newsfirstkannada.com

RCB ಅಭಿಮಾನಿಗಳ ಅಬ್ಬರಕ್ಕೆ ಧೋನಿ ದಾಖಲೆ ಬ್ರೇಕ್​.. ಇಲ್ಲಿ ಫ್ಯಾನ್ಸ್​ ಕೂಡ ರೆಕಾರ್ಡ್​ ಬ್ರೇಕ್​ ಮಾಡ್ತಾರೆ..!

Share :

Published March 27, 2024 at 1:25pm

Update March 27, 2024 at 1:27pm

  ಆರ್​​ಸಿಬಿ ಲಾಯಲ್​​ ಫ್ಯಾನ್ಸ್​ ಮಿರಿಸೋರೇ ಇಲ್ಲ ಬಿಡಿ..!

  ಕಿಂಗ್​​ಡಮ್​ನಲ್ಲಿ ಕೊಹ್ಲಿ ದರ್ಬಾರ್​.. ಫ್ಯಾನ್ಸ್ ಫುಲ್​ ಖುಷ್

  ಕ್ಯಾಚ್​ ಹಿಡಿದ ಕೊಹ್ಲಿ... ಅಭಿಮಾನಿಗಳ ಹರ್ಷೋದ್ಘಾರ

ಆರ್​​​ಸಿಬಿ ಆಟಗಾರರು ಮಾತ್ರವಲ್ಲ.. ಆರ್​​ಸಿಬಿ ಫ್ಯಾನ್ಸ್​ ಕೂಡ ರೆಕಾರ್ಡ್​ ಬ್ರೇಕ್​ ಮಾಡ್ತಾರೆ. ಕ್ರಿಕೆಟ್​ ಲೋಕದಲ್ಲಿ ಆರ್​​ಸಿಬಿ ಫ್ಯಾನ್ಸ್​ನ ಮಿರಿಸೋರೆ ಇಲ್ಲ ಅನ್ನೋ ಮಾತಿದ್ಯಲ್ಲ. ಅದು 100% ಸತ್ಯ.. ಇವ್ರು​ ಲಾಯಲ್ ಫ್ಯಾನ್ಸ್​​​ ಮಾತ್ರವಲ್ಲ.. ಲೌಡೆಸ್ಟ್​​ ಫ್ಯಾನ್ಸ್​​ ಕೂಡ ಹೌದು.
ಸೋಲೇ ಇರಲಿ.. ಗೆಲುವೇ ಬರಲಿ.. ತಂಡದ ಬೆಂಬಲಕ್ಕೆ ಸದಾ ನಿಂತಿರ್ತಾರೆ. ಐಪಿಎಲ್​ ಆರಂಭವಾಗಿ 16 ವರ್ಷ ಆಯ್ತು. ಪ್ರತಿ ಬಾರಿ ಕಪ್​ ನಮ್ದೇ ಅನ್ನೋದು ತಪ್ಪಿಲ್ಲ. ಕಪ್​ ಕೂಡ ನಮ್ದಾಗಿಲ್ಲ. ಅಭಿಮಾನಿಗಳ ಅಭಿಮಾನ ಮಾತ್ರ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ, ಸೀಸನ್​ನಿಂದ ಸೀಸನ್​ಗೆ ಹೆಚ್ಚಾಗುತ್ತಲೇ ಇದೆ.

ಕಿಂಗ್​​ಡಮ್​ನಲ್ಲಿ ಕೊಹ್ಲಿ ದರ್ಬಾರ್​.. ಫ್ಯಾನ್ಸ್ ಫುಲ್​ ಖುಷ್​
ಡೆಲ್ಲಿಯ ವಿರಾಟ್​ ಕೊಹ್ಲಿ ಬೆಂಗಳೂರು 2ND ಹೋಮ್​. ಅಭಿಮಾನಿಗಳೇ ಹೇಳುವಂತೆ ವಿರಾಟ್​ ಕೊಹ್ಲಿ ಕಿಂಗ್​​, ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್​ಡಮ್​. ಮೈದಾನಕ್ಕೆ ಕೊಹ್ಲಿ ಕಾಲಿಟ್ರೆ ಸಾಕು ಕೊಹ್ಲಿ.. ಕೊಹ್ಲಿ ಎಂಬ ಕೂಗು ಮುಗಿಲುಮುಟ್ಟುತ್ತೆ. ಕೊಹ್ಲಿ ಆಡಿದ್ರೆ ಕೇಳಬೇಕಾ? ಫ್ಯಾನ್ಸ್​ ಸಂಭ್ರಮದ ಕಿರುಚಾಟ ನೆಕ್ಸ್ಟ್​ ಲೆವೆಲ್​ನಲ್ಲಿರುತ್ತೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಾಗಿದ್ದು ಅದೇ.

ಕ್ಯಾಚ್​ ಹಿಡಿದ ಕೊಹ್ಲಿ.. ಅಭಿಮಾನಿಗಳ ಹರ್ಷೋದ್ಘಾರ..!
ಪಂದ್ಯದ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಬ್ಯಾಟ್​ ಹಿಡಿದು ಘರ್ಜಿಸಿದ್ರು. ಪಂಜಾಬ್​ ಬೌಲರ್​ಗಳ ದಾಳಿಯನ್ನ ಚಿಂದಿ ಚಿತ್ರಾನ್ನ ಮಾಡಿ ಗೆಲುವಿನ ರೂವಾರಿಯಾದ್ರು. ಆದ್ರೆ, ಪಂದ್ಯದ ಆರಂಭದಲ್ಲಿ ಅಂದ್ರೆ, ಪಂಜಾಬ್​ ಬ್ಯಾಟಿಂಗ್​ ವೇಳೆ 3ನೇ ಓವರ್​​ನಲ್ಲಿ ಕೊಹ್ಲಿ, ಜಾನಿ ಬೇರ್​ಸ್ಟೋ ಕ್ಯಾಚ್​ ಹಿಡಿದ್ರು. ಆ ಕ್ಯಾಚ್ ಕಂಡ ಫ್ಯಾನ್ಸ್​​, ಅಕ್ಷರಶಃ ರೂಫ್​ಟಾಪ್​ ಕಿತ್ತೋಗಬೇಕು ಹಂಗೆ ಕಿರುಚಿದ್ರು. ಆ ಫ್ಯಾನ್ಸ್​ ಸಂಭ್ರಮ ಐಪಿಎಲ್​​, ದಾಖಲೆಯನ್ನೇ ಬ್ರೇಕ್​ ಮಾಡಿದೆ.

ಲಾಯಲ್​ ಫ್ಯಾನ್ಸ್ ಮಾತ್ರವಲ್ಲ.. ಲೌಡೆಸ್ಟ್​ ಫ್ಯಾನ್ಸ್​​ ಕೂಡ
ಕಳೆದ ಸೀಸನ್​ ಐಪಿಎಲ್​ನಲ್ಲಿ ಧೋನಿ ಜಾತ್ರೆ ನಡೆದಿತ್ತು. ಹೋದಲ್ಲಿ.. ಬಂದಲ್ಲಿ ಫ್ಯಾನ್ಸ್​ ಜೈಕಾರ ಮುಗಿಲು ಮುಟ್ಟಿತ್ತು. ಚೆಪಾಕ್​ನಲ್ಲಂತೂ ಧೋನಿ ಕಣಕ್ಕಿಳಿದ್ರೆ ಸಾಕು 110ರಿಂದ 120 ಡೆಸಿಬಲ್​ನಷ್ಟು ಶಬ್ಧದ ತೀವ್ರತೆ ಇರ್ತಿತ್ತು. ಧೋನಿ ಎಂಟ್ರಿ ವೇಳೆ ಬಂದ 120 ಡೆಸಿಬಲ್​​ ಸೌಂಡ್​ ಈವರೆಗಿನ ಐಪಿಎಲ್​ನ ದಾಖಲೆಯಾಗಿತ್ತು. ಪಂಜಾಬ್​ ವಿರುದ್ಧ ಕೊಹ್ಲಿ, ಬೇರ್​​ಸ್ಟೋ ಕ್ಯಾಚ್​ ಹಿಡಿದಾಗ ಆ ದಾಖಲೆ ಬ್ರೇಕ್​ ಆಗಿದೆ. ಆ ಸಮಯದ ಫ್ಯಾನ್ಸ್​ ಜೈಕಾರದ ತೀವ್ರತೆ 124 ಡೆಸಿಬಲ್​ನಷ್ಟಿತ್ತು.

ಲಾಯಲ್​ ಫ್ಯಾನ್ಸ್​.. ಇದು ಗಡಿಗಳ ಮೀರಿದ ಪ್ರೀತಿ.!
ಆರ್​​ಸಿಬಿ ಮತ್ತು ಅಭಿಮಾನಿಗಳದ್ದು ಗಡಿ, ದೇಶ, ಭಾಷೆಯನ್ನ ಮೀರಿದ ಪ್ರೀತಿ. ಬೆಂಗಳೂರು, ಕರ್ನಾಟಕ ಮಾತ್ರವಲ್ಲ.. ತಮಿಳುನಾಡಲ್ಲೂ ಫ್ಯಾನ್ಸ್ ಪ್ರೀತಿಗೆ ಬರವಿಲ್ಲ. ಮೊದಲ ಪಂದ್ಯದಲ್ಲಿ ಆರ್​​ಸಿಬಿ ಸೋತರೂ ಅಲ್ಲಿನ ಲೇಡಿ ಫ್ಯಾನ್​ ಒಬ್ರು ಈ ಸಲ ಕಪ್​ ನಮ್ದೇ ಅಂದಿದ್ದಾರೆ. ಆ ಪ್ರೀತಿಯ ವಿಡಿಯೋ ಸೆನ್ಸೇಷನ್​ ಸೃಷ್ಟಿಸಿದೆ.

ಇದನ್ನೂ ಓದಿ: ಜಸ್ಟ್​ 22 ವರ್ಷಕ್ಕೇ IAS ಅಧಿಕಾರಿ.. ಮೊದಲ ಪ್ರಯತ್ನದಲ್ಲೇ ಟಾಪರ್ ಆದ ಯುವತಿಯ ಸ್ಫೂರ್ತಿದಾಯಕ ಸ್ಟೋರಿ..!

ನೀವೇ ನೋಡಿರ್ತಿರ. ಆ್ಯಕ್ಚುಲಿ 120 ರನ್​ ಹೊಡಿಬಹುದು ಅಂತ ಅಂದುಕೊಂಡಿದ್ದೆ. ಮೊದಲ 10 ಓವರ್​​​​​ ಜಾಸ್ತಿ ರನ್ ಬರ್ಲಿಲ್ಲ. ಆದ್ರು 173 ರನ್ ಹೊಡೆದ್ರು. ಡಿಫೆಂಡ್​ ಮಾಡಿಕೊಳ್ಳುವ ಸ್ಕೋರ್​​ ಹೊಡೆದ್ರು. ಆದರೆ ಬೌಲರ್ಸ್​ ತಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಲಿಲ್ಲ.ತುಂಬಾ ಮಿಸ್ ಫೀಲ್ಡ್ ಮಾಡಿದ್ರು. ತುಂಬಾ ಚೆನ್ನಾಗಿ ಮಾಡಬಹುದಿತ್ತು. ಆದರೂ ಪರ್ವಾಗಿಲ್ಲ. ಇದು ಫಸ್ಟ್ ಮ್ಯಾಚ್​​. ಮುಂದಿನ ಮ್ಯಾಚ್​ ಗೆಲ್ಲುತ್ತೇವೆ. ಈ ಸಲ ಕಪ್​​ ನಮ್ಮದೇ-ಆರ್​ಸಿಬಿ, ಅಭಿಮಾನಿ

ಇಷ್ಟೇ ಅಲ್ಲ.. ಆರ್​​​ಸಿಬಿ ಪ್ರೇಮ ಭಾರತದ ಗಡಿಯನ್ನೂ ದಾಟಿದೆ. ಪಂಜಾಬ್​ ವಿರುದ್ಧದ ಫೈಟ್​ ನೋಡಲು ಆರ್​​ಸಿಬಿ ಜೆರ್ಸಿ ತೊಟ್ಟು ಚಿನ್ನಸ್ವಾಮಿ ಮೈದಾನಕ್ಕೆ ಬಂದ ವಿದೇಶಿಗರು, ಅವರು ಗೆಲುವನ್ನ ಸಂಭ್ರಮಿಸಿದ ರೀತಿಯೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಅದೇನೇ ಹೇಳಿ, ಆರ್​​​ಸಿಬಿ ಫ್ಯಾನ್ಸ್​ನ ಮೀರಿಸೋರೇ ಇಲ್ಲ ಅನ್ನೋ ಮಾತನ್ನ ತಳ್ಳಿ ಹಾಕೋಕೆ ಸಾಧ್ಯಾನೇ ಇಲ್ಲ. ಜೀವಕ್ಕಿಂತ ಹೆಚ್ಚು ಪ್ರೀತಿ ತೋರಿಸುವ ಅಭಿಮಾನಿಗಳ ಕಪ್​ ಕನಸು ಈ ಬಾರಿಯಾದ್ರೂ ಈಡೇರಲಿ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಅಭಿಮಾನಿಗಳ ಅಬ್ಬರಕ್ಕೆ ಧೋನಿ ದಾಖಲೆ ಬ್ರೇಕ್​.. ಇಲ್ಲಿ ಫ್ಯಾನ್ಸ್​ ಕೂಡ ರೆಕಾರ್ಡ್​ ಬ್ರೇಕ್​ ಮಾಡ್ತಾರೆ..!

https://newsfirstlive.com/wp-content/uploads/2024/03/RCB-17.jpg

Load More