newsfirstkannada.com

ಜಸ್ಟ್​ 22 ವರ್ಷಕ್ಕೇ IAS ಅಧಿಕಾರಿ.. ಮೊದಲ ಪ್ರಯತ್ನದಲ್ಲೇ ಟಾಪರ್ ಆದ ಯುವತಿಯ ಸ್ಫೂರ್ತಿದಾಯಕ ಸ್ಟೋರಿ..!

Share :

Published March 27, 2024 at 1:04pm

    UPSC ಪರೀಕ್ಷೆ ಬರೀಬೇಕು ಅನ್ಕೊಂಡಿದ್ರಾ ಈ ಸ್ಟೋರಿ ಓದಿ

    SSLC, PUCಯಲ್ಲಿ ಜಿಲ್ಲೆಗೆ ಟಾಪರ್ ಬಂದ ಯುವತಿ

    ಕೋಚಿಂಗ್ ಸೆಂಟರ್​​​​ಗೆ ಹೋಗಲಿಲ್ಲ, ಮೊದಲ ಪ್ರಯತ್ನದಲ್ಲೇ ಪಾಸ್..!

ಸಾಧನೆಯ ಅದೆಷ್ಟೋ ಕನಸುಗಳು ಕಮರಿ ಹೋಗಿ ಬಿಡುತ್ತವೆ. ಕಾರಣ, ಎದುರಾಗುವ ಸಂಕಷ್ಟಗಳು, ಸವಾಲುಗಳು, ಬದ್ಧತೆ ಮತ್ತು ಸಂಕಲ್ಪ ಇಲ್ಲದಿರೋದು. ಕೆಲವರ ಹೆಗ್ಗುರುತಿನ ಸಾಧನೆಗಳನ್ನು ಕಂಡಾಗ, ಕೇಳಿದಾಗ ನಮ್ಮ ಅಂತರಾಳದಲ್ಲೂ ಎಲ್ಲೋ ಹುದುಗಿದ್ದ ಕನಸುಗಳು ಮತ್ತೆ ಚಿಗುರೊಡೆಯುತ್ತವೆ. ನೀವು ಕೂಡ ಅಂತಹುದೇ ಕನಸು ಕಂಡಿದ್ದರೆ, 22 ವರ್ಷದ ಈ ಹೆಣ್ಮಗಳ ಸ್ಟೋರಿ ನಿಮಗೆ ಸ್ಫೂರ್ತಿ ತುಂಬುವುದರಲ್ಲಿ ಎರಡು ಮಾತಿಲ್ಲ.

ಸ್ಪರ್ಧಾತ್ಮಕವಾಗಿರುವ ಇಂದಿನ ದಿನಮಾನದಲ್ಲಿ ಯುಪಿಎಸ್​​ಎಸಿ (UPSC: Union Public Service Commission) ಪರೀಕ್ಷೆ ಪರೀಕ್ಷೆ ಪಾಸ್ ಮಾಡುವ ವಿಚಾರ ಸಾಮಾನ್ಯದಲ್ಲ. ನಾಗರಿಕರ ಸೇವೆ ಮಾಡುವ ಕನಸು ಕಂಡಿರುವ ಅದೆಷ್ಟೋ ಹಲವು ವರ್ಷಗಳಿಂದ ನಿರಂತರ ಓದಿನಲ್ಲಿ ಮಗ್ನರಾಗಿರುತ್ತಾರೆ. ಹಗಲು ರಾತ್ರಿ ಓದಿ, ಓದಿ ಮೂರ್ನಾಲ್ಕು ಬಾರಿ ಪರೀಕ್ಷೆ ಬರೆದರೂ ಪಾಸ್ ಆಗಿದೆ ನಿರಾಸೆಯಿಂದ ಎಳ್ಳು-ನೀರು ಬಿಟ್ಟವರೂ ಇದ್ದಾರೆ. ಆದರೆ UPSC ಸಿವಿಲ್ ಸರ್ವೀಸ್ ಎಕ್ಸಾಂನ ಮೊದಲ ಅಟೆಮ್ಟ್​​ನಲ್ಲೇ ಪಾಸ್ ಮಾಡಿ, ಕೇವಲ 22 ವರ್ಷಕ್ಕೇ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಅನನ್ಯಾ ಸಿಂಗ್ ಇಂದು ನಮ್ಮ ಮುಂದೆ ವಿಶೇಷವಾಗಿ ಕಾಣ್ತಿದ್ದಾರೆ.

ಇದನ್ನೂ ಓದಿ: ಬಹಳ ದಿನಗಳ ಆಸೆ ಈಡೇರಿಸಿಕೊಂಡ ಅದಿತಿ ಪ್ರಭುದೇವ; ಅವಳಿ ಜವಳಿ ಆಗಲಿ ಎಂದ ಫ್ಯಾನ್​!

ಅನನ್ಯಾ ಸಿಂಗ್ ಮೂಲತಃ ಉತ್ತರ ಪ್ರದೇಶದ ಪ್ರಯಾಗ್​ರಾಜ್ ಮೂಲದವರು. ಎಸ್​ಎಸ್​ಎಲ್​ಸಿ ಮತ್ತು ಸೆಕೆಂಡ್ ಪಿಯುಸಿಯಲ್ಲಿ ಜಿಲ್ಲೆಗೇ ಮೊದಲ ಸ್ಥಾನ ಪಡೆದು ಫೇಮ್​​ ಆಗಿದ್ದ ಹುಡುಗಿ, ಇದೀಗ ಮೋಸ್ಟ್ ಕಾಂಪಿಟೆಟೀವ್ ಎಕ್ಸಾಂ (UPSC) ಕೂಡ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ಇನ್ನು ಮುಖ್ಯ ವಿಚಾರ ಏನೆಂದರೆ ಅನನ್ಯಾ ಅವರು ಟ್ರೈನಿಂಗ್​ಗೆ ಎಂದು ಯಾವುದೇ ಕೋಚಿಂಗ್ ಸೆಂಟರ್​ಗೆ ಹೋದವರಲ್ಲ.

ಪ್ರಯಾಗ್​ರಾಜ್​​ನಲ್ಲಿರುವ ಸೆಂಟ್ ಮೇರಿ ಕಾನ್ವೆಂಟ್ ಸ್ಕೂಲ್​​ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. 10 ನೇ ತರಗತಿಯಲ್ಲಿ ಶೇಕಡಾ 96 ರಷ್ಟು ಮಾರ್ಕ್ಸ್​ ತೆಗೆದರೆ, ದ್ವಿತಿಯ ಪಿಯುಸಿಯಲ್ಲಿ ಶೇಕಡಾ 98.25 ರಷ್ಟು ಮಾರ್ಕ್ಸ್​ ಪಡೆದು ಟಾಪರ್ ಆಗಿದ್ದರು. CISCE ಬೋರ್ಡ್​ನ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನವನ್ನು ಅಲಂಕರಿಸಿದರು. ನಂತರ ದೆಹಲಿಯ ಶ್ರೀ ರಾಮ್ ಕಾಲೇಜು ಕಾಮರ್ಸ್​ನಲ್ಲಿ ಅರ್ಥಶಾಸ್ತ್ರದ ಮೇಲೆ ಪದವಿ ಪಡೆದುಕೊಂಡರು.

ಇನ್ನು ಸಿವಿಲ್ ಸರ್ವೆಂಟ್ ಆಗಬೇಕು ಅನ್ನೋದು ಅನನ್ಯಾ ಅವರ ಬಾಲ್ಯದ ಕನಸು. ಅದೇ ಕಾರಣಕ್ಕೆ 2019 ರಿಂದ UPSC ಪರೀಕ್ಷೆಗೆ ತಯಾರಿ ನಡೆಸಿದ್ದರು. ಅಂತೆಯೇ ಪರೀಕ್ಷೆ ಬರೆದು ಇಡೀ ದೇಶಕ್ಕೆ 51ನೇ ಱಂಕ್ ಬಂದರು. ಅವರೇ ಹೇಳುವಂತೆ 51ನೇ ಱಂಕ್ ಬರುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲವಂತೆ. ನಿಜಕ್ಕೂ ಫಲಿತಾಂಶ ನೋಡಿ ನನಗೆ ಅಚ್ಚರಿ ಆಗಿದೆ. ಈಗ ನಾನು ಬಾಲ್ಯದಲ್ಲಿ ಕಂಡ ಕನಸು ನನಸಾಗಿದೆ ಎಂದು ಹೇಳುತ್ತಾರೆ ಅನನ್ಯ.

ಅನನ್ಯಾ ಸಿಂಗ್​ಗೆ ಸಂಗೀತ ಎಂದರೆ ಪಂಚಪ್ರಾಣ. ಮ್ಯೂಸಿಕ್ ಮೇಲೆ ವಿಶೇಷ ಆಕರ್ಷಣೆ ಹೊಂದಿರುವ ಅವರು, ಪಿಯಾನು ನುಡಿಸುವಲ್ಲಿ ಪರಿಣಿತರು. ಐಎಎಸ್​ ಅಧಿಕಾರಿ ಅನನ್ಯಾ ಸಿಂಗ್​ಗೆ ಇದೀಗ ವೆಸ್ಟ್​ ಬೆಂಗಾಲ್​​​ಗೆ ಪೋಸ್ಟ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್​ 22 ವರ್ಷಕ್ಕೇ IAS ಅಧಿಕಾರಿ.. ಮೊದಲ ಪ್ರಯತ್ನದಲ್ಲೇ ಟಾಪರ್ ಆದ ಯುವತಿಯ ಸ್ಫೂರ್ತಿದಾಯಕ ಸ್ಟೋರಿ..!

https://newsfirstlive.com/wp-content/uploads/2024/03/ANANYA-SINGH.jpg

Load More