/newsfirstlive-kannada/media/post_attachments/wp-content/uploads/2024/05/RCB-51.jpg)
ಕಳೆದ ಶನಿವಾರ ರಾತ್ರಿ ಆರ್ಸಿಬಿ ತಂಡವು ಸಿಎಸ್ಕೆ ವಿರುದ್ಧ ಅದ್ಭುತ ಗೆಲುವು ದಾಖಲಿಸಿ ಪ್ಲೇ-ಆಫ್ ಪ್ರವೇಶ ಮಾಡಿದೆ. ಆರ್ಸಿಬಿ ಪ್ಲೇ-ಆಫ್ ಪ್ರವೇಶವನ್ನು ಅಭಿಮಾನಿಗಳು ಸಖತ್ ಸೆಲೆಬ್ರೇಟ್ ಮಾಡಿದ್ದಾರೆ. ಈ ವೇಳೆ ಆರ್ಸಿಬಿಯ ಕೆಲವು ಅಭಿಮಾನಿಗಳು.. ಸಿಎಸ್ಕೆ ಜರ್ಸಿ ಹಾಕಿಕೊಂಡು ಬಂದಿದ್ದ ಅಭಿಮಾನಿಗಳನ್ನು ನಿಂದಿಸಿದ್ದಾರೆ. ಜೊತೆಗೆ ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಇದನ್ನೂ ಓದಿ: ಆರ್ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್ನಲ್ಲಿ ಭಾರೀ ಆಕ್ರೋಶ..!
ಆ ವಿಡಿಯೋದಲ್ಲಿ ಏನಿದೆ..
ಪಂದ್ಯ ಮುಗಿದ ಬಳಿಕ ನಡೆದ ದೃಶ್ಯ ಇದಾಗಿದೆ. ಸಿಎಸ್ಕೆ ಅಭಿಮಾನಿಗಳಿದ್ದ ಕಾರು ಹೋಗುತ್ತಿರುತ್ತದೆ. ಆದರೆ ರಸ್ತೆಯಲ್ಲಿ ಆರ್ಸಿಬಿ ಅಭಿಮಾನಿಗಳು ಸಂಭ್ರಮದಲ್ಲಿ ಮುಳುಗಿದ್ದಾರೆ. ಸಿಎಸ್ಕೆ ಜರ್ಸಿ ಹಾಕೊಂಡು ಕಾರಿನಲ್ಲಿ ಕೂತಿದ್ದನ್ನು ನೋಡಿದ ಆರ್ಸಿಬಿ ಅಭಿಮಾನಿಗಳು ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಆರ್ಸಿಬಿ.. ಆರ್ಸಿಬಿ.. ಎಂದು ಜೋರಾಗಿ ಕೂಗಿದ್ದಾರೆ.
ಕಾರು ಮುಂದೆ ಹೋಗದಂತೆ ತಡೆದಿದ್ದರಿಂದ.. ಸಿಎಸ್ಕೆಯ ಧೊನಿ ಅಭಿಮಾನಿಯೊಬ್ಬ ಕಾರಿನ ಮೇಲೆ ನಿಂತು ತಾವು ಧರಿಸಿದ್ದ ಜರ್ಸಿಯನ್ನು ಆರ್ಸಿಬಿ ಅಭಿಮಾನಿಗಳಿಗೆ ತೋರಿಸಿದ್ದಾರೆ. ಸಿಎಸ್ಕೆ ಅಭಿಮಾನಿಯ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಜೊತೆಗೆ ಆರ್ಸಿಬಿ ಅಭಿಮಾನಿಗಳ ಈ ರೀತಿಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಹೀಗೆಯೇ ಅಂತೆ.. ಸಖತ್ ವೈರಲ್ ಆಗ್ತಿದ್ದಾರೆ CSK ಈ ಅಭಿಮಾನಿಗಳು..!
ಈ ವಿಡಿಯೋವನ್ನು Worship Dhoni ಎಂಬ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ನೂರಾರು ಆರ್ಸಿಬಿ ಅಭಿಮಾನಿಗಳು ಸಿಎಸ್ಕೆ ಫ್ಯಾನ್ಸ್ ಕಾರಿನ ಸುತ್ತ ಜಮಾಯಿಸಿದ್ದರು. ಕಾರಿನಲ್ಲಿದ್ದ ಸಿಎಸ್ಕೆ ಅಭಿಮಾನಿ ಇಟ್ಕೊಂಡಿದ್ದ ಧೋನಿ ಅವರ ಜರ್ಸಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅವರು ನಿರ್ಭಯವಾಗಿ ಹಾಗೂ ಹೆಮ್ಮೆಯಿಂದ ಜರ್ಸಿಯನ್ನು ಪ್ರದರ್ಶನ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Hundreds of rcb fans gathered around car of csk fan. They were trying to snatch MS Dhoni's from him and he was showing it proudly and fearlessly. Proper lion and dogs stuff!
pic.twitter.com/dBsLKyi92B— ` (@WorshipDhoni) May 19, 2024
ಇದನ್ನೂ ಓದಿ:ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲ್ಸಕ್ಕೆ ಹೋಗೋ ಪೋಷಕರೇ ಇರಲಿ ಎಚ್ಚರ.. ಇಲ್ಲಿ 5 ವರ್ಷದ ಮಗು ಸಾವನ್ನಪ್ಪಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ