newsfirstkannada.com

RCB ಐಪಿಎಲ್​​​​​​ನ ಮೋಸ್ಟ್ ಅನ್​​ಲಕ್ಕಿ ಟೀಮ್; ಬಿಟ್ಟು ಹೋದವರಿಗೆಲ್ಲ ಖುಲಾಯಿಸಿದೆ ಅದೃಷ್ಟ..!

Share :

Published April 14, 2024 at 12:35pm

    17ನೇ IPLನಲ್ಲಿ RCB ಮಾಜಿ ಪ್ಲೇಯರ್​ಗಳ ರಣಾರ್ಭಟ

    ಚೆನ್ನೈ ಮ್ಯಾಚ್​​​ ವಿನ್ನರ್ ಆಗಿ ಹೊರಹೊಮ್ಮಿದ ಶಿವಂ ದುಬೆ

    ಆರೆಂಜ್ ಆರ್ಮಿ ಜರ್ಸಿಯಲ್ಲಿ ಧೂಳೆಬ್ಬಿಸಿದ ಕ್ಲಾಸೆನ್​​​​

ಸತತ ಸೋಲಿನ ಬರೆ ಒಂದೆಡೆ. ಇನ್ನೊಂದೆಡೆ ಫ್ಯಾನ್ಸ್​​​ ಆಕ್ರೋಶ. ಸತತ ನಾಲ್ಕು ಸೋಲಿನಿಂದ ಆರ್​ಸಿಬಿ ಕಂಗೆಟ್ಟಿದೆ. ಅಗೈನ್​​​ ಆರ್​ಸಿಬಿ ಐಪಿಎಲ್​ ಮೋಸ್ಟ್​ ಅನ್​​ಲಕ್ಕಿ ಟೀಮ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಬರೀ ರಿಸಲ್ಟ್ ವಿಚಾರದಲ್ಲಿ ಅಷ್ಟೇ ಅಲ್ಲ. ಆಟಗಾರರ ವಿಷ್ಯದಲ್ಲಿ ಕೂಡ ಹೌದು. ಆರ್​ಸಿಬಿ ಸೈನ್ಯದಲ್ಲಿದ್ದಾಗ ಸೈಲೆಂಟ್ ಆದವರು, ಬೇರೆ ಫ್ರಾಂಚೈಸಿ ಸೇರಿದ್ದೆ ತಡ ಟಾಕ್​ ಆಫ್ ಟೌನ್ ಆಗಿದ್ದಾರೆ.

RCB ಐಪಿಎಲ್​​​​​​ನ ಮೋಸ್ಟ್ ಅನ್​​ಲಕ್ಕಿ ಟೀಮ್​​​​

ಅನ್​​​​​​ಲಕ್ಕಿ..! ಬಹುಶಃ ಐಪಿಎಲ್​​​​​ ನಲ್ಲಿ ತುಂಬಾ ಅನ್​​ಲಕ್ಕಿ ತಂಡ ಅಂತವೊಂದಿದ್ರೆ ಅದು ರಾಯಲ್ ಚಾಲೆಂಜರ್ಸ್​ ಬೆಂಗಳೂರು. 16 ಸೀಸನ್​ನಿಂದ ಕಪ್ ಗೆದ್ದಿಲ್ಲ ಅನ್ನೋದಕ್ಕೆ ಮಾತ್ರ ಅನ್​​ಲಕ್ಕಿ ಟೀಮ್ ಅಂತಲ್ಲ. ಅನೇಕ ಸ್ಟಾರ್​ ಪ್ಲೇಯರ್ಸ್​ ಆರ್​ಸಿಬಿಗೆ ಬಂದು ಹೋಗಿದ್ದಾರೆ. ಅಂತಹ ಆಟಗಾರರು ಆರ್​ಸಿಬಿ ತಂಡದಲ್ಲಿದ್ರೂ ಇಲ್ಲದಂತಿದ್ರು. ಆದ್ರೆ ಆರ್​ಸಿಬಿ ಬಿಟ್ಟು ಬೇರೆ ಫ್ರಾಂಚೈಸಿ ಸೇರಿದ್ದೇ ಬಂತು. ಅವರ ನಸೀಬೆ ಬದಲಾಗಿ ಬಿಟ್ಟಿದೆ. ಇಲ್ಲಿ ತಿರಸ್ಕರಿಸಲ್ಪಟ್ಟವರು, ಬೇರೆಡೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಗೇಮ್ ಚೇಂಜರ್ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!

ಸ್ಪಿನ್ ಸ್ಪೀಡ್​​ 2019 ಹಾಗೂ 2020 ರಲ್ಲಿ ಆರ್​ಸಿಬಿ ಪರ ಆಡಿ ಮಿಂಚಿನಂತೆ ಮರೆಯಾದ್ರು. 2021ರಲ್ಲಿ ಬಿಗ್ ಹಿಟ್ಟರ್​ನನ್ನ ಆರ್​ಸಿಬಿ ತಂಡದಿಂದ ಕೈಬಿಡ್ತು. ಬಳಿಕ ರಾಜಸ್ಥಾನ ಸೇರಿದ್ರು. 2022 ರಲ್ಲಿ ಸಿಎಸ್​ಕೆ ಸೇರಿದ ದುಬೆ ಕರಿಯರ್ ಕಂಪ್ಲೀಟ್​​​ ಬದಲಾಯ್ತು. ಅದೇ ವರ್ಷ 289 ರನ್ ಗಳಿಸಿದ್ರೆ 2023 ರಲ್ಲಿ ಅಮೋಘ 418 ರನ್ ಗಳಿಸಿ ಚೆನ್ನೈಗೆ ಟ್ರೋಫಿ ಗೆಲ್ಲಿಸಿಕೊಟ್ರು. ಪ್ರಸಕ್ತ ಐಪಿಎಲ್​​ನಲ್ಲಿ 176 ರನ್ ಗಳಿಸಿದ್ದು ಮತ್ತೊಮ್ಮೆ ಟ್ರೋಪಿ ಗೆಲ್ಲಿಸಿಕೊಡುವ ಪಣ ತೊಟ್ಟಿದ್ದಾರೆ.

ಆರ್​ಸಿಬಿಗೆ ತಲೆನೋವು​​​.. ಹೈದ್ರಾಬಾದ್​​ಗೆ ಹೀರೋ..!
ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​​ಗೆ​​​​​​​​​​​​​​ 2016 ಹಾಗೂ 2017ರಲ್ಲಿ ಆರ್​ಸಿಬಿ ಪರ ಆಡುವ ಅವಕಾಶ ಸಿಕ್ಕಿತ್ತು. ಆದರೆ ಹೆಚ್ಚೇನೂ ಅವಕಾಶ ಸಿಗ್ಲಿಲ್ಲ. ನಂತರ ಐಪಿಎಲ್​​ನಿಂದ ದೂರ ಉಳಿದಿದ್ದ ಟ್ರಾವಿಸ್​ ಈ ಸಲ ಸನ್​ರೈಸರ್ಸ್​ ಪರ ಕಣಕ್ಕಿಳಿದಿದ್ದಾರೆ. ಆಡಿದ 4 ಪಂದ್ಯದಲ್ಲಿ 133 ರನ್ ಸಿಡಿಸಿ ಶೈನ್ ಆಗಿದ್ದು, ಹೈದ್ರಾಬಾದ್​ ಪಾಲಿಗೆ ಮ್ಯಾಚ್ ವಿನ್ನರ್ ಆಗಿ ಬದಲಾಗಿದ್ದಾರೆ.

ಇದನ್ನೂ ಓದಿ:ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?

ಆರೆಂಜ್ ಆರ್ಮಿ ಜರ್ಸಿಯಲ್ಲಿ ಧೂಳೆಬ್ಬಿಸಿದ ಕ್ಲಾಸೆನ್​​​
ಸ್ಫೋಟಕ ಆಟಕ್ಕೆ ಹೆಸರುವಾಸಿಯಾದ ಹೆನ್ರಿಚ್​​​​ ಕ್ಲಾಸೆನ್​​​ ಕೂಡ ಆರ್​​​​​​ಸಿಬಿ ತಂಡದ ಭಾಗವಾಗಿದ್ದರು. 2019ರಲ್ಲಿ ಕೊಹ್ಲಿ ನಾಯಕತ್ವದಲ್ಲಿ 3 ಪಂದ್ಯಗಳನ್ನಾಡಿದ್ರು. ಅಷ್ಟೇ ಬಳಿಕ ಆಫ್ರಿಕಾ ಬ್ಯಾಟರ್​​​​ ಆರ್​ಸಿಬಿಯಿಂದ ಹೊರಬಿದ್ರು. ಈ ಸಲ ಹೈದ್ರಾಬಾದ್ ಆಡ್ತಿರೋ ಕ್ಲಾಸನ್​​​ ಧೂಳೆಬ್ಬಿಸಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಆಡಿದ ಐದು 186 ರನ್ ಚಚ್ಚಿದ್ದಾರೆ.

ರಾಹುಲ್​​​​​​​ ಅಂದು ಸಾಮಾನ್ಯ ಪ್ಲೇಯರ್​​.. ಇಂದು ಕ್ಯಾಪ್ಟನ್​​​..!
ಕನ್ನಡಿಗ ಕೆ.ಎಲ್​.​ ರಾಹುಲ್ ಆರ್​ಸಿಬಿಯಲ್ಲೆ ಐಪಿಎಲ್​ ಜರ್ನಿ ಶುರುಮಾಡಿದ್ರು. ಅದ್ಭುತ ಪ್ರತಿಭೆಯ ರಾಹುಲ್​ಗೆ ಸೂಕ್ತ ಅವಕಾಶಗಳು ಸಿಗ್ತಿಲ್ಲ. ಆರ್​ಸಿಬಿ ಯಿಂದ ಹೊರಬಿದ್ದ ರಾಹುಲ್​ ಅದೃಷ್ಟ ಖುಲಾಯಿಸ್ತು. ಪಂಜಾಬ್​​​ ತಂಡದಲ್ಲಿದ್ದಾಗ ಆರೆಂಜ್ ಕ್ಯಾಪ್​​​​​ ಮುಡಿಗೇರಿಸಿಕೊಂಡರು. ಕಳೆದ ಮೂರು ಸೀಸನ್​ಗಳಿಂದ ಲಕ್ನೋ ತಂಡದ ಕ್ಯಾಪ್ಟನ್​ ಆಗುವ ಅದೃಷ್ಟ ಬೇರೆ ಒಲಿದಿದೆ.

ಇದನ್ನೂ ಓದಿ:ಇಸ್ರೇಲ್ ಮೇಲೆ ಯುದ್ಧ ಸಾರಿದ ಇರಾನ್; ಸ್ಟ್ರಾಂಗ್ ಮೆಸೇಜ್ ಕೊಟ್ಟ ಭಾರತ..

ಗುಜರಾತ್​ನಲ್ಲಿ ಆಶಿಷ್ ನೆಹ್ರಾಗೆ ತೆರೆದ ಅದೃಷ್ಟ ಬಾಗಿಲು
ಬರೀ ಆಟಗಾರರು ಅಷ್ಟೆ ಅಲ್ಲ.. ಆರ್​​ಸಿಬಿ ಬಿಟ್ಟು ಹೋದ ಕೋಚ್​​ಗಳ ನಸೀಬು ಕೂಡ ಚೇಂಜ್ ಆಗಿದೆ. ಆಶಿಶ್ ನೆಹ್ರಾ 2018 ರಲ್ಲಿ ಆರ್​ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ರು. ಆದ್ರೆ ಯಶಸ್ಸು ಕಾಣಲಿಲ್ಲ. ಇದೇ ನೆಹ್ರಾ ಗುಜರಾತ್ ಟೈಟನ್ಸ್ ಹೆಡ್​ಕೋಚ್ ಆಗಿದ್ದೆ ಬಂತು. 2022 ರಲ್ಲಿ ಚಾಂಪಿಯನ್ ಹಾಗೂ 2023 ರಲ್ಲಿ ತಂಡ ರನ್ನರ್​ಅಪ್​ ಆಯ್ತು.

ಇದನ್ನೂ ಓದಿ: 7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಯುಟ್ಯೂಬ್ ಸ್ಟಾರ್​ ಜೋಡಿ

ಇವರಷ್ಟೇ ಅಲ್ಲದೇ ಶೇನ್ ವಾಟ್ಸನ್​ ಹಾಗೂ ಸ್ಪಿನ್ನರ್​ ಮೊಯೀನ್ ಅಲಿ ಕೂಡ ಆರ್​ಸಿಬಿ ತಂಡದಲ್ಲಿದ್ದವರೇ. ಬ್ಯಾಡ್​ಫಾರ್ಮ್​ನಿಂದ ಆರ್​ಸಿಬಿಯಿಂದ ಹೊರಬಿದ್ದ ಇವರು ನಂತರ ಸಿಎಸ್​ಕೆ ಸೇರಿ ರನ್ ಹೊಳೆಯನ್ನ ಹರಿಸಿದ್ರು. ಸದ್ಯ ವಾಟ್ಸನ್​​​​​ ಐಪಿಎಲ್ ಆಡ್ತಿಲ್ಲ. ಆದ್ರೆ ಅಲಿ ಚೆನ್ನೈ ತಂಡದ ನಂಬಿಗಸ್ಥ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. ಈಗ ನೀವೆ ಹೇಳಿ ನಾವ್ಯಾಕೆ ಆರಂಭದಲ್ಲಿ ಆರ್​ಸಿಬಿ ತಂಡ ಅನ್​​ಲಕ್ಕಿ ತಂಡವೆಂದು ಹೇಳಿದ್ವಿ ಅಂತ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಐಪಿಎಲ್​​​​​​ನ ಮೋಸ್ಟ್ ಅನ್​​ಲಕ್ಕಿ ಟೀಮ್; ಬಿಟ್ಟು ಹೋದವರಿಗೆಲ್ಲ ಖುಲಾಯಿಸಿದೆ ಅದೃಷ್ಟ..!

https://newsfirstlive.com/wp-content/uploads/2024/04/IPL-STAR.jpg

Load More