ಮೆಗಾ ಹರಾಜಿನಲ್ಲಿ ಕೋಟಿ ಶೂರರಾದರೂ ಅಚ್ಚರಿ ಇಲ್ಲ
ಜಾಕ್ಪಾಟ್ ನಿರೀಕ್ಷೆಯಲ್ಲಿ ಕನ್ನಡಿಗರು, ಅದೃಷ್ಟ ಯಾರಿಗೆ?
ಬ್ಯಾಟಿಂಗ್-ಬೌಲಿಂಗ್ನಲ್ಲಿ ಇವರದ್ದೇ ದರ್ಬಾರ್.. ಹೆಂಗಿದೆ?
ಐಪಿಎಲ್ ಮೆಗಾ ಆಕ್ಷನ್ಗೆ ಹೆಚ್ಚೇನು ತಿಂಗಳು ಬಾಕಿ ಉಳಿದಿಲ್ಲ. ಈಗಾಗಲೇ ಗೆಲ್ಲೋ ಕುದುರೆಗಳಿಗೆ ಗಾಳ ಹಾಕಲು ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಮುಂಬರೋ ಹರಾಜಿನಲ್ಲಿ ಕನ್ನಡಿಗರೇ ಹಾಟ್ ಪಿಕ್ ಆಗಲಿದ್ದಾರೆ. ಅದಕ್ಕೆ ಕಾರಣ ಮಹಾರಾಜ ಟಿ20 ಟೂರ್ನಿ.
ಮಹಾರಾಜ ಟ್ರೋಫಿಯಲ್ಲಿ ರನ್ ಧಮಾಕ..!
ಮಹಾರಾಜ ಟ್ರೋಫಿ ಅಂತ್ಯ ಕಂಡಿದೆ. ಮೈಸೂರು ವಾರಿಯರ್ಸ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಟೂರ್ನಿಯಲ್ಲಿ ಕೆಲ ಆಟಗಾರರು ಮಾತ್ರ, ಐಪಿಎಲ್ ಫ್ರಾಂಚೈಸಿಗಳ ಮನ ಗೆದ್ದಿದ್ದಾರೆ. ಟೂರ್ನಿಯುದ್ದಕ್ಕೂ ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿರುವ ಇವರು, ವರ್ಷಾಂತ್ಯದಲ್ಲಿ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:Me Too ಕೇಸ್ನಲ್ಲಿ ಪ್ರೇಮಂ ನಟ ನಿವಿನ್ ಪೌಲಿ; 40 ವರ್ಷದ ಮಹಿಳೆಯಿಂದ ಗಂಭೀರ ಆರೋಪ
ಅನ್ಸೋಲ್ಡ್ ಕರುಣ್ಗೆ ಈ ಸಲ ಜಾಕ್ಪಾಟ್
ಮೈಸೂರು ವಾರಿಯರ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಕರುಣ್ ನಾಯರ್, ಮಹಾರಾಜ ಟೂರ್ನಿಯಲ್ಲಿ ಆಕ್ಷರಶಃ ನೆಕ್ಸ್ಟ್ ಲೆವೆಲ್ ಆಟವಾಡಿದ್ರು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದ ಕರುಣ್, ಮೈಸೂರಿಗೆ ಮಹಾರಾಜ ಪಟ್ಟ ತೊಡಿಸುವಲ್ಲಿ ನಿಜಕ್ಕೂ ಪ್ರಮುಖ ಪಾತ್ರವನ್ನೇ ವಹಿಸಿದ್ದರು.
ಮಹಾರಾಜ ಟೂರ್ನಿಯಲ್ಲಿ ಕರುಣ್ ನಾಯರ್
12 ಪಂದ್ಯಗಳನ್ನಾಡಿದ ಕರುಣ್, 56ರ ಸರಾಸರಿಯಲ್ಲಿ ಬರೋಬ್ಬರಿ 560 ರನ್ ಕೊಳ್ಳೆ ಹೊಡೆದರು. 5 ಅರ್ಧಶತಕ, 1 ಶತಕ ಸಿಡಿಸಿದ್ದ ನಾಯರ್, 181.22ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಮಿಡಲ್ ಆರ್ಡರ್ನ ಬಲವಾಗಿರುವ ಕರುಣ್ ಮೇಲೆ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಹೀಗಾಗಿ ಕಳೆದ ಬಾರಿ ಅನ್ಸೋಲ್ಡ್ ಆಗಿದ್ದ ಕರುಣ್, ಈ ಸಲ ಬಿಗ್ ಅಮೌಂಟ್ಗೆ ಸೇಲ್ ಆಗೋದು ಶತಸಿದ್ಧ..
ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್..!
ಬಿಗ್ ಹಿಟ್ಟರ್ ಮನೋಹರ್ಗೆ ಅದೃಷ್ಟ ಖುಲಾಯಿಸುತ್ತಾ?
ಮಹಾರಾಜದಲ್ಲಿ ನಿಜಕ್ಕೂ ಅಭಿನವ್ ಮನೋಹರ್ನ ಮನಮೋಹಕ ಆಟ ಕಣ್ಣಿಗೆ ಹಬ್ಬವೇ ಆಗಿತ್ತು. ಸಿಕ್ಸರ್ಗಳ ಬೋರ್ಗರೆತದಿಂದ ಸದ್ದು ಮಾಡಿದ ಮನೋಹರ್, ತಾನೆಂತ ಬಿಗ್ ಹಿಟ್ಟರ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಮಹಾರಾಜ ಟೂರ್ನಿಯಲ್ಲಿ ಅಭಿನವ್
10 ಪಂದ್ಯಗಳನ್ನಾಡಿದ ಮನೋಹರ್, 507 ರನ್ ಸಿಡಿಸಿದ್ದಾರೆ. 6 ಅರ್ಧಶತಕ ಬಾರಿಸಿರುವ ಅಭಿನವ್, 196.51ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಈತನ ಸ್ಫೋಟಕ ಬ್ಯಾಟಿಂಗ್ನಿಂದಲೇ ಫ್ರಾಂಚೈಸಿಗಳ ದಿಲ್ ಗೆದ್ದಿರುವ ಮನೋಹರ್ಗೆ, ಗುಜರಾತ್ ಟೈಟನ್ಸ್ ತಂಡದಲ್ಲೇ ಉಳಿಸಿಕೊಂಡರು ಅಚ್ಚರಿ ಇಲ್ಲ. ಅಕಸ್ಮಾತ್ ಕೈಬಿಟ್ಟರೆ ಕೋಟಿ ಕೋಟಿ ಜೇಬಿಗಿಳಿಸಿಕೊಳ್ಳೋದು ಪಕ್ಕಾ.
12 ಮ್ಯಾಚ್.. 292 ರನ್..
ಮನೋಜ್ ಬಾಂಡಗೆ, ಮೈಸೂರು ವಾರಿಯರ್ಸ್ ತಂಡದ ದಿ ರಿಯಲ್ ವಾರಿಯರ್ಸ್.. ಮೈಸೂರಿಗೆ ಮಹಾರಾಜ ಒಲಿಯಲು ಈತನೇ ಪ್ರಮುಖ ಕಾರಣ. ಈತನ ಕ್ಲೀನ್ ಹಿಟ್ ಬ್ಯಾಟಿಂಗ್ಗೆ ಮಾರು ಹೋಗುವ ಕ್ರಿಕೆಟ್ ಅಭಿಮಾನಿಗಳಿಲ್ಲ. ಮನೋಜ್ ಭಾಂಡಗೆಯ ವಿನಾಶಕಾರಿಯ ಬ್ಯಾಟಿಂಗ್ ಹಂಗಿತ್ತು. 12 ಪಂದ್ಯಗಳಿಂದ 292 ರನ್ ಸಿಡಿಸಿದ್ದ ಬಾಂಡಗೆ, ಬೌಲಿಂಗ್ನಲ್ಲೂ 8 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಮೆಗಾ ಹರಾಜಿಗೆ ಬಂದ್ರೆ ಧೂಳೆಬ್ಬಿಸೋದು ಪಕ್ಕಾ.
ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್-19 ತಂಡಕ್ಕೆ ಆಯ್ಕೆ; ಆದರೆ ಸಮಿತ್ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..
ಲವಿಶ್ ಕೌಶಲ್, ಎಲ್.ಆರ್.ಕುಮಾರ್ಗೆ ಬಂಪರ್ ಫಿಕ್ಸ್
ಮಹಾರಾಜ ಲೀಗ್ನಲ್ಲಿ ಕರಾರುವಾಕ್ ಬೌಲಿಂಗ್ನಿಂದ ಗಮನ ಸೆಳೆದ ಆಟಗಾರರ ಅಂದ್ರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಎಡಗೈ ವೇಗಿ ಲವಿಶ್ ಕೌಶಲ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡದ ಎಲ್.ಆರ್.ಕುಮಾರ್. ಬೆಂಗಳೂರು ಬ್ಲಾಸ್ಟರ್ಸ್ ಪರ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದ ಲವಿಶ್ ಕೌಶಲ್, 10 ಪಂದ್ಯಗಳಿಂದ 16 ವಿಕೆಟ್ ಪಡೆದ್ರೆ, 7.92ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಹುಬ್ಳಿ ಟೈಗರ್ಸ್ ತಂಡದ ವೇಗಿ ಎಲ್.ಆರ್.ಕುಮಾರ್ 9 ಪಂದ್ಯಗಳಿಂದ 17 ವಿಕೆಟ್ ಉರುಳಿಸಿ, 9.15ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.
ಆಲ್ರೌಂಡರ್ ಜೆ ಸುಚಿತ್, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಿಂದಲೂ ಗಮನ ಸೆಳೆದಿದ್ರೆ. ಸ್ವಿಂಗ್, ಪೇಸ್ ಹಾಗೂ ವೇರಿಯೇಷನ್ ಎಸೆತಗಳಿಂದ ವಿಧ್ವತ್ ಕಾವೇರಪ್ಪ ಕಮಾಲ್ ಮಾಡಿದ್ದಾರೆ. ಇವ್ರೇ ಅಲ್ಲ. ವಿಧ್ಯಾದರ್ ಪಾಟೀಲ್ ಮಿಂಚಿನ ದಾಳಿಯನ್ನೇ ನಡೆಸಿದ್ದಾರೆ. ಈ ಯಂಗ್ ಬೌಲರ್ಗಳ ಪರ್ಪಾಮೆನ್ಸ್ ಐಪಿಎಲ್ ಫ್ರಾಂಚೈಸಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಮೆಗಾ ಹರಾಜಿನಲ್ಲಿ ಕೋಟಿ ಶೂರರಾದರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್