newsfirstkannada.com

ದಿನೇಶ್ ಕಾರ್ತಿಕ್​​ಗೆ ಇದು ಕೊನೆಯ ಐಪಿಎಲ್​ ಟೂರ್ನಿ.. DKಗಾಗಿ ಭರ್ಜರಿ ಪ್ಲಾನ್ ಮಾಡ್ತಿದೆ RCB..!

Share :

Published May 9, 2024 at 10:45am

Update May 10, 2024 at 6:29am

    ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ನೀಡುತ್ತಾ? ಇಲ್ವಾ?

    ಈ ಸೀಸನ್​ ಐಪಿಎಲ್​ನಲ್ಲೂ DK ಬೊಂಬಾಟ್​​ ಆಟ

    ಡಿಕೆ ಬಾಸ್​ಗೆ ಗಿಫ್ಟ್​​ ಕೊಡಲು ಹೊರಟಿರೋದ್ಯಾಕೆ..?

ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ನೀಡುತ್ತಾ? ಇಲ್ವಾ? ಈ ಪ್ರಶ್ನೆ ಇಡೀ ಕ್ರಿಕೆಟ್​​ ಲೋಕವನ್ನ ಕಾಡ್ತಿದೆ. ಪ್ಲೇ ಆಫ್​ ಎಂಟ್ರಿಗೆ ಸರ್ಕಸ್ ನಡೆಸ್ತಿರೋದ್ರ ನಡುವೆಯೇ ಆರ್​​ಸಿಬಿ ಆಟಗಾರರು ಮತ್ತೊಂದು ಶಪಥಗೈದಿದ್ದಾರೆ. ತಂಡದ ಅಪ್ರತಿಮ ಹೋರಾಟಗಾರ ದಿನೇಶ್​ ಕಾರ್ತಿಕ್​ಗೆ ಸ್ಪೆಷಲ್​ ಗಿಫ್ಟ್​ ಕೊಡಲು ಪ್ಲಾನ್​ ನಡೆದಿದೆ. ಡಿಕೆ ಬಾಸ್​ಗೆ ಆರ್​​ಸಿಬಿ ಗಿಫ್ಟ್​​ ಕೊಡಲು ಹೊರಟಿರೋದ್ಯಾಕೆ?

ಸತತ ಸೋಲುಗಳನ್ನ ಕಂಡು ಕಂಗೆಟ್ಟಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆರ್ಮಿ ರಣರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದೆ. ಅತ್ಯಾದ್ಭುತ ಬ್ಯಾಟಿಂಗ್​.. ಬಿರುಗಾಳಿಯಂತ ಬೌಲಿಂಗ್​. ಫೀಲ್ಡಿಂಗ್​ ಅಂತೂ ಫಸ್ಟ್​ ಕ್ಲಾಸ್​​ ಬಿಡಿ. ಗುಜರಾತ್​​ ವಿರುದ್ಧದ ಪಂದ್ಯ ನೋಡಿದ ಫ್ಯಾನ್ಸ್​​ಗೆ ಇದೇ ನಮ್ಮ ಆರ್​​ಸಿಬಿ ಅನ್ನೋ ಪ್ರಶ್ನೆ ಕಾಡ್ತಿದೆ. ಅಷ್ಟರ ಮಟ್ಟಿಗೆ ಆರ್​​ಸಿಬಿ ಟೀಮ್​ ಸಂಪೂರ್ಣ ಬದಲಾಗಿ ಕಮ್​ಬ್ಯಾಕ್​ ಮಾಡಿದೆ.

ಇದನ್ನೂ ಓದಿ:Breaking: ಮಹಿಳೆ ಅಪಹರಣ ಕೇಸ್​ಗೆ ಮತ್ತೊಂದು ಟ್ವಿಸ್ಟ್ ಕೊಟ್ಟ ಎಸ್​ಐಟಿ ಅಧಿಕಾರಿಗಳು..!

ಎಲ್ಲಾ ಅಭಿಮಾನಿಗಳಿಗಾಗಿ.. RCB ತಂಡದ ಶಪಥ..!
ಸದ್ಯ 8 ಪಾಯಿಂಟ್ಸ್​​ಗಳನ್ನ ಕಲೆ ಹಾಕಿರೋ ಆರ್​​ಸಿಬಿಗೆ ಈಗಲೂ ಪ್ಲೇ ಆಫ್​ ಎಂಟ್ರಿಗೆ ಚಾನ್ಸ್​ ಇದೆ. ಮುಂದಿನ ಮೂರೂ ಪಂದ್ಯಗಳನ್ನ ಗೆಲ್ಲಬೇಕು, ಅದೃಷ್ಟ ಕೈ ಹಿಡಿದು 4ನೇ ಸ್ಥಾನಕ್ಕೆ ಪೈಪೋಟಿ ನಡೆಸ್ತಿರೋ ತಂಡಗಳು ಸೋಲು ಕಾಣಬೇಕು.. ಪ್ಲೇ ಆಫ್​ಗೆ ಆರ್​​ಸಿಬಿ ಎಂಟ್ರಿ ಕೊಡಲಿದೆ. ಇದು ಸಾಧ್ಯಾನಾ? ಅನ್ನೋದು ಸದ್ಯ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಹೀಗಾಗಿ ಆರ್​​​ಸಿಬಿ ಆಟಗಾರರು ಬೇಸರಗೊಂಡಿದ್ದ ಲಾಯಲ್​ ಫ್ಯಾನ್ಸ್​ಗೆ ಭರ್ಜರಿ ಎಂಟರ್​​ಟೈನ್​ಮೆಂಟ್​ ಕೊಡೋದನ್ನೇ ಮುಖ್ಯ ಉದ್ದೇಶವನ್ನಾಗಿಸಿಕೊಂಡಿದ್ದಾರೆ.

ಡಿಕೆ ಬಾಸ್​​ಗೆ ಸ್ಪೆಷಲ್​ ಗಿಫ್ಟ್​ ಕೊಡಲು RCB ಪ್ಲಾನ್​
ಆರ್​​ಸಿಬಿ ಕಳೆದ 3 ಪಂದ್ಯದಲ್ಲಿ ಅಭಿಮಾನಿಗಳಿಗಾಗಿ ಭರ್ಜರಿ ಪ್ರದರ್ಶನ ನೀಡಿದೆ. ಪರ್ಫಾಮೆನ್ಸ್​ ಕಂಡು ಫ್ಯಾನ್ಸ್​ ಕೂಡ ಖುಷ್​ ಆಗಿದ್ದಾರೆ. ಸದ್ಯ ಎಲ್ಲಾ ಅಭಿಮಾನಿಗಳಿಗಾಗಿ ಎಂದು ಆಡ್ತಿರುವ ಆರ್​​ಸಿಬಿ ಆಟಗಾರರಲ್ಲಿ ಇನ್ನೊಂದು ಕನಸು ಕೂಡ ಇದೆ. ಅದೇ ಆರ್​​ಸಿಬಿ ಪಡೆಯ ಅಪ್ರತಿಮ ಹೋರಾಟಗಾರ. ಅಭಿಮಾನಿಗಳ ನೆಚ್ಚಿನ ಡಿಕೆ ಬಾಸ್​ಗೆ ಗೆಲುವಿನ ಗಿಫ್ಟ್​ ನೀಡಿ ಗ್ರ್ಯಾಂಡ್​​ ವಿದಾಯ ಹೇಳೋದು.

ಇದನ್ನೂ ಓದಿ:ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಈ ಸೀಸನ್​ ಐಪಿಎಲ್​ನಲ್ಲೂ ಬೊಂಬಾಟ್​​ ಆಟ.!
ಛಲದಂಕ ಮಲ್ಲ ದಿನೇಶ್​ ಕಾರ್ತಿಕ್​ ಕಮ್​ಬ್ಯಾಕ್​ ಕಥೆ ಎಂತವರಿಗೂ ಸ್ಫೂರ್ತಿ. 2015ರಲ್ಲಿ ಮೊದಲು ಆರ್​​ಸಿಬಿ ಪರ ಆಡಿದ್ದ ದಿನೇಶ್​ ಕಾರ್ತಿಕ್​ರನ್ನು 2022ರಲ್ಲಿ ಮತ್ತೆ ಕಮ್​ಬ್ಯಾಕ್​ ಮಾಡಿದ್ರು. ಹರಾಜಿನಲ್ಲಿ ಡಿಕೆಯನ್ನು ಖರೀದಿಸಿದಾಗ ಎಲ್ರೂ ಟೀಕಿಸಿದ್ರು. ಆ ಟೀಕೆಗಳಿಗೆಲ್ಲಾ ಕಾರ್ತಿಕ್​, ತಮ್ಮ ಬ್ಯಾಟ್​ನಿಂದಲೇ ಉತ್ತರ ಕೊಟ್ರು. ಫಿನಿಷರ್​​ ಆಗಿ ಮಿಂಚು ಹರಿಸಿದ ಡಿಕೆ ಬಾಸ್​​ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಎಬಿಡಿ ಅಲಭ್ಯತೆಯ ಕೊರತೆ ಕಾಡದಂತೆ ತಮ್ಮ ರೋಲ್​ನ ಸ್ಪಷ್ಟವಾಗಿ ನಿಭಾಯಿಸಿದ್ರು. ಈ ಸೀಸನ್​ನಲ್ಲೂ ಅಷ್ಟೇ ಡಿಕೆ ಬೊಂಬಾಟ್​ ಆಟದ ಮನರಂಜನೆ ನೀಡ್ತಿದ್ದಾರೆ.

ಐಪಿಎಲ್​ ಬಳಿಕ ಕ್ರಿಕೆಟ್​ಗೆ ಕಾರ್ತಿಕ್​ ಗುಡ್​ ಬೈ?
38 ವರ್ಷದ ದಿನೇಶ್​ ಕಾರ್ತಿಕ್​ಗೆ ಇದೇ ಕೊನೆಯ ಐಪಿಎಲ್​ ಟೂರ್ನಿ. ಈ ಸೀಸನ್​ ಆರಂಭಕ್ಕೂ ಮುನ್ನವೇ ವಿದಾಯದ ಸುಳಿವನ್ನ ದಿನೇಶ್​ ಕಾರ್ತಿಕ್​​ ನೀಡಿದ್ದಾರೆ. ದುರಾದೃಷ್ಟವಶಾತ್​ ಆರ್​​ಸಿಬಿ ಪ್ಲೇ ಆಫ್​ ಪ್ರವೇಶಿಸದಿದ್ರೆ, ಮುಂದಿರೋ 3 ಲೀಗ್​ ಹಂತದ ಪಂದ್ಯಗಳೇ ಡಿಕೆ ಪಾಲಿನ ಕೊನೆಯ ಪಂದ್ಯಗಳಾಗಲಿವೆ. ಈ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ, ಡಿಕೆಗೆ ಗೆಲುವಿನ ಗಿಫ್ಟ್​ ನೀಡೋ ಲೆಕ್ಕಾಚಾರ ಆರ್​​ಸಿಬಿ ತಂಡದಲ್ಲಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯಿತು.. ಅನ್ನೋ ಮಾತಿದ್ಯಲ್ಲ.. ಹಂಗಿತ್ತು ನೋಡಿ ಫಸ್ಟ್​ ಹಾಫ್​ನಲ್ಲಿ ಆರ್​​ಸಿಬಿ. ಬ್ಯಾಟರ್ಸ್​ ಸಕ್ಸಸ್​ ಕಂಡ್ರೆ, ಬೌಲರ್ಸ್​ ಫೇಲ್​, ಬೌಲರ್ಸ್​ ಭರ್ಜರಿಯಾಗಿ ಆಡಿದ್ರೆ, ಬ್ಯಾಟರ್ಸ್​​ ಪ್ಲಾಫ್​​.. ಪರಿಣಾಮ ಸೋಲಿನ ಸುಳಿಗೆ ಸಿಲುಕಿತ್ತು. ಇಂತಾ ಆರ್​​ಸಿಬಿ ಇದೀಗ ನಿರೀಕ್ಷೆಯೂ ಮಾಡದ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದೆ. ಹ್ಯಾಟ್ರಿಕ್​ ಗೆಲುವನ್ನ ಸಾಧಿಸಿ ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿರೋ ಆರ್​​ಸಿಬಿ, ಉಳಿದ ತಂಡಗಳಲ್ಲಿ ನಡುಕ ಹುಟ್ಟಿಸಿದೆ. ಇದೇ ಆಟ ಮುಂದುವರೆಸಿದ್ರೆ, ಡಿಕೆಗೆ ಗೆಲುವಿನ ವಿದಾಯ ನೀಡೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್​ ಟೇಕ್ ಮಾಡಿದ ವಿರಾಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿನೇಶ್ ಕಾರ್ತಿಕ್​​ಗೆ ಇದು ಕೊನೆಯ ಐಪಿಎಲ್​ ಟೂರ್ನಿ.. DKಗಾಗಿ ಭರ್ಜರಿ ಪ್ಲಾನ್ ಮಾಡ್ತಿದೆ RCB..!

https://newsfirstlive.com/wp-content/uploads/2024/05/DINESH-KARTHIK-2.jpg

Load More