16 ವರ್ಷಗಳ ಇತಿಹಾಸದಲ್ಲಿ RCB ಇಬ್ಬರು ಆಟಗಾರರನ್ನು ರಿಲೀಸ್ ಮಾಡಿಯೇ ಇಲ್ಲ..!

author-image
Ganesh
Updated On
RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
Advertisment
  • ಆರ್​ಸಿಬಿ ರಿಲೀಸ್ ಮಾಡದೇ ಉಳಿಸಿಕೊಂಡಿರುವ ಸ್ಟಾರ್​​ಗಳು ಯಾರು?
  • ಅವರಲ್ಲಿ ಓರ್ವ ಆಟಗಾರ ಐಪಿಎಲ್ ಹರಾಜಿಗೆ ಪ್ರವೇಶ ಮಾಡಿಯೇ ಇಲ್ಲ
  • ಒಮ್ಮೆಯೂ ಟ್ರೋಫಿ ಗೆದ್ದಿಲ್ಲ, ಎರಡು ಬಾರಿ ಫೈನಲ್ ಪ್ರವೇಶಿಸಿ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್ ಮುಗಿದಿದ್ದು, 17ನೇ ಸೀಸನ್‌ಗಾಗಿ ಫ್ರಾಂಚೈಸಿಗಳು ತಯಾರಿ ನಡೆಸುತ್ತಿವೆ. ಐಪಿಎಲ್-2025ರ ಮೊದಲು ಮೆಗಾ ಹರಾಜು ನಡೆಸಲಾಗುತ್ತದೆ. ಹರಾಜಿಗೂ ಮುನ್ನ ಅನೇಕ ತಂಡಗಳು ದೊಡ್ಡ, ದೊಡ್ಡ ಆಟಗಾರರನ್ನು ರಿಲೀಸ್ ಮಾಡುತ್ತವೆ. ಜನಪ್ರಿಯ ತಂಡ ಆರ್‌ಸಿಬಿ ಕೂಡ ಹಲವು ಆಟಗಾರರನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಇಲ್ಲಿಯವರೆಗೆ 16 ಸೀಸನ್​​ಗಳನ್ನು ಪೂರೈಸಿರುವ ಆರ್​ಸಿಬಿ ಇಬ್ಬರು ಆಟಗಾರರನ್ನು ಮಾತ್ರ ರಿಲೀಸ್​ ಮಾಡಿಲ್ಲ.

ಇದನ್ನೂ ಓದಿ:ಬಿಗ್​ಬಿ ಫಿಟ್ನೆಸ್​ ಗುಟ್ಟು! ಈ ಪದಾರ್ಥಗಳನ್ನ ತಿನ್ನೋದೇ ಇಲ್ಲ, ಎಷ್ಟು ಗಂಟೆ ನಿದ್ದೆ ಮಾಡ್ತಾರೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ಒಂದು. ಆದರೆ ಇದುವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆರ್‌ಸಿಬಿ ಎರಡು ಬಾರಿ ಮಾತ್ರ ಫೈನಲ್‌ ಪ್ರವೇಶ ಮಾಡಿ ಸೋತಿದೆ.

ಐಪಿಎಲ್ 2008ರ ಮೊದಲ ಹರಾಜಿಗೂ ಮುನ್ನವೇ ಆರ್​ಸಿಬಿ ವಿರಾಟ್ ಕೊಹ್ಲಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಎಂದಿಗೂ ಹರಾಜಿನ ಭಾಗವಾಗಿಲ್ಲ, ಆರ್‌ಸಿಬಿ ಯಾವಾಗಲೂ ಅವರನ್ನು ಬೆಂಬಲಿಸುತ್ತದೆ. RCB ತನ್ನ 17 ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೆ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿಯನ್ನು ರಿಲೀಸ್ ಮಾಡಿಲ್ಲ. ಕೊಹ್ಲಿ ಕೂಡ ತಂಡಕ್ಕೆ ನಿಷ್ಠರಾಗಿದ್ದಾರೆ. ಬೇರೆ ತಂಡಕ್ಕೆ ತೆರಳುವ ಬಗ್ಗೆಯೂ ಮಾತನಾಡಿಲ್ಲ.

ವಿರಾಟ್ ಕೊಹ್ಲಿ ಹೊರತುಪಡಿಸಿ, ಆರ್‌ಸಿಬಿ ಕೂಡ ಎಬಿ ಡಿವಿಲಿಯರ್ಸ್‌ನನ್ನು ಬಿಡುಗಡೆ ಮಾಡಲಿಲ್ಲ. ಡಿವಿಲಿಯರ್ಸ್ 2011ರಲ್ಲಿ RCBಗೆ ಸೇರ್ಪಡೆಗೊಂಡರು. 2021ರಲ್ಲಿ IPL ನಿಂದ ನಿವೃತ್ತಿಯಾಗುವವರೆಗೂ RCBಗಾಗಿ ಪಂದ್ಯಗಳನ್ನು ಆಡಿದರು. RCB ಅವರನ್ನು ಎಂದಿಗೂ ಬಿಡುಗಡೆ ಮಾಡಲಿಲ್ಲ ಮತ್ತು ಯಾವಾಗಲೂ ಅವರನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ:RCB ಅಭಿಮಾನಿಗಳಿಗೆ ಗುಡ್​ನ್ಯೂಸ್; ಬಲಿಷ್ಠ ಟೀಂ ಇಂಡಿಯಾದಲ್ಲಿ 4 ಮಂದಿ ಆರ್​ಸಿಬಿ ಆಟಗಾರರು..!

ವಿರಾಟ್ ಕೊಹ್ಲಿ ಆರ್‌ಸಿಬಿ ಪರ 7 ಸಾವಿರಕ್ಕೂ ಹೆಚ್ಚು ರನ್ ಗಳಿಸಿ ತಂಡದ ಅಗ್ರಮಾನ್ಯ ಆಟಗಾರ ಎನಿಸಿಕೊಂಡಿದ್ದಾರೆ. ಡಿವಿಲಿಯರ್ಸ್ ಕೂಡ ಆರ್‌ಸಿಬಿ ಪರ ಹಲವು ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment