newsfirstkannada.com

ಕರ್ನಾಟಕದ ಆಟಗಾರನಿಗೆ ಅವಮಾನ ಮಾಡಿದ ಆರ್​​ಸಿಬಿ; ಅಸಲಿಗೆ ಆಗಿದ್ದೇನು..?

Share :

Published April 3, 2024 at 5:20pm

Update April 3, 2024 at 5:32pm

  ಆರ್​​ಸಿಬಿಗೆ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು

  ಎಷ್ಟು ಬಾರಿ ಸೋತ್ರೂ ಬುದ್ಧಿ ಕಲಿಯದ ಮ್ಯಾನೇಜ್ಮೆಂಟ್​​​

  ಚೆನ್ನಾಗಿ ಆಡಿದ್ರೂ ಕನ್ನಡಿಗರಿಗೆ ಆರ್​​ಸಿಬಿಯಲ್ಲಿ ಇಲ್ಲ ಅವಕಾಶ

ಇತ್ತೀಚೆಗೆ ಹೋಮ್​ಗ್ರೌಂಡ್​​ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಪಂದ್ಯದಲ್ಲಿ ಆರ್​​ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ನಿಜ ಹೇಳಬೇಕಂದ್ರೆ ಲಕ್ನೋ ಎದುರು ಗೆಲ್ಲೋ ಅವಕಾಶ ಆರ್​​ಸಿಬಿಗೆ ಇತ್ತು. ಆದರೆ, ಆರ್​​ಸಿಬಿ ಮಾಡಿದ ಎಡುವಟ್ಟುಗಳಿಂದಲೇ ಮ್ಯಾಚ್​​ ಸೋಲುವಂತಾಗಿದೆ.

ಹೌದು, ಎಮ್.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​​ಸಿಬಿ ಸೋತಿತ್ತು. ಇದಾದ ಬೆನ್ನಲ್ಲೇ ನಡೆದ ಪಂಜಾಬ್​​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ನಡೆದ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್​​ಸಿಬಿ ನಿನ್ನೆ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಮಂಡಿಯೂರಿದೆ. ಆದ್ದರಿಂದ ಆರ್​​ಸಿಬಿ ಪ್ಲೇ ಆಫ್​ಗೆ ಹೋಗಲು ಅವಕಾಶ ಇದ್ಯಾ? ಅನ್ನೋ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲ, ಆರ್​​ಸಿಬಿಯಲ್ಲಿ ಕನ್ನಡಿಗರಿಗೆ ಬೆಲೆ ಇಲ್ವಾ? ಅನ್ನೋ ಆಕ್ರೋಶ ಮಾತುಗಳು ಕೂಡ ಕೇಳಿ ಬಂದಿವೆ.

ಚೆನ್ನಾಗಿ ಆಡಿದ್ರೂ ಕನ್ನಡಿಗನಿಗೆ ಅವಕಾಶ ನೀಡದ ಆರ್​​​ಸಿಬಿ

ವಿಜಯ್​ಕುಮಾರ್​ ವೈಶಾಕ್​​ ಆರ್​​ಸಿಬಿ ತಂಡದ ಸ್ಟಾರ್​ ಬೌಲರ್​​. ಇವರು ಕರ್ನಾಟಕ ತಂಡದ ಕ್ರಿಕೆಟಿಗ. ಕೆಕೆಆರ್​ ವಿರುದ್ಧ ಪಂದ್ಯದಲ್ಲಿ ಎಲ್ಲರೂ ರನ್​ಗಳನ್ನು ಬಿಟ್ಟುಕೊಟ್ಟರೂ ನಮ್ಮ ಕರ್ನಾಟಕದ ಹುಡುಗ ವಿಜಯ್​ ಮಾತ್ರ ತಾನು ಮಾಡಿದ 4 ಓವರ್​ಗಳಲ್ಲಿ 1 ವಿಕೆಟ್​ ತೆಗೆದು ಕೇವಲ 23 ರನ್​ ಕೊಟ್ಟಿದ್ದ. ಅದೇ ಪಂದ್ಯದಲ್ಲಿ ಎಲ್ಲರೂ ಆವರೇಜ್​ 40ಕ್ಕೂ ಹೆಚ್ಚು ರನ್​ ಕೊಟ್ಟಿದ್ದರು. ಅಷ್ಟು ಅದ್ಭುತವಾಗಿ ಪ್ರದರ್ಶನ ನೀಡಿದ್ರೂ ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿಜಯ್​ಕುಮಾರ್​ ವೈಶಾಕ್​​ಗೆ ಆರ್​​ಸಿಬಿ ಅವಕಾಶ ನೀಡಲಿಲ್ಲ. ಹಾಗಾಗಿ ಆರ್​​ಸಿಬಿ ವಿರುದ್ಧ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಚೆನ್ನಾಗಿ ಆಡುತ್ತಿದ್ದ ಕನ್ನಡಿಗನನ್ನು ಬೆಂಚ್​​ ಕಾಯಿಸಿದ್ದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ಬ್ಯಾಕ್​ ಟು ಬ್ಯಾಕ್ ಹೀನಾಯ ​ಸೋಲು; ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿಗೆ ಅವಕಾಶ ಇದ್ಯಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದ ಆಟಗಾರನಿಗೆ ಅವಮಾನ ಮಾಡಿದ ಆರ್​​ಸಿಬಿ; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/03/RCB_Squad.jpg

Load More