/newsfirstlive-kannada/media/post_attachments/wp-content/uploads/2024/04/will-jacks-2.jpg)
ಆರ್​ಸಿಬಿ ಅಭಿಮಾನಿಗಳು ಯಂಗ್ ಪ್ಲೇಯರ್​ ವಿಲ್​ ಜಾಕ್ಸ್ ಆಟಕ್ಕೆ ಮನಸೋತು ಹೋಗಿದ್ದಾರೆ. ಮುಂದಿನ ವರ್ಷ ನಡೆಯುವ ಮೆಗಾ ಐಪಿಎಲ್ ಹರಾಜು ನಡಯಲಿದೆ. ಅದಕ್ಕೂ ಮೊದಲೇ ಆರ್​ಸಿಬಿ ಅವರನ್ನು ರಿಟೈನ್ ಮಾಡಿಕೊಳ್ಳಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ವಿಲ್ ಜಾಕ್ಸ್​ ಹವಾ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮೀನು ತಿಂದು ಇಬ್ಬರು ಸಾವು.. ಗ್ರಾಮದ 15 ಮಂದಿ ಅಸ್ವಸ್ಥ, ಭಾರೀ ಆತಂಕ
ಇವತ್ತು ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಮಿಸ್ಟರ್ ನಾಗ್ಸ್​​ ನಡೆಸಿಕೊಡುವ ‘RCB Insider with Mr. Nags’ ಸಂದರ್ಶನದಲ್ಲಿ ವಿಲ್ ಜಾಕ್ಸ್ ಮಾತನಾಡಿದ್ದಾರೆ. ಈ ವೇಳೆ ಅವರು ‘ನಮ್ಮ ಜನ ಗೊತ್ತಲ್ವಾ..?’, ಚಚ್ಚಾಕು, ಹೊಡ್ದಾಕು, ಬಕಾಲ್ ಬ್ಲಾಸ್ಟ್ ಅಂತಾ ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದಾರೆ. ಇದು ಅಭಿಮಾನಿಗಳಿಗೆ ಎದೆಗೆ ಟಚ್ ಆಗಿದೆ.
RCB Insider with Mr. Nags ft. Will Jacks 🥸😎
He’s in terrific form off the field too! Will Jacks trolls Nags (duh!), learns Kannada (henge) and talks about his teammates (shhh!) on @bigbasket_com presents RCB Insider. 😂#PlayBold#ನಮ್ಮRCB#IPL2024pic.twitter.com/jBmHjX324m— Royal Challengers Bengaluru (@RCBTweets) May 3, 2024
ಇತ್ತೀಚೆಗೆ ಗುಜರಾತ್​​ ವಿರುದ್ಧ ಆರ್​​ಸಿಬಿ ಟೀಮ್​​ 9 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ಬರೋಬ್ಬರಿ 200ಕ್ಕೂ ಹೆಚ್ಚು ರನ್​ ಚೇಸ್​ ಮಾಡಿ ಆರ್​​ಸಿಬಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿಲ್​​ ಜಾಕ್ಸ್​​​ ಕೇವಲ 41 ಬಾಲ್​ನಲ್ಲಿ 100 ಚಚ್ಚಿದ್ರು. ಬರೋಬ್ಬರಿ 10 ಸಿಕ್ಸರ್​​, 5 ಫೋರ್​ ಸಿಡಿಸಿದ್ರು. ಇವರನ್ನು ಆರ್​​ಸಿಬಿ ತಂಡದ ಜೂನಿಯರ್​ ಎಬಿಡಿ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್​ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us