ವರ್ಷದ ಕೊನೆಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್!
ಈ ಮುನ್ನ ಐಪಿಎಲ್ ತಂಡಗಳು ರೀಟೈನ್ ಆಟಗಾರರ ಫೈನಲ್ ಮಾಡಬೇಕು
ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಆರ್ಸಿಬಿಯಿಂದ ಮಾಸ್ಟರ್ ಪ್ಲಾನ್
ವರ್ಷದ ಕೊನೆಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ ನಡೆಯಲಿದೆ. ಈ ಮುನ್ನವೇ ಎಲ್ಲಾ ಐಪಿಎಲ್ ತಂಡಗಳು ರೀಟೈನ್ ಆಟಗಾರರ ಫೈನಲ್ ಮಾಡಬೇಕಿದೆ. ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು ಅನ್ನೋ ಚರ್ಚೆಯನ್ನು ಬಿಸಿಸಿಐ ಅಧಿಕಾರಿಗಳು ಐಪಿಎಲ್ ತಂಡಗಳ ಮಾಲೀಕರೊಂದಿಗೆ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ. ಸಭೆ ಬಳಿಕ ಬಿಸಿಸಿಐ ಒಂದು ನಿರ್ಧಾರಕ್ಕೆ ಬರಲಿದೆ.
ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ ಹೊರತುಪಡಿಸಿ ಮತ್ಯಾರನ್ನು ರೀಟೈನ್ ಮಾಡಿಕೊಳ್ಳಲಿದೆ ಎಂಬ ಇನ್ನೂ ಸ್ಪಷ್ಟತೆ ಇಲ್ಲ. ಕನಿಷ್ಠ 4 ಮಂದಿಯನ್ನು ರೀಟೈನ್ ಮಾಡಿಕೊಂಡು ಉಳಿದ ಎಲ್ಲಾ ಆಟಗಾರರನ್ನು ಆರ್ಸಿಬಿ ರಿಲೀಸ್ ಮಾಡಲಿದೆ. ಇದರ ಮಧ್ಯೆ ಆರ್ಸಿಬಿಗೆ ಮಾಜಿ ಆಟಗಾರ ಚಹಾಲ್ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಮುನ್ಸೂಚನೆ ಸಿಕ್ಕಿದೆ.
ದಿನೇಶ್ ಕಾರ್ತಿಕ್ ಅವರನ್ನು ಈಗಾಗಲೇ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. 2025ರ ಐಪಿಎಲ್ ಸೀಸನ್ಗೆ ಎಬಿ ಡಿವಿಲಿಯರ್ಸ್ ಕೂಡ ಆರ್ಸಿಬಿಗೆ ಬರೋ ಸಾಧ್ಯತೆ ಇದೆ. ಇದರ ಮಧ್ಯೆ ಎಬಿಡಿ ಮತ್ತು ಚಹಾಲ್ ಮೀಟ್ ಆಗಿದ್ದು, ಆರ್ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರ ಫೋಟೋ ಪೋಸ್ಟ್ ಮಾಡಿದೆ. ಇಬ್ಬರ ಭೇಟಿ ಬೆನ್ನಲ್ಲೇ ಚಹಾಲ್ ಆರ್ಸಿಬಿಗೆ ರೀ ಎಂಟ್ರಿ ಪಕ್ಕಾ ಎಂದು ಹೇಳಲಾಗುತ್ತಿದೆ.
Friendship on point. ❤️ pic.twitter.com/w9EkxkQ2Fb
— Royal Challengers Bengaluru (@RCBTweets) July 30, 2024
ಆರ್ಸಿಬಿ ವಿರುದ್ಧ ಚಹಾಲ್ ಅಸಮಾಧಾನ..!
ಈ ಹಿಂದೆ ಆರ್ಸಿಬಿ ತನ್ನನ್ನು ಕೈ ಬಿಟ್ಟಿದ್ದಾಗಿ ಚಹಾಲ್ ಆಕ್ರೋಶ ಹೊರಹಾಕಿದ್ರು. ಆರ್ಸಿಬಿ ತಂಡಕ್ಕಾಗಿ ನಾನು 8 ವರ್ಷಗಳ ಕಾಲ ಆಡಿದ್ದೆ. ಆದರೆ ತಂಡದಿಂದ ನನ್ನನ್ನು ಕೈ ಬಿಡುವಾಗ ಒಂದು ಫೋನ್ ಕರೆ ಕೂಡ ಮಾಡಿ ಮಾಹಿತಿ ನೀಡಿರಲಿಲ್ಲ. ನಾನು ಆರ್ಸಿಬಿಗಾಗಿ 114 ಪಂದ್ಯಗಳನ್ನು ಆಡಿದ್ದೆ. ಬೆಂಗಳೂರು ತಂಡ ನನ್ನ ಸಾಮರ್ಥ್ಯದ ಪ್ರದರ್ಶನಕ್ಕೆ ಅವಕಾಶ ನೀಡಿತು. ವಿರಾಟ್ ನನ್ನ ಮೇಲೆ ಬಹಳ ನಂಬಿಕೆ ಇಟ್ಟಿದ್ದರು ಎಂದಿದ್ದರು ಚಹಾಲ್.
ಇದನ್ನೂ ಓದಿ: ಇನ್ಸ್ಟಾದಲ್ಲಿ ಆರ್ಸಿಬಿಯನ್ನು ಅನ್ಫಾಲೋ ಮಾಡಿದ ಗ್ಲೆನ್ ಮ್ಯಾಕ್ಸ್ವೆಲ್.. ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್