newsfirstkannada.com

ಆರ್​​​ಸಿಬಿಗೆ IPL ವಿನ್ನಿಂಗ್​ ಕ್ಯಾಪ್ಟನ್​ ಎಂಟ್ರಿ; ಫಾಫ್​ ಸ್ಥಾನ ತುಂಬಲಿದ್ದಾರೆ ಸ್ಫೋಟಕ ಬ್ಯಾಟರ್​​!

Share :

Published September 2, 2024 at 6:02pm

    ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್

    ಐಪಿಎಲ್​ ವಿನ್ನಿಂಗ್​ ಕ್ಯಾಪ್ಟನ್​ಗೆ ಆರ್​​ಸಿಬಿ ತಂಡದ ಮಣೆ

    ಸ್ಟಾರ್​ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಲು ಆರ್​​ಸಿಬಿ ಪ್ಲಾನ್​​​!

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಇನ್ನೂ 6 ತಿಂಗಳು ಇದೆ. ಈ ಮುನ್ನವೇ ಐಪಿಎಲ್​​ ಜನರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿದೆ. ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೂ ಮೊದಲು ಯಾರನ್ನು ರಿಲೀಸ್ ಮಾಡಬೇಕು? ಯಾರನ್ನು ಉಳಿಸಿಕೊಳ್ಳಬೇಕು? ಎಂದು ಐಪಿಎಲ್​ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಹಲವು ತಂಡಗಳಲ್ಲಿ ಸ್ಟಾರ್ ಆಟಗಾರರ ಬದಲಾವಣೆಯಾಗಲಿದೆ.

ಈಗಾಗಲೇ ಕೆಲವು ಸ್ಟಾರ್ ಆಟಗಾರರಿಗೆ ಹಲವು ತಂಡಗಳಿಂದ ಬಿಗ್​ ಆಫರ್​ ಬಂದಿದೆ. ಈಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸಂಬಂಧಿಸಿದ ಬಿಗ್​ ಅಪ್ಡೇಟ್​ ಒಂದು ಹೊರಬಿದ್ದಿದೆ. ಐಪಿಎಲ್​ ವಿನ್ನಿಂಗ್​​ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ಗೆ ಆರ್​​ಸಿಬಿ ಬಿಗ್​ ಆಫರ್​ ಕೊಟ್ಟಿದೆ. ಕೆಕೆಆರ್​ನಿಂದ ಶ್ರೇಯಸ್​ ಅಯ್ಯರ್​ ಹೊರಬೀಳುವುದು ಬಹುತೇಕ ಖಚಿತವಾಗಿದ್ದು, ಆರ್​​ಸಿಬಿ ತಂಡ ಇವರಿಗೆ ಕ್ಯಾಪ್ಟನ್ಸಿ ಆಫರ್​ ನೀಡಿದೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಈ ಬಾರಿ ಮುಂಬೈ ಇಂಡಿಯನ್ಸ್ ಸ್ಟಾರ್​ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಕರೆ ತರಲು ಕೆಕೆಆರ್ ಮುಂದಾಗಿದೆ. ಹಾಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಿಂದ ಅಯ್ಯರ್​ಗೆ ಕೊಕ್​ ನೀಡುವುದು ಕನ್ಫರ್ಮ್​ ಆಗಿದೆ.

ಫಾಫ್​ ಸ್ಥಾನ ತುಂಬ್ತಾರಾ ಅಯ್ಯರ್​​?

ಕಳೆದ ಸೀಸನ್​​ನಲ್ಲಿ ಆರ್​​ಸಿಬಿ ತಂಡವನ್ನು ಫಾಫ್​ ಡುಪ್ಲೆಸಿಸ್​​ ಪ್ಲೇ ಆಫ್​ಗೆ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಈಗ ಆರ್​​ಸಿಬಿ ಮುಂದಿನ ಸೀಸನ್​ಗೆ ನಾಯಕ ಫಾಫ್​ ಅವರನ್ನು ಬದಲಿಸಲು ನಿರ್ಧರಿಸಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಫಾಫ್​ ಜಾಗಕ್ಕೆ ಆರ್​​ಸಿಬಿ ಫ್ರಾಂಚೈಸಿ ಶ್ರೇಯಸ್​ ಅಯ್ಯರ್​ ಅವರನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತಂಡದಿಂದ ರೋಹಿತ್​ ಶರ್ಮಾರನ್ನೇ ಕೈ ಬಿಟ್ಟ ಭಾರತದ ಮುಖ್ಯ ಕೋಚ್​​ ಗಂಭೀರ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿಗೆ IPL ವಿನ್ನಿಂಗ್​ ಕ್ಯಾಪ್ಟನ್​ ಎಂಟ್ರಿ; ಫಾಫ್​ ಸ್ಥಾನ ತುಂಬಲಿದ್ದಾರೆ ಸ್ಫೋಟಕ ಬ್ಯಾಟರ್​​!

https://newsfirstlive.com/wp-content/uploads/2024/05/RCB_Play-off.jpg

Load More