/newsfirstlive-kannada/media/post_attachments/wp-content/uploads/2024/05/LSG-RCB.jpg)
ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2024ರ 67ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೆಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರ ಬಿದ್ದಿದೆ. ಆದರೆ ಎಲ್ಎಜಿಗೆ ಸಣ್ಣ ಅವಕಾಶ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧ ಇವತ್ತಿನ ಪಂದ್ಯವನ್ನು ಭಾರೀ ಅಂತರದಿಂದ ಗೆದ್ದರೆ ಎಲ್ಎಸ್ಜಿಗೆ ಅವಕಾಶ ಇದೆ. ಆದರೂ ಎಲ್ಎಸ್ಜಿ ನೆಟ್ ರನ್ರೇಟ್ ಕಳಪೆ ಆಗಿರೋದ್ರಿಂದ ತುಂಬಾನೇ ಕಷ್ಟ ಇದೆ. ಒಂದು ವೇಳೆ ಗೆದ್ದರೂ ನಾಳೆಯ ಪಂದ್ಯದ ಫಲಿತಾಂಶದವರೆಗೂ ಕಾಯಬೇಕಿದೆ.
ಇದನ್ನೂ ಓದಿ: ಮಳೆ ಬರುವ ವೇಳೆ ಘೋರ ದುರಂತ.. ಸಿಡಿಲು ಬಡಿದು 12 ಮಂದಿ ದಾರುಣ ಸಾವು
ನಾಳೆ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ರೋಚಕ ಪಂದ್ಯ ನಡೆಯಲಿದೆ. ಅಲ್ಲಿ ಸಿಎಸ್ಕೆ ಆರ್ಸಿಬಿ ಎದುರು ಸೋತರೆ ಎಲ್ಎಸ್ಜಿಗೆ ಅವಕಾಶ ಇದೆ. ಅದು ಹೇಗೆಂದರೆ ಎಲ್ಎಸ್ಜಿ ನೆಟ್ ರೇಟ್ ಆರ್ಸಿಬಿಗಿಂತ ಹೆಚ್ಚಿದ್ದರೆ ಮಾತ್ರ ಇದು ಸಾಧ್ಯವಾಗಲಿದೆ. ಅದು ಕೂಡ ಈಗಾಗಲೇ 7 ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಸಿಎಸ್ಕೆ ನೆಟ್ ರನ್ ರೇಟ್ ಹೆಚ್ಚಿರಬೇಕು.
ಇನ್ನು 13 ಪಂದ್ಯಗಳನ್ನಾಡಿ 6 ರಲ್ಲಿ ಗೆದ್ದುಕೊಂಡಿರುವ ಎಲ್ಎಸ್ಜಿ -0.787 ನೆಟ್ರನ್ ರೇಟ್ ಹೊಂದಿದೆ. ಹೀಗಾಗಿ ಎಲ್ಎಸ್ಜಿ ಪ್ಲೇ-ಆಫ್ಗೆ ಹೋಗೋದು ಸಾಧ್ಯವಾಗದ ಮಾತಾಗಿದೆ. ಆದರೂ ಆರ್ಸಿಬಿ ಪ್ಲೇ-ಆಫ್ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ ಎಲ್ಎಸ್ಜಿ ಸೋತರೆ ಒಳ್ಳೆಯದೇ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.
ಇದನ್ನೂ ಓದಿ:ಪ್ಲೇ ಆಫ್ಗೆ ಎಂಟ್ರಿಕೊಟ್ಟ SRH; ಸಿಎಸ್ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಮಾತ್ರ ಆರ್ಸಿಬಿಗೆ ಚಾನ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್