2024ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಕೆಕೆಆರ್ಗೆ ಗೆಲುವು
ಐಪಿಎಲ್ ಇತಿಹಾಸದಲ್ಲೇ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಕೆಕೆಆರ್
ಕಪ್ ಗೆದ್ದಿದ್ದೂ ಕೆಕೆಆರ್ ಆದ್ರೂ ಐಪಿಎಲ್ಗೆ ಕಿಂಗ್ ಮಾತ್ರ ಆರ್ಸಿಬಿ ಬ್ಯಾಟರ್ ಕೊಹ್ಲಿ!
ಇತ್ತೀಚೆಗೆ ಚೆನ್ನೈನ ಎಂ.ಎ ಚಿದಂಬರಂ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗಿದೆ.
ಕಪ್ ಗೆದ್ದಿದ್ದು ಕೆಕೆಆರ್ ಆದ್ರೂ ದಾಖಲೆ ಬರೆದಿದ್ದು ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಐಪಿಎಲ್ ಇತಿಹಾಸದಲ್ಲೇ ಒಂದಕ್ಕಿಂತ ಹೆಚ್ಚು ಬಾರಿ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಎಂದು ಕೊಹ್ಲಿ ಆಗಿದ್ದಾರೆ.
ಇನ್ನು, 2024ರ ಐಪಿಎಲ್ ಸೀಸನ್ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ.
ಈ ಹಿಂದೆ ಕೊಹ್ಲಿ 2016ರ ಐಪಿಎಲ್ ಸೀಸನ್ನಲ್ಲಿ ಮೊದಲ ಬಾರಿಗೆ 973 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದು ಐಪಿಎಲ್ನ ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ. ರುತುರಾಜ್ ಗಾಯಕ್ವಾಡ್ 583 ಮತ್ತು ರಿಯಾನ್ ಪರಾಗ್ 573 ರನ್ ಗಳಿಸಿದ್ದಾರೆ.
ಇದನ್ನೂ ಓದಿ: KKR ಟ್ರೋಫಿ ಗೆಲುವಿನ ಹಿಂದಿದ್ದಾರೆ ಇಬ್ಬರು ಮಾಸ್ಟರ್ ಮೈಂಡ್ಗಳು.. ಗಂಭೀರ್ ಜೊತೆ ಕೈ ಜೋಡಿಸಿದ್ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ