newsfirstkannada.com

RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

Share :

Published May 19, 2024 at 1:03pm

    2 ತಂಡದಲ್ಲಿ ಯಾರ್​ ಗೆಲ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ

    ಎಂಎಸ್​ ಧೋನಿಯ ಮುಂದಿನ ಹೆಜ್ಜೆ ಗೆಸ್​​ ಮಾಡೋದು ಅಸಾಧ್ಯನಾ?

    ಈ ಖುಷಿಯ ನಡುವೆಯು ಒಂದು ಬೇಸರ ಅಭಿಮಾನಿಗಳನ್ನ ಕಾಡ್ತಿದೆ

ನಿನ್ನೆಯ ಪಂದ್ಯದಲ್ಲಿ ಒಂದೆಡೆ ಆರ್​​ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ಸಿಲುಕಿತ್ತು. ಇದಕ್ಕಾಗಿ ಇಡೀ ಕರ್ನಾಟಕದ ಕ್ರಿಕೆಟ್​ ಫ್ಯಾನ್ಸ್​ ಮಾಡಿದ ಪ್ರಾರ್ಥನೆ ಅಷ್ಟಿಷ್ಟಲ್ಲ. ಅರ್​​ಸಿಬಿ ಗೆಲುವಿಗಾಗಿ ಎಲ್ಲವನ್ನೂ ಬಿಟ್ಟು ಪ್ರಾರ್ಥಿಸಿದ ಇದೇ ಅಭಿಮಾನಿಗಳು, ಅಂತ್ಯದಲ್ಲೂ ಬೇಸರಗೊಂಡಿದ್ರು. ಆರ್​​ಸಿಬಿ ಗೆದ್ರೂ ಫ್ಯಾನ್ಸ್​ ಬೇಸರಗೊಂಡಿದ್ದಕ್ಕೆ ಕಾರಣ ಎಮ್​.ಎಸ್​ ಧೋನಿ.

ಆರ್​ಸಿಬಿ ವರ್ಸಸ್ ಚೆನ್ನೈ ನಡುವಿನ ರಣರೋಚಕ ಕಾದಾಟ ಅಂತ್ಯ ಕಂಡಿದೆ. ಕಳೆದ 1 ವಾರದಿಂದ ಕ್ರಿಕೆಟ್​ ಲೋಕದ ಹಾಟ್​ ಟಾಪಿಕ್​ ಆಗಿದ್ದ, ಯಾರ್​ ಗೆಲ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಾಗಿದೆ. ಚೆನ್ನೈ ಎದುರು ಸೂಪರ್​ ಜಯ ದಾಖಲಿಸಿ ಆರ್​​ಸಿಬಿ ಫ್ಲೇ ಆಫ್​ಗೆ ಎಂಟ್ರಿ ಕೊಟ್ಟೇ ಬಿಟ್ಟಿದೆ.

ಇದನ್ನೂ ಓದಿ: ಅಭಿಮಾನಿಗಳ ಅಭಯ, ಹೆಂಡತಿಯ ಸಪೋರ್ಟ್​.. ಹೋರಾಟದ ಹಾದಿ ನೆನೆದು ಕಣ್ಣೀರು ಹಾಕಿದ ಕೊಹ್ಲಿ

ಮೇ.18ರಂದು ಆರ್​ಸಿಬಿ ಗೆಲ್ಲಲಿ ಅಂತಾ ಪ್ಯಾನ್ಸ್​ ಮಾಡಿದ ಪ್ರಾರ್ಥನೆ ಅಷ್ಟಿಷ್ಟಲ್ಲ.. ರನ್​ರೇಟ್​​ ಲೆಕ್ಕಾಚಾರದಲ್ಲಿ ದೊಡ್ಡ ಅಂತರದ ಜಯ ಬೇಕಿತ್ತು. ಮಳೆ ಭೀತಿ ಬೇರೆ ಪಂದ್ಯಕ್ಕಿತ್ತು. ಈ ಎಲ್ಲಾ ವಿಘ್ನಗಳನ್ನ ದಾಟಿ ಆರ್​​ಸಿಬಿ ಗೆಲ್ಲಲಿ ಎಂದು ಫ್ಯಾನ್ಸ್​ ಪ್ರಾರ್ಥಿಸಿದ್ರು. ಕೊನೆಗೂ ಪ್ರಾರ್ಥನೆ ಫಲಿಸಿದೆ. ಫಲ ಸಿಕ್ಕಿದೆ. ಆರ್​​ಸಿಬಿ ಪ್ಲೇ ಆಫ್​ ತಲುಪಿದ್ದೂ ಆಗಿದೆ. ಈ ಖುಷಿಯ ನಡುವೆಯೂ ಒಂದು ಬೇಸರ ಫ್ಯಾನ್ಸ್​ನ ಕಾಡ್ತಿದೆ. ​

ಧೋನಿಯ ಕೊನೆ ಆಟ.. ಫ್ಯಾನ್ಸ್​​ ಕಂಬನಿ.!

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬದ್ಧವೈರಿ ಚೆನ್ನೈ ಸೂಪರ್​ ಕಿಂಗ್ಸ್​​ ಎದುರು ಗೆಲ್ತು. ಇದ್ರೊಂದಿಗೆ ಸೋತ ಚೆನ್ನೈನ ಐಪಿಎಲ್​ ಅಭಿಯಾನ ಇದ್ರೊಂದಿಗೆ ಅಂತ್ಯವಾಯ್ತು. ಕೇವಲ ಚೆನ್ನೈ ಸೂಪರ್​ ಕಿಂಗ್ಸ್​ ಮಾತ್ರ, ಐಪಿಎಲ್​ ಸೀಸನ್​ 17ಕ್ಕೆ ಸೋಲಿನ ವಿದಾಯ ಹೇಳಲಿಲ್ಲ. ವಿಶ್ವ ಕ್ರಿಕೆಟ್​ ಕಂಡ ಶ್ರೇಷ್ಟ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್​ ಕಂಡ ಸಕ್ಸಸ್​ಫುಲ್​ ಕ್ಯಾಪ್ಟನ್​ ಧೋನಿ ಕರಿಯರ್​ ಕೂಡ ಬಹುತೇಕ ತೆರೆ ಬಿದ್ದಂತಾಯ್ತು.

ಚಿನ್ನಸ್ವಾಮಿಯಲ್ಲೇ ಧೋನಿ ಯುಗಾಂತ್ಯ.?

42 ವಯಸ್ಸಿನ ಧೋನಿ ಪಾಲಿಗೆ ಈ ಸೀಸನ್​ ಐಪಿಎಲ್​ ಟೂರ್ನಿಯೇ ಕೊನೆಯ ಟೂರ್ನಿ ಎಂದು ಹೇಳಲಾಗಿತ್ತು. ಇಂಜುರಿಯಿಂದ ಬಳಲುತ್ತಿರೋ ಧೋನಿ ಮುಂದಿನ ಸೀಸನ್​ನಲ್ಲಿ ಆಡೋದು ಅನುಮಾನವೇ. ಹೀಗಾಗಿ ನಿನ್ನೆ ಚಿನ್ನಸ್ವಾಮಿಯಲ್ಲಿ ಆಡಿದ್ದೇ ಕೊನೆಯ ಪಂದ್ಯ ಎಂದು ಕ್ರಿಕೆಟ್​ ಲೋಕದಲ್ಲಿ ಟಾಕ್​ ಹಬ್ಬಿದೆ. ಆರ್​​ಸಿಬಿ ಫ್ಯಾನ್ಸ್​ ಬೇಸರಗೊಂಡಿರೋದು ಇದೇ ಕಾರಣಕ್ಕೆ.

ಇದನ್ನೂ ಓದಿ: RCB ಮರೆಯದ ವಿಜಯ್ ಮಲ್ಯ.. ಪ್ಲೇ ಆಫ್​ಗೆ ಬೆಂಗಳೂರು ರಾಯಲ್​ ಎಂಟ್ರಿ ಕೊಟ್ಟಿದ್ದಕ್ಕೆ ಏನಂದ್ರು?

ಗುರುಶಿಷ್ಯರ ಕಾದಾಟ, ಭಾವನಾತ್ಮಕ ಪಂದ್ಯ​..!

ಎಮ್​ಎಸ್​ ಧೋನಿ – ವಿರಾಟ್​ ಕೊಹ್ಲಿ.. ಭಾರತೀಯ ಕ್ರಿಕೆಟ್​ ಕಂಡ ಒನ್​ ಆಫ್​ ದ ಬೆಸ್ಟ್​ ಗುರು ಶಿಷ್ಯರ ಜೋಡಿ. ಈ ಜೋಡಿಯ ಮುಖಾಮುಖಿ ಫ್ಯಾನ್ಸ್​​ ವಲಯದಲ್ಲಿ ಕಿಚ್ಚು ಹಚ್ಚಿತ್ತು. ಚಿನ್ನಸ್ವಾಮಿ ಮೈದಾನ ವಿರಾಟ್ ಕೊಹ್ಲಿಯ ಕಿಂಗ್​ಡಮ್​. ಆದ್ರೆ, ನಿನ್ನೆ ನಡೆದಿದ್ದು ಮಾತ್ರ ಧೋನಿಯ ಜಾತ್ರೆ. ಧೋನಿ ಕ್ರೇಜ್​​ ನಿನ್ನೆ ಮುಗಿಲು ಮುಟ್ಟಿತ್ತು. ವಿಶ್ವ ಗೆದ್ದ ವೀರನಿಗೆ ಫ್ಯಾನ್ಸ್​ ರಾಯಲ್​ ಸೆಲ್ಯೂಟ್​ ಹೊಡೆದ ಪರಿ ಹಂಗಿತ್ತು.

ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್

ಧೋನಿ ಅಂದ್ರೆನೆ ಅನ್​​ಪ್ರಿಡಿಕ್ಟ್​​ಬಲ್​.. ಧೋನಿಯ ಮುಂದಿನ ಹೆಜ್ಜೆ ಏನು ಅನ್ನೋದನ್ನ ಯಾರಿಂದಲೂ ಗೆಸ್​​ ಮಾಡೋಕೆ ಸಾಧ್ಯಾನೆ ಇಲ್ಲ. ಹೀಗಾಗಿ ಇದನ್ನೇ ಧೋನಿಯ ಕೊನೆ ಸೀಸನ್​​ ಅಂತಾ ಹೇಳೋಕೆ ಸಾಧ್ಯವಿಲ್ಲ ಅನ್ನೋ ಮಾತೂ ಚಾಲ್ತಿಯಲ್ಲಿದೆ. ಆದ್ರೆ, ಇಂಜುರಿ, ವಯಸ್ಸು ಎರಡೂ ಧೋನಿಗೆ ಅಡ್ಡವಾಗಿದೆ. ಮಾಹಿಯ ಮುಂದಿನ ನಿರ್ಧಾರ ಏನು ಅನ್ನೋದು ಸದ್ಯಕ್ಕಂತೂ ಮಿಲಿಯನ್​ ಡಾಲರ್​ ಪ್ರಶ್ನೆಯಾಗೇ ಉಳಿದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ವಿನ್​ ಆಗಲೆಂದು ಪ್ರಾರ್ಥಿಸಿದ್ದು ಅಷ್ಟಿಷ್ಟಲ್ಲ.. ಪಂದ್ಯ ಗೆದ್ರು ಅಭಿಮಾನಿಗಳು​ ಬೇಸರವಾಗಿದ್ದಕ್ಕೆ ಕಾರಣವೇನು?

https://newsfirstlive.com/wp-content/uploads/2024/05/DHONI_VIRAT.jpg

Load More