16 ವರ್ಷಗಳಿಂದ ಫ್ಯಾನ್ಸ್ ಹೃದಯ ಛಿದ್ರ, ಛಿದ್ರ.. ಆದರೂ ಆರ್​ಸಿಬಿಗೆ ಎಲ್ಲಿಲ್ಲದ ಜನಪ್ರಿಯತೆ, ಗುಟ್ಟೇನು?

author-image
Ganesh
Updated On
RCBಯ 7 ಕ್ಯಾಪ್ಟನ್​ಗಳ ಪೈಕಿ ದಿ ಬೆಸ್ಟ್ ಯಾರು.. ಕೊಹ್ಲಿ ಸಾರಥ್ಯದಲ್ಲಿ ಟೀಮ್ ಹೇಗಿತ್ತು?
Advertisment
  • RCB ಕಪ್ ಗೆಲ್ಲದಿದ್ರೂ ಜನಪ್ರೀಯತೆ ಕಮ್ಮಿ ಆಗ್ತಿಲ್ಲ!
  • ಸತತ ವೈಫಲ್ಯದ ಕಂಡರೂ ಪಾಪ್ಯುಲರ್​ ಆಗಿದ್ದೇಗೆ..?
  • RCB ಕಪ್ ಗೆಲ್ಲದಿದ್ರೂ ಜನಪ್ರಿಯತೆಗೆನೂ ಕಮ್ಮಿ ಆಗ್ತಿಲ್ಲ

ಐಪಿಎಲ್​​ ಆರಂಭವಾದಾಗಿನಿಂದ ಆರ್​ಸಿಬಿಗೆ ಕಪ್​​​​​​​​​​​​​ ಒಲಿದಿಲ್ಲ. ಫ್ಯಾನ್ಸ್​ ಮನದಲ್ಲಿ ಆ ಬೇಸರ ಹೇಳತೀರದು. ರೆಡ್​ ಆರ್ಮಿ ಒಮ್ಮೆಯೂ ಟ್ರೋಫಿ ಜಯಿಸದಿದ್ರೂ, ಜನಪ್ರೀಯತೆ ಮಾತ್ರ ಯಾರಿಗೇನ್​ ಕಮ್ಮಿಯಿಲ್ಲ. 5 ಬಾರಿಯ ಚಾಂಪಿಯನ್​ ತಂಡಗಳನ್ನೇ ಮೀರಿಸಿದೆ. ಆರ್​​ಸಿಬಿ ಪಾಪ್ಯುಲಾರಿಟಿ ಹಿಂದಿನ ಸೀಕ್ರೆಟ್​ಏನು?

16 ಸೀಸನ್​ಗಳಿಂದ ಅಭಿಮಾನಿಗಳ ಹೃದಯ ಛಿದ್ರ..!
ಆರ್​ಸಿಬಿ! ಐಪಿಎಲ್​​​​​ ಲೋಕದ ಬಲಿಷ್ಠ ತಂಡಗಳಲ್ಲಿ ಒಂದು. ಆದ್ರೂ ಇಲ್ಲಿತನಕ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. 16 ಸೀಸನ್​ಗಳಿಂದ ಫ್ಯಾನ್ಸ್ ಹಾರ್ಟ್​ ಬ್ರೇಕ್ ಆಗಿದೆ. ಈ ಸಲವೂ ರೆಡ್​​​ ಆರ್ಮಿಯ ಟ್ರೋಫಿ ಕನಸು ಬಹುತೇಕ ಮುಗಿದಿದೆ. ಜನಪ್ರೀಯತೆ ಮಾತ್ರ ಕುಗ್ಗಿಲ್ಲ. ಕಪ್​ ಬರ ನಡುವೆಯೂ ವರ್ಷದಿಂದ ವರ್ಷಕ್ಕೆ ಆರ್​ಸಿಬಿ ಪಾಪ್ಯುಲಾರಿಟಿ ಹೆಚ್ಚುತ್ತಲೆ ಇದೆ. ಟ್ರೋಫಿ ಜಯಿಸದಿದ್ರೂ ಆರ್​ಸಿಬಿ ವಿಶ್ವದ ಟಾಪ್​​​​-5 ಸ್ಪೋರ್ಟ್ಸ್ ತಂಡಗಳಲ್ಲಿ ಒಂದಾಗಿದೆ. ಈ ಅಂಶಗಳೇ ರೆಡ್ ಆರ್ಮಿಯ ಜನಪ್ರೀಯತೆಗೆ ಕಾರಣವಾಗಿದೆ.

ಇದನ್ನೂ ಓದಿ:ಕಿಂಗ್​ ಕೊಹ್ಲಿ ಟಾರ್ಗೆಟ್​ IPL ಕಪ್​ ಅಲ್ಲ.. ಯುವ ಶಕ್ತಿಯನ್ನೇ ಮೀರಿಸಿದ ಕೊಹ್ಲಿಯ ರೋಚಕ ಕಥೆ..!

publive-image

ರೀಸನ್ 1: ಸೂಪರ್ ​​ಸ್ಟಾರ್​ಗಳ ದಂಡು
ಆರ್​ಸಿಬಿ ಮ್ಯಾನೇಜ್​​ಮೆಂಟ್​ ಮೊದಲ ದಿನದಿಂದಲೇ ತಂಡವನ್ನ ಬ್ರ್ಯಾಂಡ್​​ ಆಗಿ ಬೆಳೆಸಲು ಚಿಂತಿಸಿತ್ತು. ಹಾಗಾಗಿ ಸೂಪರ್ ಸ್ಟಾರ್​​​​ಗಳಿಗೆ ಮಣೆ ಹಾಕ್ತು. ದಿಗ್ಗಜರಾದ ರಾಹುಲ್ ದ್ರಾವಿಡ್​​, ಅನಿಲ್​ ಕುಂಬ್ಳೆ, ಕ್ರಿಸ್ ಗೇಲ್​​ ಹಾಗೂ ಎಬಿ ಡಿವಿಲಿಯರ್ಸ್​ ಆರ್​ಸಿಬಿ ಪರ ಆಡಿದ್ದಾರೆ. ಗ್ಲೋಬಲ್ ಐಕಾನ್​ ಕಿಂಗ್ ಕೊಹ್ಕಿ ಆರ್​ಸಿಬಿಯ ದೊಡ್ಡ ಶಕ್ತಿಯಾಗಿದ್ದಾರೆ. ಅವರೆಲ್ಲರ ಪಾಪ್ಯುಲಾರಿಟಿ ಫ್ರಾಂಚೈಸಿ ಜನಪ್ರೀಯತೆಗೆ ನೆರವಾಗ್ತಿದೆ.

ರೀಸನ್​ - 2: RCB V/S CSK ಜಿದ್ದಾಜಿದ್ದಿನ ಕಾಳಗ
ಪ್ರತಿ ಸೀಸನ್​​ನಲ್ಲಿ ಆರ್​ಸಿಬಿ ಹಾಗೂ ಸಿಎಸ್​​ಕೆ ನಡುವಿನ ಪಂದ್ಯ ತೀವ್ರ ಪೈಪೋಟಿ ಪಂದ್ಯಕ್ಕೆ ಸಾಕ್ಷಿಯಾಗುತ್ತೆ. ಈ ಪಂದ್ಯವನ್ನ ಫ್ಯಾನ್ಸ್ ಮುಗಿಬಿದ್ದು ನೋಡ್ತಾರೆ. ಉಭಯ ತಂಡಗಳ ಕದನಕ್ಕೆ ರಾಜಕೀಯ ಹಾಗೂ ಭೌಗೋಳಿಕ ಟಚ್​​​ ನೀಡಲಾಗುತ್ತೆ. ಪರಿಣಾಮ ರೆಡ್​​​ ಆರ್ಮಿ ಬರೀ ದುಡ್ಡನ್ನಷ್ಟೆ ಅಲ್ಲದೆ, ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತೆ.

ಇದನ್ನೂ ಓದಿ:ವಿಶ್ವಕ್ಕೆ ಮತ್ತೊಂದು ಸಾಂಕ್ರಾಮಿಕದ ಎಚ್ಚರಿಕೆ; ಎಬೋಲಾ ವೈರಸ್​ನ ಮೂಲ ‘ಕಿಟಮ್ ಗುಹೆ’ಯಿಂದ ಭಯಾನಕ ಸುದ್ದಿ!

publive-image

ರೀಸನ್​-3: ಲಾಯಲ್ ಅಂಡ್ ​​​ಸ್ಟ್ರಾಂಗ್​​​ ಫ್ಯಾನ್ ಬೇಸ್
ಅಂಡರ್​ ಪರ್ಫಾಮೆನ್ಸ್​​ ತಂಡ ಹೆಚ್ಚು ಜನಪ್ರಿಯ ಆಗುವಲ್ಲಿ ಅಭಿಮಾನಿಗಳ​​​​ ಪಾತ್ರ ದೊಡ್ಡದಿದೆ. ಈ ಫ್ಯಾನ್ಸ್​​ಗಾಗಿನೇ ಆರ್​ಸಿಬಿ ಫ್ರಾಂಚೈಸಿ ಪ್ರತಿವರ್ಷ ವಿಭಿನ್ನ ಕಾರ್ಯಕ್ರಮಗಳನ್ನ ಏರ್ಪಡಿಸುತ್ತೆ. ಬೋಲ್ಡ್​ ಡೈರಿ, ಆರ್​ಸಿಬಿ ಗೇಮ್​​​, ಆರ್​ಸಿಬಿ ಇನ್​ಸೈಡರ್​​​​​​ ಹಾಗೂ ಆರ್​ಸಿಬಿ 12TH ಮ್ಯಾನ್​​ ಮುಂತಾದ ಕಾರ್ಯಕ್ರಮಗಳು, ಆರ್​​ಸಿಬಿ ಆಟಗಾರರ ಆನ್​​ & ಆಫ್ ದಿ ಫೀಲ್ಡ್​​​​ ಸುದ್ದಿಗಳನ್ನ ಫ್ಯಾನ್ಸ್​​​ಗೆ ತಿಳಿಸುತ್ತೆ. ಇದರಿಂದ ಫ್ರಾಂಚೈಸಿ ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದೆ.

ರೀಸನ್​ - 4: ಫ್ರಾಂಚೈಸಿಯ ಮನಿ ಗೇಮ್
ಜನಪ್ರೀಯತೆಯಲ್ಲಿ ತಂಡದ ಮನಿ ಗೇಮ್​ ಪಾತ್ರ ದೊಡ್ಡದಿದೆ. ಆರ್ಥಿಕವಾಗಿ ಫ್ರಾಂಚೈಸಿ ಹಲವು ಆಯಾಮದಿಂದ ದುಡ್ಡು ಗಳಿಸುತ್ತೆ. ಚಿನ್ನಸ್ವಾಮಿಯಲ್ಲಿ ಪ್ರತಿ ಪಂದ್ಯ ನಡೆದಾಗಲೂ ಸ್ಟೇಡಿಯಂ ಫುಲ್​ ಆಗುತ್ತೆ. ದುಬಾರಿ ಟಿಕೆಟ್ ದರ ಇಟ್ಟು ಜೇಬು ತುಂಬಿಸಿಕೊಳ್ಳುತ್ತೆ. ಅಲ್ಲದೇ ಸ್ಪಾನ್ಸರ್​​ಶಿಪ್​​​​, ಮೀಡಿಯಾ ರೈಟ್ಸ್​ನಿಂದ ನೂರಾರು ಕೋಟಿ ಹಣ ಗಳಿಸುತ್ತೆ. ಬಂದ ದುಡ್ಡಿನಲ್ಲಿ ಸ್ಟಾರ್​​​ ಆಟಗಾರರನ್ನ ಖರೀದಿಸಿ ಪಾಪ್ಯುಲಾರಿಟಿ ಹೆಚ್ಚಿಸಿಕೊಳ್ಳುತ್ತೆ.

ಇದನ್ನೂ ಓದಿ:ಖಾಸಗಿ ಬ್ಯಾಂಕ್ ಸಿಬ್ಬಂದಿ ದರ್ಪ, ಸಾಲ ವಸೂಲಿಗೆ ಬಂದು ಮಹಿಳೆಗೆ ಕಪಾಳಮೋಕ್ಷ..!

publive-image

ರೀಸನ್​-5: ಸಮಾಜಮುಖಿ ಕಾರ್ಯಗಳು
ಸಮಾಜದ ಬಗೆಗಿನ ಕಾಳಜಿ ಕೂಡ ಆರ್​ಸಿಬಿ ದೊಡ್ಡ ಜನಪ್ರಿಯತೆ ತಂದುಕೊಟ್ಟಿದೆ. ಪ್ರತಿ ಸೀಸನ್​ನಲ್ಲಿ ಒಂದು ಪಂದ್ಯದಲ್ಲಿ ಗ್ರೀನ್​​ ಜರ್ಸಿ ಧರಿಸಿ ಕಣಕ್ಕಿಳಿಯುತ್ತೆ. ಅಭಿಮಾನಿಗಳಲ್ಲಿ ಸ್ವಚ್ಛತೆ ಹಾಗೂ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಇದ್ರ ಭಾಗವಾಗಿ ಬೆಂಗಳೂರಿನ ಕೆಲ ಕೆರೆಗಳ ಹೂಳೆತ್ತುವ ಉತ್ತಮ ಕೆಲಸಕ್ಕೂ ಆರ್​ಸಿಬಿ ಕೈ ಹಾಕಿದೆ. ಈ ಎಲ್ಲಾ ಕಾರಣಗಳಿಂದ ಆರ್​ಸಿಬಿ ಐಪಿಎಲ್​​ನ ಜನಪ್ರಿಯ ತಂಡವಾಗಿ ಹೊರಹೊಮ್ಮಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment