/newsfirstlive-kannada/media/post_attachments/wp-content/uploads/2024/04/Kohli-2.jpg)
2024ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಮೊದಲ ಶತಕ ಬಾರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಬಾರಿಸಿದ್ದರು. ಆದರೆ ಇದು ನಿಧಾನಗತಿಯ ಶತಕವಾಗಿತ್ತು ಎಂದು ಅನೇಕರು ಟೀಕಿಸಿದ್ದರು.
ಆರ್ಸಿಬಿ ಐಕಾನ್ ಆಗಿರುವ ಕೊಹ್ಲಿ ಈ ಬಾರಿ ಐಪಿಎಲ್ನಲ್ಲಿ ಮತ್ತು ಎದುರಿಸಿದ ಐದು ಪಂದ್ಯಗಳಲ್ಲಿ 316 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರ ಸ್ಟ್ರೈಕ್ ರೇಟ್ 146.30 ಇದೆ. ಇದರ ಜೊತೆಗೆ ನಿಧಾನಗತಿಯ ಶತಕವೊಂದು ಸೇರಿದೆ.
ಕೊಹ್ಲಿ ಚೊಚ್ಚಲ ಆಟದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೇ ವಿಚಾರವಾಗಿ ಆರ್ಸಿಬಿ ಸಹ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಮಾತನಾಡಿದ್ದಾರೆ. ಎರೌಂಡ್ ವಿಕೆಟ್ ಕಾರ್ಯಕ್ರಮದಲ್ಲಿ ‘ಭಾರತವು ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡೋದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಮ್ಯಾಕ್ಸ್ವೆಲ್, 2016ರಲ್ಲಿ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧ ಶತಕ ಬಾರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
"Virat kohli is the most clutch player i have ever played against, so I'm hoping India doesn't pick him for t20 WC."
~ GLENN MAXWELL ❤️
Hitman bodied agenda peddlers. ? pic.twitter.com/iLjFb1EOmk
— ????????!??_?? (@bholination) April 11, 2024
ಇದನ್ನೂ ಓದಿ: 5 ಪಂದ್ಯಗಳಲ್ಲೇ ಅಸಲಿ ಸಾಮರ್ಥ್ಯ ಬಟಾಬಯಲು.. ಬದಲಾಗಲಿಲ್ಲ RCB ನಸೀಬು..!
‘ವಿರಾಟ್ ಕೊಹ್ಲಿ ನಾನು ಇದುವರೆಗೆ ಆಡಿದ ಅತ್ಯಂತ ಕ್ಲಚ್ ಆಟಗಾರ, 2016ರ ಟಿ20 ವಿಶ್ವಕಪ್ನಲ್ಲಿ ಮೊಹಾಲಿಯಲ್ಲಿ ಅವರು ನಮ್ಮ ವಿರುದ್ಧ ಆಡಿದ ಇನ್ನಿಂಗ್ಸ್ಗಳು ಅತ್ಯುತ್ತಮ ಇನ್ನಿಂಗ್ಸ್ಗಳಾಗಿವೆ. ಪಂದ್ಯವನ್ನು ಗೆಲ್ಲಲು ಏನು ಮಾಡಬೇಕು ಎಂಬ ಯೋಚನೆ ಅವರಿಗೆ. ಭಾರತವು ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡೋದಿಲ್ಲ ಎಂದು ನಾನು ಭಾವಿಸುತ್ತೇನೆ. . ಯಾಕಂದ್ರೆ ಆತ ನಮ್ಮದೆರು ಆಡದೇ ಇದ್ರೆ ಒಳ್ಳೆಯದಾಗಲಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ