/newsfirstlive-kannada/media/post_attachments/wp-content/uploads/2024/05/RCB-Kohli-2.jpg)
ಸತತ 6 ಪಂದ್ಯಗಳಲ್ಲಿ ಗೆದ್ದು, ಪ್ಲೇ ಆಫ್​​ಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆರ್ಮಿ ಎಂಟ್ರಿ ಕೊಟ್ಟಿತ್ತು. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಮೂರೂ ವಿಭಾಗದಲ್ಲಿ ಖತರ್ನಾಕ್​ ಪರ್ಫಾಮೆನ್ಸ್​ ನೀಡಿತ್ತು. ಸಾಲಿಡ್​ ಫಾರ್ಮ್​​ನಲ್ಲಿದ್ದು, ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟ ಆರ್​ಸಿಬಿ ಎಲಿಮಿನೇಟರ್​​ ಫೈಟ್​ನಲ್ಲಿ ಎಡವಿದ್ದೆಲ್ಲಿ? ಆರ್​​ಸಿಬಿ ಸೋಲಿಗೆ ಕಾರಣ ಏನು? ಇಲ್ಲಿದೆ ಮಾಹಿತಿ.
ಐಪಿಎಲ್​ ಸೀಸನ್​ 17ರಲ್ಲಿ ರಾಯಲ್​​ಚಾಲೆಂಜರ್ಸ್​ ಬೆಂಗಳೂರು ತಂಡದ ಆಟ ಅಂತ್ಯ ಕಂಡಿದೆ. ಸೋಲಿನೊಂದಿಗೆ ಆರ್​​ಸಿಬಿ ಎಲಿಮಿನೇಟ್​ ಆಗಿದ್ದು, ತಂಡದ ಗೆಲುವಿನ ಓಟಕ್ಕೆ ಬ್ರೇಕ್​ ಬೀಳ್ತು. ಸತತ 6 ಪಂದ್ಯ ಗೆದ್ದು, ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟ ಆರ್​​ಸಿಬಿ, ನಿನ್ನೆ ಆನ್​ಫೀಲ್ಡ್​ನಲ್ಲಿ ತಪ್ಪುಗಳ ಮೇಲೆ ತಪ್ಪು ಮಾಡ್ತು. ಸ್ವಯಂಕೃತ ಅಪರಾಧಗಳೇ, ರಾಜಸ್ಥಾನ್​ ವಿರುದ್ಧ ಆರ್​​ಸಿಬಿಯನ್ನ ಸೋಲಿಗೆ ಗುರಿ ಮಾಡಿದ್ವು.
ಕಾರಣ ನಂ.1; ಟಾಸ್​​ ಸೋಲು
ನಮೋ ಮೈದಾನದಲ್ಲಿ ನಡೆಯೋ ಪಂದ್ಯದಲ್ಲಿ ಟಾಸ್​ ನಿರ್ಣಾಯಕ. ಟಾಸ್​ ಗೆದ್ದು ಚೇಸಿಂಗ್​ ಆಯ್ಕೆ ಮಾಡೋ ತಂಡಕ್ಕೆ ಅಡ್ವಾಂಟೇಜ್​ ಹೆಚ್ಚು. ನಿನ್ನೆಯ ಪಂದ್ಯದಲ್ಲೂ ರಾಜಸ್ಥಾನ್​ ತಂಡಕ್ಕೆ ಪ್ಲಸ್​ ಆಗಿದ್ದು ಅದೇ. ಆರ್​​ಸಿಬಿ ವಿಚಾರಕ್ಕೆ ಬಂದ್ರೆ ಚೇಸಿಂಗ್​ ತಂಡದ ಸ್ಟ್ರೆಂಥ್​​. ಟಾಸ್​​ ಫಲಿತಾಂಶ ನೋಡಿದ್ರೆ, ಎಲಿಮಿನೇಟರ್​​​ ಫೈಟ್​​ ಆರಂಭಕ್ಕೂ ಮುನ್ನವೇ ಬ್ಯಾಡ್​ ಲಕ್ ಆರ್​​ಸಿಬಿ ಬೆನ್ನಿಗೆ ಅಂಟಿದಂತೆ ಕಾಣ್ತಿತ್ತು.
ಕಾರಣ ನಂ.2: ಪವರ್​​ ಪ್ಲೇನಲ್ಲಿ ಟೈಟ್​ ಸ್ಪೆಲ್​, ರಾಜಸ್ಥಾನ್​​ ಮೇಲುಗೈ
ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ರಾಜಸ್ಥಾನ ಪವರ್​ ಪ್ಲೇನಲ್ಲಿ ಟೈಟ್​ ಸ್ಪೆಲ್​ ಮಾಡಿತು. 50 ರನ್​ಗಳಿಸಿದ ಆರ್​​ಸಿಬಿ 1 ವಿಕೆಟ್​ ಕಳೆದುಕೊಳ್ತು. ಇದು ಕೂಡ ಹಿನ್ನಡೆಗೆ ಕಾರಣವಾಯ್ತು.
ಕಾರಣ ನಂ.3: ಬಿಗ್​ ಹಿಟ್ಟರ್ಸ್​ ಆಟಕ್ಕೆ ಬೇಗನೆ ಬ್ರೇಕ್​​
ಆರ್​​ಸಿಬಿ ಬಿಗ್​ ಹಿಟ್ಟರ್​ಗಳ ಆಟಕ್ಕೆ ರಾಜಸ್ಥಾನ್​ ಬೌಲರ್ಸ್​ ಬೇಗನೆ ಬ್ರೇಕ್​ ಹಾಕಿದ್ರು. ವಿರಾಟ್​ ಕೊಹ್ಲಿ. ಫಾಫ್​ ಡುಪ್ಲೆಸಿ, ಕ್ಯಾಮರೂನ್​ ಗ್ರೀನ್​, ದಿನೇಶ್​​ ಕಾರ್ತಿಕ್​​.. ಈ ಸ್ಟಾರ್​​ಗಳ ಪೈಕಿ ಯಾವೊಬ್ಬ ಆಟಗಾರ ಕೂಡ ಅಬ್ಬರಿಸಲಿಲ್ಲ. ಸುಲಭಕ್ಕೆ ವಿಕೆಟ್​ ಕೊಟ್ಟು ಪೆವಿಲಿಯನ್​ ಸೇರಿದ್ರು.
ಕಾರಣ ನಂ.4: ಟ್ರೆಂಟ್​ ಬೋಲ್ಟ್​, ಆರ್​. ಅಶ್ವಿನ್​ ಸೂಪರ್​ ಸ್ಪೆಲ್​
ರಾಜಸ್ಥಾನ್​ ತಂಡದ ಎಡಗೈ ವೇಗಿ ಟ್ರೆಂಟ್​ ಬೋಲ್ಟ್​​, ಸ್ಪಿನ್ನರ್​ ಆರ್​ ಅಶ್ವಿನ್​ ಸೂಪರ್​​ ಬೌಲಿಂಗ್​ ಹಾಕಿದ್ರು. 1 ವಿಕೆಟ್​ ಕಬಳಿಸಿದ ಬೋಲ್ಟ್​ ಕೇವಲ 16 ರನ್​ ಬಿಟ್ಟು ಕೊಟ್ರೆ, ಅಶ್ವಿನ್​, 2 ವಿಕೆಟ್​ ಕಬಳಿಸಿ 19 ರನ್​ ಬಿಟ್ಟು ಕೊಟ್ರು. ಇವರಿಬ್ಬರ 8 ಓವರ್​​​ಗಳಲ್ಲಿ ಆರ್​​ಸಿಬಿ ರನ್​ ಬರ, ವಿಕೆಟ್​ ಕೂಡ ಕಳೆದುಕೊಳ್ತು.
ಇದನ್ನೂ ಓದಿ: RCB ಸೋಲು ಸಂಭ್ರಮಿಸಿ ಟ್ರೋಲ್ ಮಾಡಿದ CSKಯ ತುಷಾರ್ ದೇಶಪಾಂಡೆ.. ಆಮೇಲೆ ಆಗಿದ್ದೇ ಬೇರೆ..
ಕಾರಣ ನಂ.5: 39 ಡೌಟ್​ ಬಾಲ್ಸ್​, ಹಾಕಿದ್ದು 2 ಎಕ್ಸ್​​​ಟ್ರಾ ಬಾಲ್​​
ಆರ್​​ಆರ್​​ನ ಬೌಲಿಂಗ್​ ಎಷ್ಟು ಶಿಸ್ತು ಬದ್ಧವಾಗಿತ್ತು ಅನ್ನೊದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​. 20 ಓವರ್​ಗಳ ಗೇಮ್​ನಲ್ಲಿ ಕೇವಲ 2 ಎಕ್ಸ್​​ಟ್ರಾ ಬಾಲ್​ ಹಾಕಿದ್ರು. ಬರೋಬ್ಬರಿ 39 ಬಾಲ್​ಗಳನ್ನ ಅಂದ್ರೆ, 6.3 ಓವರ್​​ಗಳನ್ನ ಡಾಟ್​ ಮಾಡಿಸಿದ್ರು. ಇದು ಟರ್ನಿಂಗ್​ ಪಾಯಿಂಟ್​ ಆಯ್ತು.
ಕಾರಣ ನಂ.6: ಫೀಲ್ಡಿಂಗ್​ ವೈಫಲ್ಯ, ಕ್ಯಾಚ್​ ಡ್ರಾಪ್​
173 ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದ್ದ ಆರ್​​ಸಿಬಿ, ಟೊಂಕ ಕಟ್ಟಿ ಹೋರಾಡ ಬೇಕಿತ್ತು. ಆದ್ರೆ, ಫೀಲ್ಡಿಂಗ್​ ನಿರಾಸದಾಯಕ ಪರ್ಫಾಮೆನ್ಸ್​ ನೀಡ್ತು. ಮೊದಲ ಓವರ್​ನಲ್ಲೇ ಜೈಸ್ವಾಲ್​ಗೆ ಜೀವದಾನ ನೀಡಿದ್ರೆ, 4.1ನೇ ಓವರ್​ನಲ್ಲಿ ಕೊಹ್ಲರ್​ ಕ್ಯಾಡ್ಮೋರ್​ರ ಸಿಂಪಲ್​ ಕ್ಯಾಚ್​ ಮ್ಯಾಕ್ಸ್​ವೆಲ್​, ಡ್ರಾಪ್​ ಮಾಡಿದ್ರು. ಉಳಿದ ಫೀಲ್ಡಿಂಗ್​ ಕೂಡ ಟೈಟ್​ ಆಗಿರಲಿಲ್ಲ.
ಇದನ್ನೂ ಓದಿ: RCB: ಸೋತ ಆರ್​ಸಿಬಿಗೂ ಇದೆ ಬಂಪರ್ ಬಹುಮಾನ.. ಎಲಿಮಿನೇಟ್ ಆದ ಬೆಂಗಳೂರಿಗೆ ಸಿಕ್ಕಿದ್ದು ಎಷ್ಟು ಕೋಟಿ?
ಕಾರಣ ನಂ.7: ದುಬಾರಿಯಾದ ಬೌಲಿಂಗ್​ ವಿಭಾಗ
ಕೊಟ್ಟ ಚಿಕ್ಕ ಟಾರ್ಗೆಟ್​ ಡಿಫೆಂಡ್​ ಮಾಡಿಕೊಳ್ಳುವಲ್ಲಿ ಬೌಲಿಂಗ್​ ವಿಭಾಗ ಎಡವಿತು. ವಿಕೆಟ್​​ ಕಬಳಿಸಿ, ಆರ್​​ ಆರ್​ ಬ್ಯಾಟರ್​​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದ್ರು. ಇದೂ ಕೂಡ ಸೋಲಿಗೆ ಪ್ರಮುಖ ಕಾರಣವಾಯ್ತು.
ಕಾರಣ ನಂ.8: RCB ಆಟಗಾರರ ಅತಿಯಾದ ಆತ್ಮವಿಶ್ವಾಸ
ಸತತ 6 ಪಂದ್ಯಗಳಲ್ಲಿ ಜಯಸಿದ್ದ ಆರ್​​ಸಿಬಿ ಪಾಳಯದಲ್ಲಿ ಅತಿಯಾದ ಆತ್ಮವಿಶ್ವಾಸವಿತ್ತು. ಸತತ ಸೋಲಿನಿಂದ ಕಂಗೆಟ್ಟಿರೋ ರಾಜಸ್ಥಾನ್​ ವಿರುದ್ಧ ಸುಲಭಕ್ಕೆ ಗೆದ್ದು ಬಿಡ್ತೀವಿ ಅನ್ನೋ ಓವರ್​ ಕಾನ್ಫಿಡೆನ್ಸ್​ ಗೆಲುವಿಗೆ ಮುಳುವಾಯ್ತು.
ಸತತ 6 ಪಂದ್ಯ ಗೆದ್ದು ಪ್ಲೇ ಆಫ್​​ಗೆ ರಾಯಲ್​ ಎಂಟ್ರಿ ಕೊಟ್ಟಿದ್ದ ಆರ್​​ಸಿಬಿ, ಎಲಿಮಿನೇಟರ್​ ಫೈಟ್​ನಲ್ಲಿ ಮುಗ್ಗರಿಸಿತು. ತಪ್ಪುಗಳ ಮೇಲೆ ತಪ್ಪು ಮಾಡಿದ ಪರಿಣಾಮ ಈ ಬಾರಿಯೂ ಅಭಿಮಾನಿಗಳ ಕಪ್​​ ಕನಸಾಗೇ ಉಳಿಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us