newsfirstkannada.com

ಪ್ಲೇ ಆಫ್​ಗೆ ಮತ್ತೊಂದು ಸುವರ್ಣಾವಕಾಶ; RCB ಮುಂದಿನ ಪಂದ್ಯಗಳು ಎಷ್ಟು ರನ್​ನಿಂದ ಗೆಲ್ಲಬೇಕು?

Share :

Published May 10, 2024 at 4:23pm

    ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿ ಟೀಮ್​​ಗೆ ಇದೆ ಸುವರ್ಣಾವಕಾಶ!

    ಆರ್​ಸಿಬಿ ಮಾಡಬೇಕಿರೋ ಕೆಲಸ, ಉಳಿದ ಎರಡು ಪಂದ್ಯ ಗೆಲ್ಲೋದು

    ಜತೆಗೆ ಚೆನ್ನೈ, ಹೈದರಾಬಾದ್​ ಟೀಮ್​​​​ ಎಲ್ಲಾ ಪಂದ್ಯಗಳು ಸೋಲುವುದು

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಸೀಸನ್​​ ಇನ್ನೇನು ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಇತ್ತೀಚೆಗೆ ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್​​ ಕಿಂಗ್ಸ್​​​ ವಿರುದ್ಧ 60 ರನ್​ಗಳಿಂದ ಗೆದ್ದು ಬೀಗಿರೋ ಆರ್​​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ 10 ಅಂಕಗಳ ಜೊತೆಗೆ ಉತ್ತಮ ರನ್​ ರೇಟ್​​ನೊಂದಿಗೆ 7ನೇ ಸ್ಥಾನದಲ್ಲಿದೆ. ಹಾಗಾಗಿ ಪ್ಲೇ ಆಫ್​ ರೇಸ್​​ನಲ್ಲಿ ಇನ್ನೂ ಉಳಿದುಕೊಂಡಿದೆ.

ಆರ್​​​ಸಿಬಿ ಪ್ಲೇ ಆಫ್​ಗೆ ಹೋಗಲು ಮುಂದಿನ ಎರಡು ಪಂದ್ಯಗಳು ಗೆಲ್ಲಲೇಬೇಕು. ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಆಡಲಿರೋ ಪಂದ್ಯಗಳಲ್ಲಿ ಆರ್​​ಸಿಬಿ ಭಾರೀ ರನ್​ಗಳಿಂದ ಗೆದ್ದು ರನ್​ ರೇಟ್​ ಹೆಚ್ಚಿಸಿಕೊಂಡರೆ ಪ್ಲೇ ಆಫ್​ಗೆ ಹೋಗೋ ಅವಕಾಶ ಇನ್ನೂ ಇದೆ. ಅದರಲ್ಲೂ ಮೊದಲು ಬ್ಯಾಟಿಂಗ್​ ಮಾಡಿ 230-250 ರನ್​ ಟಾರ್ಗೆಟ್​ ನೀಡಿ ಎದುರಾಳಿಗಳನ್ನ 150 ರನ್​ ಒಳಗೆ ಆಲೌಟ್​ ಮಾಡಬೇಕು. ಕನಿಷ್ಠ 100 ರನ್​​ ಮತ್ತು ಸಾಧ್ಯವಾದಷ್ಟು ವಿಕೆಟ್​ಗಳಿಂದ ಗೆಲುವು ಸಾಧಿಸಬೇಕು. ಆಗ ರನ್​ ರೇಟ್​​​ ಚೆನ್ನೈ ಮತ್ತು ಹೈದರಾಬಾದ್​ ತಂಡವನ್ನು ಮೀರಿಸಲಿದೆ.

ಇನ್ನು, ಚೆನ್ನೈ ಈಗಾಗಲೇ 12 ಅಂಕ ಗಳಿಸಿದ್ದು, ಮುಂದಿನ ಮೂರು ಪಂದ್ಯಗಳು ಸೋಲಬೇಕಿದೆ. ಗುಜರಾತ್​​​ ಟೈಟನ್ಸ್​​, ರಾಜಸ್ಥಾನ್​ ಮತ್ತು ಆರ್​​ಸಿಬಿ ವಿರುದ್ಧ ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯ ಸೋಲಬೇಕಿದೆ. ಹಾಗೆಯೇ ಹೈದರಾಬಾದ್​ ಕೂಡ ಗುಜರಾತ್​​ ಮತ್ತು ಪಂಜಾಬ್​ ವಿರುದ್ಧ ಸೋತರೆ ಆರ್​​ಸಿಬಿ ರಾಜರೋಷವಾಗಿ ಪ್ಲೇ ಆಫ್​​ ಪ್ರವೇಶಿಸಲಿದೆ.

ಸದ್ಯ ಆರ್​​ಸಿಬಿ ತಾನು ಆಡಿರೋ 12 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 10 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಸುಧಾರಿಸಿದೆ. ಎರಡಕ್ಕೆ 2 ಪಂದ್ಯ ಗೆದ್ದರೆ ಇನ್ನೂ ಒಂದು ಚಾನ್ಸ್​ ಇದೆ.

ಇದನ್ನೂ ಓದಿ: ಪಂಜಾಬ್​​ ವಿರುದ್ಧ 60 ರನ್​ನಿಂದ ಗೆದ್ದು ಬೀಗಿದ ಬೆಂಗಳೂರು; ಆರ್​​​ಸಿಬಿ ಪ್ಲೇ ಆಫ್​​ ಕನಸು ಜೀವಂತ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪ್ಲೇ ಆಫ್​ಗೆ ಮತ್ತೊಂದು ಸುವರ್ಣಾವಕಾಶ; RCB ಮುಂದಿನ ಪಂದ್ಯಗಳು ಎಷ್ಟು ರನ್​ನಿಂದ ಗೆಲ್ಲಬೇಕು?

https://newsfirstlive.com/wp-content/uploads/2024/05/RCB-Team-Win.jpg

Load More