/newsfirstlive-kannada/media/post_attachments/wp-content/uploads/2024/04/RCB-Today.jpg)
ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​​ನಲ್ಲಿರೋ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಟೀಮ್​​​​​ ಚೆನ್ನೈ ವಿರುದ್ಧ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಚೆನ್ನೈ ವಿರುದ್ಧ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಆರ್​​ಸಿಬಿ ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಚೆನ್ನೈ ವಿರುದ್ಧ ಆರ್​​ಸಿಬಿ ಗೆಲ್ಲಲು ಈ ಸ್ಟಾರ್​​ ಆಟಗಾರ ಆಡಲೇಬೇಕಿದೆ.
ಯೆಸ್​​, ಆರ್​​ಸಿಬಿ ಬ್ಯಾಕ್​ ಟು ಬ್ಯಾಕ್​ 5 ಪಂದ್ಯ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿದೆ. ಇದು ಇಡೀ ಆರ್​​ಸಿಬಿ ಫ್ಯಾನ್ಸ್​ಗೆ ಬಹಳ ಖುಷಿ ತಂದಿದೆ. ಮೊದಲರ್ಧ ಸೀಸನ್​ನಲ್ಲಿ ಆರ್​​ಸಿಬಿ ಉತ್ತಮ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡು ವಿಭಾಗದಲ್ಲೂ ಫೇಲ್ಯೂರ್​ ಆಗಿತ್ತು. ಆದರೆ, ಒಬ್ಬ ಆಟಗಾರನ ಆಗಮನದಿಂದ ಆರ್​​ಸಿಬಿ ಗೆದ್ದು ಪ್ಲೇ ಆಫ್​ ರೇಸ್​ನಲ್ಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
/newsfirstlive-kannada/media/post_attachments/wp-content/uploads/2024/05/Swapnil-Singh1.jpg)
ಸ್ವಪ್ನಿಲ್​​ ಸಿಂಗ್​ ಆರ್​​ಸಿಬಿ ತಂಡದ ಯುವ ಆಟಗಾರ. ಈತ ಬಂದ ಮೇಲೆ ಆರ್​​ಸಿಬಿ ಸತತ 5 ಪಂದ್ಯ ಗೆದ್ದಿದೆ. ಅವರ ಬೌಲಿಂಗ್​​ನಿಂದಲೇ ತಂಡಕ್ಕೆ ಹೆಚ್ಚಿನ ಶಕ್ತಿ ಸಿಕ್ಕಿದೆ. ಸ್ವಪ್ನಿಲ್​ ಆರ್​​ಸಿಬಿ ತಂಡದಲ್ಲಿರೋದು ನಮ್ಮ ಅದೃಷ್ಟವಾಗಿದೆ. ಈತ ಮುಂದಿನ ಪಂದ್ಯದಲ್ಲಿ ಆಡಲೇಬೇಕು, ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಈತನಿಂದ 4 ಓವರ್​ ಮಾಡಿಸಬೇಕು ಎಂಬುದು ಫ್ಯಾನ್ಸ್ ಆಸೆ. ಸ್ವಪ್ನಿಲ್​ ಸಿಂಗ್​ ಕಳೆದ 5 ಪಂದ್ಯಗಳಲ್ಲಿ 6 ವಿಕೆಟ್​​ ಪ್ರಮುಖ ವಿಕೆಟ್​ಗಳನ್ನು ತೆಗೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us