/newsfirstlive-kannada/media/post_attachments/wp-content/uploads/2024/03/RCB-18.jpg)
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದ. ಇದನ್ನ ನೀವು ನೋಡಿರ್ತಿರಾ. ಆದ್ರೆ, ಅದಾದ ಬಳಿಕ ಏನಾಯ್ತು ಅಂತಾ ನಿಮಗೆ ಗೊತ್ತಾ? ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್ ನಿಗಿನಿಗಿ ಕೆಂಡಕಾರಲು ಶುರುಮಾಡಿದ್ದಾರೆ.
ಇದನ್ನೂ ಓದಿ: 38 ಸಿಕ್ಸ್, 33 ಬೌಂಡರಿ, 523 ರನ್..! ರನ್.. ರನ್.. ರನ್.. ಹೈದ್ರಾಬಾದ್ನಲ್ಲಿ ರನ್ ಮಳೆ ಸುರಿದ ಕಂಪ್ಲೀಟ್ ಕಹಾನಿ..!
ವಿರಾಟ್ ಕೊಹ್ಲಿಯನ್ನ ಒಂದು ಬಾರಿ ಮುಟ್ಟ ಬೇಕು, ಮಾತಾಡಿಸಬೇಕು ಅನ್ನೋದು ದೇವರಂತೆ ಆರಾಧಿಸೋ ಅಭಿಮಾನಿಗಳ ಮನದಾಳದ ಹಂಬಲ. ಈ ಒಂದು ಆಸೆಯನ್ನ ತೀರಿಸಿಕೊಳ್ಳಲು ಅಭಿಮಾನಿಗಳು ಎಂತದ್ದನ್ನ ಬೇಕಾದ್ರೂ ಮಾಡೋಕೆ ರೆಡಿಯಾಗಿರ್ತಾರೆ. ಪಂದ್ಯದ ನಡುವೆ ಮೈದಾನಕ್ಕೆ ನುಗ್ಗೋಕೂ ಹಿಂದೆ ಮುಂದೆ ನೋಡಲ್ಲ. ಮೊನ್ನೆ ನಡೆದ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ನಿಮಗೆ ನೆನಪಿರಬಹುದು. ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ ಸೀಸನ್ನ ಮೊದಲ ಪಂದ್ಯದಲ್ಲೇ, ಕಿಂಗ್ ಕೊಹ್ಲಿ ಘರ್ಜಿಸಿದ್ರು. ಕೊಹ್ಲಿ ಅಬ್ಬರಕ್ಕೆ ಪಂಜಾಬ್ ಥಂಡಾ ಹೊಡೆದ್ರೆ, ಫ್ಯಾನ್ಸ್ ಹುಚ್ಚೆದ್ದು ಕುಣಿದ್ರು. ಇದೇ ವೇಳೆ ಒಬ್ಬ ಫ್ಯಾನ್ ಮೈದಾನಕ್ಕೆ ಎಂಟ್ರಿ ಕೊಟ್ಟೇ ಬಿಟ್ಟ.
ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿದ ಕೊಹ್ಲಿ ಫ್ಯಾನ್
ಆರ್ಸಿಬಿ ಬ್ಯಾಟಿಂಗ್ನ ವೇಳೆ ಭದ್ರತಾ ನಿಯಮಗಳನ್ನ ಉಲ್ಲಂಘಿಸಿದ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗೇ ಬಿಟ್ಟ. ಸೀದಾ ವಿರಾಟ್ ಕೊಹ್ಲಿ ಬಳಿ ಓಡಿದ ಅಭಿಮಾನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ. ಜೊತೆಗೆ ಕೊಹ್ಲಿಯನ್ನ ತಬ್ಬಿಕೊಂಡು ಸಂಭ್ರಮಿಸಿದ. ಮೈದಾನಕ್ಕೆ ನುಗ್ಗಿ ಕೊಹ್ಲಿ ಆಶೀರ್ವಾದ ಪಡೆದು, ಹಗ್ ಮಾಡಿದ ಅಭಿಮಾನಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿತು. ಕೊಹ್ಲಿ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಫ್ಯಾನ್ ಧೈರ್ಯಕ್ಕೆ ಸಲಾಂ ಎಂದೆಲ್ಲ ಹೊಗಳಿದ್ರು. ಮೈದಾನದಿಂದ ಹೊರಬಂದ ಬಳಿಕ ಆತನಿಗೆ ಆಗಿದ್ದೇನು ಗೊತ್ತಾ..?
ಹಿಗ್ಗಾಮುಗ್ಗಾ ಥಳಿಸಿದ ಭದ್ರತಾ ಸಿಬ್ಬಂದಿ
ಕೊಹ್ಲಿ ಅಭಿಮಾನಿಯನ್ನ ಮೈದಾನದಿಂದ ಹೊರಗೆ ತಂದಿದ್ದೇ ತಡ, ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮನಬಂದಂತೆ ಅಭಿಮಾನಿಯನ್ನ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.
‘ಲಾಯಲ್ ಫ್ಯಾನ್’ಗೆ ಇದೆಂಥಾ ಶಿಕ್ಷೆ.?
ಅಭಿಮಾನಿ ನಿಯಮಗಳನ್ನ ಗಾಳಿಗೆ ತೂರಿ ಮೈದಾನಕ್ಕೆ ನುಗ್ಗಿದ್ದು ನಿಸ್ಸಂಶಯವಾಗಿ ತಪ್ಪು. ಆ ತಪ್ಪಿಗೆ ಈ ರೀತಿ ಶಿಕ್ಷೆಗೆ ಕೊಡೋದು ಎಷ್ಟು ಸರಿ.? ಆತನನ್ನ ಪೋಲಿಸ್ಗೆ ಒಪ್ಪಿಸಬೇಕಿತ್ತು. ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಕೊಡಬೇಕಿತ್ತು. ಅದನ್ನ ಬಿಟ್ಟು ಹೀಗೆ ಮನಬಂದಂತೆ ಥಳಿಸಿದ್ದು ಒಪ್ಪುವಂತಾ ವಿಚಾರವೇ ಅಲ್ಲ ಅನ್ನೋದು ಫ್ಯಾನ್ಸ್ ವಾದವಾಗಿದೆ.
RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್ ಗರಂ
ಲಾಯಲ್ ಫ್ಯಾನ್ಸ್ನ ಅಪರಿಮಿತ ಪ್ರೀತಿ, ಅಭಿಮಾನವೇ ಆರ್ಸಿಬಿಯ ಬಂಡವಾಳವಾಗಿದೆ. ಉಳಿದೆಲ್ಲಾ ಫ್ರಾಂಚೈಸಿಗಳಿಗೆ ಹೋಲಿಸಿದ್ರೆ, ಟಿಕೆಟ್ ವಿಚಾರದಲ್ಲಿ ದುಪ್ಪಟ್ಟು ಹಣ ಸುಲಿಗೆ ಮಾಡ್ತಿದೆ. ಆದ್ರೂ, ಅಭಿಮಾನ ಕಡಿಮೆಯಾಗಿಲ್ಲ. ಆ ಅಭಿಮಾನಿ ಮಾಡಿದ್ದು ತಪ್ಪೇ.! ಆದ್ರೂ, ಕನಿಷ್ಟ ಪಕ್ಷ ಆತನನ್ನ ಹೀಗೆ ಹಿಗ್ಗಾಮುಗ್ಗಾ ಥಳಿಸಿದಂತೆ ನೋಡಕೊಳ್ಳಬಹುದಾದ ಅವಕಾಶ ಆರ್ಸಿಬಿ ಮ್ಯಾನೇಜ್ಮೆಂಟ್ಗಿತ್ತು. ಆದ್ರೆ, ಮ್ಯಾನೇಜ್ಮೆಂಟ್ನ ಮೌನ ಅಭಿಮಾನಿಗಳನ್ನ ಕೆರಳುವಂತೆ ಮಾಡಿದೆ.
ಮೊನ್ನೆಯ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನದಿಂದ ವಿರಾಟ್ ಕೊಹ್ಲಿ ಕಾಲು ಹಿಡಿದ ಅಭಿಮಾನಿಯೊಬ್ಬನಿಗೆ ಈ ರೀತಿ ಕಾಲಲ್ಲಿ ತುಳಿಯೋದು ಎಷ್ಟು ಸರಿ.
ತಪ್ಪು ಮಾಡಿದ್ರೆ ಕಾನೂನು ಕ್ರಮವಾಗಲಿ ಆದ್ರೆ ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಆತನನ್ನು ತುಳಿದು ಹೊಡೆಯೋದು ಎಷ್ಟು ಸರಿ.@RCBTweets
ಇವರ ಮೇಲೆ ಕ್ರಮವಾಗಲಿ.@BlrCityPolice@CPBlrpic.twitter.com/4qsXZ0cYui— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) March 28, 2024
ಯಾರ್ ಯಾರಿಗೋ ಫ್ಯಾನ್ ಆಗಬೇಡಿ ನಿಮಗೆ ನೀವೇ ಫ್ಯಾನ್ ಆಗಿ.....ನಿಮಗೆ ಏನಾದ್ರೂ ಆದ್ರೆ ಯಾವನು ಬರಲ್ಲ ತಂದೆ ತಾಯಿ ನೆ ನಿಮ್ ಹೆಣಕ್ಕೆ ಅಳಬೇಕು ...ನಿಮ್ಮನ್ನ ಹೆತ್ತ ತಪ್ಪಿಗ್ ಅವರೇ ಕಣ್ಣೀರು ಹಾಕ್ತಾ ಇರಬೇಕು.......ಮನೇಲಿ ತಂದೆ ಅಥವಾ ತಾಯಿ ಬೈದರೆ ಹೊಡೆದ್ರೆ ನಾವ್ ಸುಮ್ನೆ ಇರಲ್ಲ ಅವರ ಮೇಲೆ ಕೈ ಮಾಡ್ತಾರೆ ....ಇಲ್ಲಿ ವದೆ ತಿಂತಾ ಇದಾನೆ
— Manjunath vakkund (@Manjunathvakku2) March 28, 2024
@imVkohli plz enquire this incident these people are treating you like god..but these security staff behaviour is painfull as virat and rcb fan's
— mallikarjun RCB❤️❤️ (@Mallika27792706) March 28, 2024
ನಮ್ಮ ರಾಯಚೂರು ಹುಡುಗ
— Yashwanth .S 🇮🇳 (@YashwanthS1707) March 28, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ