೆಗೆ ಲಕ್ನೋ ತೊರೆದು ಆರ್​​ಸಿಬಿಗೆ ಬರಲಿದ್ದಾರೆ ಎಂದು ವರದಿ ಕೂಡ ಆಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us