/newsfirstlive-kannada/media/post_attachments/wp-content/uploads/2024/07/Chahal_RCB.jpg)
ಹೊಸ ಸೀಸನ್​​​​ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್​​​​​​ ಮೇಲೆ ಕಣ್ಣಿಟ್ಟಿದೆ. ಫಾಫ್​ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್​ ಕ್ಯಾಪ್ಟನ್​​ ಹುಡುಕಾಟದಲ್ಲಿದೆ.
ಇದಕ್ಕಾಗಿ ಈಗಾಗಲೇ ಲಿಸ್ಟ್​ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಆಟಗಾರರಿಗೆ ಗಾಳ ಹಾಕುವ ಮೆಗಾ ಪ್ಲಾನ್​​ನಲ್ಲಿ ಮಾಡಿದೆ. ಕನ್ನಡಿಗ ಕೆ.ಎಲ್.ರಾಹುಲ್​​, ರೋಹಿತ್, ಹಾರ್ದಿಕ್, ಶ್ರೇಯಸ್ ಅಯ್ಯರ್​ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲಿ ದಿಢೀರ್ ಬದಲಾವಣೆ, ಓರ್ವ ಸದಸ್ಯನಿಗೆ ಕೊಕ್, ಹೊಸ ಎಂಟ್ರಿ..!
ಕೆಎಲ್ ರಾಹುಲ್​ರನ್ನು ಎಲ್​ಎಸ್​ಜಿ ಕೈಬಿಟ್ಟರೆ ಆರ್​ಸಿಬಿ ಮೊದಲ ಆದ್ಯತೆ ರಾಹುಲ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್​ನಿಂದ ಹಾರ್ದಿಕ್ ಪಾಂಡ್ಯ ಅಥವಾ ರೋಹಿತ್ ಶರ್ಮಾ ಇಬ್ಬರಲ್ಲಿ ಒಬ್ಬರು ಹೊರ ಬರುವ ಲಕ್ಷಣಗಳಿವೆ. ಒಂದು ವೇಳೆ ಇವರಿಬ್ಬರಲ್ಲಿ ಯಾರಾದರೂ ಒಬ್ಬರನ್ನ ಕ್ಯಾಚ್ ಹಾಕಿಕೊಳ್ಳುವ ಲೆಕ್ಕಾಚಾರ ಕೂಡ ಇದೆ. ಜೊತೆಗೆ ಮುಂಬೈ ಇಂಡಿಯನ್ಸ್​​ನ ದೈತ್ಯ ಬ್ಯಾಟ್ಸ್​ಮನ್​​ ಸೂರ್ಯನಿಗೆ ಕೆಕೆಆರ್​ ಗಾಳ ಹಾಕಿದೆ. ಒಂದು ವೇಳೆ ಸೂರ್ಯ ಕೆಕೆಆರ್​ಗೆ ಹೋದರೆ ಹಾಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೊರಬೀಳಲಿದ್ದಾರೆ. ಅದು ಸಂಭವಿಸಿದರೆ ಅಯ್ಯರ್​​ ಅವರನ್ನು ಕ್ಯಾಪ್ಟನ್ಸಿಗೆ ಕರೆದುಕೊಂಡು ಬರಬಹುದು ಅನ್ನೋ ಐಡಿಯಾದಲ್ಲಿ ಆರ್​ಸಿಬಿ ಇದೆ ಎಂದು ಹೇಳಲಾಗಿದೆ.
ಬೋಲ್ಡ್​ ಡಿಸಿಷನ್​​​​​​​​​..?
ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್​ ಮೇಲೆ ಕಣ್ಣಿಟ್ಟಿದೆ ನಿಜ. ಆದರೆ ಮೆಗಾ ಹರಾಜಿನಲ್ಲಿ ಇವರು ಸಿಗಲಿಲ್ಲ ಅಂದ್ರೆ ಆರ್​ಸಿಬಿ ವಿರಾಟ್​ ಕೊಹ್ಲಿಯನ್ನೇ ನಾಯಕನಾಗಿ ನೇಮಿಸುವ ಧೃಡ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ. ವಿರಾಟ್​ ನಾಯಕತ್ವದಲ್ಲಿ ಆರ್​ಸಿಬಿ ಟ್ರೋಫಿ ಗೆದ್ದಿಲ್ಲ ಅನ್ನೋದು ಬಿಟ್ರೆ, ಉಳಿದಂತೆ ಸಕ್ಸಸ್​ಫುಲ್ ನಾಯಕನೇ. ವಿರಾಟ್​​​​ಗೆ, ಮತ್ತೆ ನಾಯತಕತ್ವ ನೀಡಿದ್ರೆ. ತಂಡದಲ್ಲಿ ಹೊಸ ಹುಮ್ಮಸ್ಸು ಬರಲಿದೆ. ವಿರಾಟ್​ ಈ ಆಫರ್​ನ ಒಪ್ತಾರಾ ಅನ್ನೋದು ದೊಡ್ಡ ಪ್ರಶ್ನೆ ಆಗಿದೆ.
ಇದನ್ನೂ ಓದಿ:RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!​
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್