newsfirstkannada.com

ಕೊಹ್ಲಿಯನ್ನ ವಿಶ್ವಕಪ್​ಗೆ ಆಯ್ಕೆ ಮಾಡೋದಿಲ್ಲ ಎಂದು ಭಾವಿಸುತ್ತೇನೆ; ಮ್ಯಾಕ್ಸ್​ವೆಲ್

Share :

Published April 11, 2024 at 3:35pm

  ಈ ಬಾರಿ ಐಪಿಎಲ್​ನಲ್ಲಿ ನಿಧಾನಗತಿಯ ಶತಕ ಬಾರಿಸಿದ ಕೊಹ್ಲಿ

  5 ಪಂದ್ಯಗಳಲ್ಲಿ 316 ರನ್​ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲ್ಲಿರುವ ವಿರಾಟ್​

  ಕೊಹ್ಲಿ ಕುರಿತು ಆರ್​ಸಿಬಿ ಸಹ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್ ಹೀಗಂದಿದ್ಯಾಕೆ?

2024ರ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿ ಮೊದಲ ಶತಕ ಬಾರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದರು. ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಶತಕ ಬಾರಿಸಿದ್ದರು. ಆದರೆ ಇದು ನಿಧಾನಗತಿಯ ಶತಕವಾಗಿತ್ತು ಎಂದು ಅನೇಕರು ಟೀಕಿಸಿದ್ದರು.

ಆರ್​ಸಿಬಿ ಐಕಾನ್​ ಆಗಿರುವ ಕೊಹ್ಲಿ ಈ ಬಾರಿ ಐಪಿಎಲ್​ನಲ್ಲಿ ಮತ್ತು ಎದುರಿಸಿದ ಐದು ಪಂದ್ಯಗಳಲ್ಲಿ 316 ರನ್​ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರ ಸ್ಟ್ರೈಕ್​ ರೇಟ್​​ 146.30 ಇದೆ. ಇದರ ಜೊತೆಗೆ ನಿಧಾನಗತಿಯ ಶತಕವೊಂದು ಸೇರಿದೆ.

ಕೊಹ್ಲಿ ಚೊಚ್ಚಲ ಆಟದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೇ ವಿಚಾರವಾಗಿ ಆರ್​ಸಿಬಿ ಸಹ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ಮಾತನಾಡಿದ್ದಾರೆ. ಎರೌಂಡ್​ ವಿಕೆಟ್​ ಕಾರ್ಯಕ್ರಮದಲ್ಲಿ ‘ಭಾರತವು ಅವರನ್ನು ವಿಶ್ವಕಪ್​ಗೆ ಆಯ್ಕೆ ಮಾಡೋದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಮ್ಯಾಕ್ಸ್​ವೆಲ್,​ 2016ರಲ್ಲಿ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಧ ಶತಕ ಬಾರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: 5 ಪಂದ್ಯಗಳಲ್ಲೇ ಅಸಲಿ ಸಾಮರ್ಥ್ಯ ಬಟಾಬಯಲು.. ಬದಲಾಗಲಿಲ್ಲ RCB ನಸೀಬು..!

‘ವಿರಾಟ್​​ ಕೊಹ್ಲಿ ನಾನು ಇದುವರೆಗೆ ಆಡಿದ ಅತ್ಯಂತ ಕ್ಲಚ್​ ಆಟಗಾರ, 2016ರ ಟಿ20 ವಿಶ್ವಕಪ್​ನಲ್ಲಿ ಮೊಹಾಲಿಯಲ್ಲಿ ಅವರು ನಮ್ಮ ವಿರುದ್ಧ ಆಡಿದ ಇನ್ನಿಂಗ್ಸ್​ಗಳು ಅತ್ಯುತ್ತಮ ಇನ್ನಿಂಗ್ಸ್​ಗಳಾಗಿವೆ. ಪಂದ್ಯವನ್ನು ಗೆಲ್ಲಲು ಏನು ಮಾಡಬೇಕು ಎಂಬ ಯೋಚನೆ ಅವರಿಗೆ. ಭಾರತವು ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡೋದಿಲ್ಲ ಎಂದು ನಾನು ಭಾವಿಸುತ್ತೇನೆ. . ಯಾಕಂದ್ರೆ ಆತ ನಮ್ಮದೆರು ಆಡದೇ ಇದ್ರೆ ಒಳ್ಳೆಯದಾಗಲಿದೆ’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿಯನ್ನ ವಿಶ್ವಕಪ್​ಗೆ ಆಯ್ಕೆ ಮಾಡೋದಿಲ್ಲ ಎಂದು ಭಾವಿಸುತ್ತೇನೆ; ಮ್ಯಾಕ್ಸ್​ವೆಲ್

https://newsfirstlive.com/wp-content/uploads/2024/04/Kohli-2.jpg

Load More