/newsfirstlive-kannada/media/post_attachments/wp-content/uploads/2024/08/RCB-2.jpg)
IPL2025ಕ್ಕೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಆರ್​ಸಿಬಿ ಮೇಲೆ ಎಲ್ಲರ ಕಣ್ಣಿದೆ. ಈ ಬಾರಿಯಾದರೂ ತಂಡದಲ್ಲಿ ಬದಲಾವಣೆ ಕಾಣಲಿದೆಯಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಅದರ ಜೊತೆ ಜೊತೆಗೆ ತಂಡದಲ್ಲಿರುವ ಕೆಲ ಪ್ಲೇಯರ್​ಗಳನ್ನು ಬದಲಾಯಿಸಲಿದ್ದಾರಾ? ಎಂಬ ಪ್ರಶ್ನೆಯೂ ಫ್ಯಾನ್ಸ್​ ಮನದಲ್ಲಿ ಕಾಡುತ್ತಿದೆ.
2025ರ ಐಪಿಎಲ್​​​​ಗಿಂತ ಮುಂಚಿತವಾಗಿ ಒಂದು ಮೆಗಾ ಹರಾಜು ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಹರಾಜಿನಲ್ಲಿ ಸ್ಟಾರ್​ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ತಂಡದಿಂದ ಹೊರಹೋಗಲಿದ್ದಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.
/newsfirstlive-kannada/media/post_attachments/wp-content/uploads/2024/05/MAXWELL-5.jpg)
ಆರ್​ಸಿಬಿ ಬಹುಸಂಖ್ಯಾ ಅಭಿಮಾನಿಗಳನ್ನು ಹೊಂದಿರುವ ತಂಡ. 17 ವರ್ಷದಿಂದ ಟ್ರೋಫಿಗಾಗಿ ಹೋರಾಡುತ್ತಲೇ ಬಂದಿದೆ. ಈ ಬಾರಿಯೂ ಟ್ರೋಫಿ ಗೆಲ್ಲಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ. ಇದರ ಜೊತೆಗೆ ಗ್ಲೇನ್​ ಮ್ಯಾಕ್ಸ್​ವೆಲ್​ ಅನ್ನು ತಂಡ ಬದಲಾಯಿಸಲಿದೆ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ: 3 ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್​.. ಸಾವಿನ ಸುತ್ತ ಅನುಮಾನದ ಹುತ್ತ
ಕಳೆದ ಬಾರಿ ಮ್ಯಾಕ್ಸ್​ವೆಲ್​ ಕಳಪೆ ಪರ್ದರ್ಶನ ತೋರಿದ್ದರು. ತಂಡಕ್ಕಾಗಿ ಅತಿ ಕಡಿಮೆ ರನ್​ಗಳ ಕೊಡುಗೆ ನೀಡಿದ್ದರು. ಇದು ಆರ್​ಸಿಬಿ ಅಭಿಮಾನಿಗಳನ್ನು ಆಘಾತಗೊಳಿಸಿತು. ಕೊನೆಗೆ ಫಾರ್ಮ್​ನಲ್ಲಿಲ್ಲದ ಮ್ಯಾಕ್ಸ್​ವೆಲ್​ನ್ನು ಆಟದಿಂದ ಹೊರಗಿಟ್ಟರು. ಆದರೆ ಈ ಬಾರಿಯ ಐಪಿಎಲ್​ ಪಂದ್ಯದ ಬಗ್ಗೆ ಫ್ಯಾನ್ಸ್​ಗೆ ಕುತೂಹಲ ಶುರುವಾಗಿದೆ. ಒಂದು ವೇಳೆ ಆರ್​ಸಿಬಿ ಮ್ಯಾಕ್ಸ್​ವೆಲ್​ರನ್ನು ಹೊರಗಿಟ್ಟರೆ. ಉಳಿದ ಮೂರು ತಂಡಗಳು ಅವರನ್ನು ಖರೀದಿಸಲು ರೆಡಿ ಇವೆಯಂತೆ.
/newsfirstlive-kannada/media/post_attachments/wp-content/uploads/2024/05/Maxwell_RCB-win.bmp)
ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ.. ಪ್ರಿಯತಮೆ ಜೊತೆ ನೇಣಿಗೆ ಶರಣಾದ ಪೂಜಾರಿ
ಮ್ಯಾಕ್ಸ್​ವೆಲ್​ ಅವರನ್ನು ದೆಹಲಿ ಕ್ಯಾಪಿಟಲ್ಸ್​, ಮುಂಬೈ ಇಂಡಿಯನ್ಸ್​, ಪಂಜಾಬ್​ ತಂಡ ಖರೀದಿಸಲು ರೆಡಿ ಇವೆ ಎಂದು ಹೇಳಲಾಗುತ್ತಿದೆ. ಏಕೆಂದರೆ 2012ರಲ್ಲಿ ಮ್ಯಾಕ್ಸಿ ದೆಹಲಿ ಭಾಗವಾಗಿದ್ದರು. ಆ ವೇಳೆ ತಂಡಕ್ಕಾಗಿ ಚೆನ್ನಾಗಿ ಆಗಿದ್ದರು.
ಮುಂಬೈ ಇಂಡಿಯನ್ಸ್​ ತಂಡದಲ್ಲೂ ಈ ಹಿಂದೆ ಮ್ಯಾಕ್ಸ್​ವೆಲ್​​ ಆಡಿದ್ದಾರೆ. ಇದಲ್ಲದೆ ಪಂಜಾಬ್​ ತಂಡದಲ್ಲಿ ಆಡಿದ ಅನುಭವ ಮ್ಯಾಕ್ಸ್​ವೆಲ್​ಗೆ ಇದೆ. ಆದರೆ ಈ ಬಾರಿ ಮಾತ್ರ ಆರ್​ಸಿಬಿ ಅಭಿಮಾನಿಗಳ ಕಣ್ಣು ಮ್ಯಾಕ್ಸ್​ವೆಲ್​ ಮೇಲಿದೆ. ತಂಡದಿಂದ ಈ ಸ್ಟಾರ್​ ಪ್ಲೇಯರನ್ನು ಹೊರಗಿಡುತ್ತಾರಾ? ಅಥವಾ ಉಳಿಸುತ್ತಾರಾ? ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us