newsfirstkannada.com

ಆರ್​​​ಸಿಬಿಗೆ ಬಿಗ್​ ಶಾಕ್​​.. ಹೈದರಾಬಾದ್​​ ವಿರುದ್ಧ ಪಂದ್ಯದಿಂದ ಸ್ಟಾರ್​ ಪ್ಲೇಯರ್​ ಔಟ್​

Share :

Published April 13, 2024 at 7:20pm

    5 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿಕೆಟ್​ ಪಡೆಯಲಾಗದೇ ಸ್ಟಾರ್​​ ವೇಗಿ ಮೊಹಮ್ಮದ್​ ಸಿರಾಜ್​​ ಬೌಲಿಂಗ್​ನಲ್ಲಿ ವೈಫಲ್ಯ

    ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಿಂದ ಮೊಹಮ್ಮದ್​ ಸಿರಾಜ್​ ಔಟ್​​!

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಶುರುವಾಗಿದೆ. ಈ ಸೀಸನ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬ್ಯಾಕ್​ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಹೀನಾಯ ಬೌಲಿಂಗ್​ ಕಾರಣಕ್ಕೆ ಆರ್​​​ಸಿಬಿ ಮುಂಬೈ ಇಂಡಿಯನ್ಸ್​ ವಿರುದ್ಧ ಸೋತಿದೆ. ಇದರ ಮಧ್ಯೆ ಆರ್​​ಸಿಬಿ ಬೌಲರ್​ ಮೊಹಮ್ಮದ್​​ ಸಿರಾಜ್​ ​ವಿರುದ್ಧ ಫ್ಯಾನ್ಸ್​​ ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ ಕಾರಣ ಆರ್​​​ಸಿಬಿ ಬ್ಯಾಟಿಂಗ್​ ಮತ್ತು ಬೌಲಿಂಗ್​​ ವಿಭಾಗದಲ್ಲಿ ಫೇಲ್ಯೂರ್​ ಆಗಿರುವುದು. ಅದರಲ್ಲೂ ತಂಡದ ಸೋಲಿಗೆ ಬೌಲಿಂಗ್‌ ವಿಭಾಗದ ಕಳಪೆ ಪ್ರದರ್ಶನ ಕೂಡ ಕಾರಣವಾಗಿದೆ. ಪ್ರತಿ ಪಂದ್ಯದಲ್ಲೂ ಬೌಲರ್​ಗಳು ಭಾರೀ ರನ್​ಗಳು ಬಿಟ್ಟುಕೊಡೋ ಮೂಲಕ ಬಹಳ ದುಬಾರಿ ಆಗುತ್ತಿದ್ದಾರೆ.

ಆರ್‌ಸಿಬಿ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್‌ ಪಡೆಯಲು ಸಾಧ್ಯವಾಗದೆ ಫೇಲ್ಯೂರ್​ ಆಗಿದ್ದಾರೆ. ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟು ದುಬಾರಿಯಾಗೋ ಮೂಲಕ ಕಳಪೆ ಫಾರ್ಮ್​ನಲ್ಲಿ ಇದ್ದಾರೆ. ಸಿರಾಜ್ 6 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಇವರನ್ನು ಬೆಂಚ್​ ಕಾಯಿಸಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಸನ್​ರೈಸರ್ಸ್​​ ಹೈದಾರಾಬಾದ್​​ ವಿರುದ್ಧ ನಡೆಯೋ ಪಂದ್ಯಕ್ಕೆ ಹಾಕಿಕೊಳ್ಳಬಾರದು ಎಂದು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಮಾಡಲಾಗುತ್ತಿದೆ. ಆರ್​​​ಸಿಬಿ ಮ್ಯಾನೇಜ್ಮೆಂಟ್​ ಕೂಡ ಸಿರಾಜ್​ಗೆ ಕೊಕ್​​ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​​; ಟೀಮ್​ ಇಂಡಿಯಾದಲ್ಲಿ ಕೊಹ್ಲಿಗೆ ಹೊಸ ಜವಾಬ್ದಾರಿ; ಬಿಸಿಸಿಐನಿಂದ ಮಹತ್ವದ ನಿರ್ಧಾರ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​​ಸಿಬಿಗೆ ಬಿಗ್​ ಶಾಕ್​​.. ಹೈದರಾಬಾದ್​​ ವಿರುದ್ಧ ಪಂದ್ಯದಿಂದ ಸ್ಟಾರ್​ ಪ್ಲೇಯರ್​ ಔಟ್​

https://newsfirstlive.com/wp-content/uploads/2024/04/Kohli_Andy-Flower.jpg

Load More