newsfirstkannada.com

RCB vs DC: ಮಳೆ ಬಂದರೂ ಫ್ಯಾನ್ಸ್ ಚಿಂತೆ ಮಾಡಬೇಕಾಗಿಲ್ಲ.. ಚಿನ್ನಸ್ವಾಮಿ ಸ್ಟೇಡಿಯಂ ವ್ಯವಸ್ಥೆ ಹಂಗಿದೆ..!

Share :

Published May 12, 2024 at 6:41pm

    ವಿಶ್ವದರ್ಜೆಯ ಸ್ಟೇಡಿಯಂ ನಮ್ಮ ಚಿನ್ನಸ್ವಾಮಿ ಮೈದಾನ

    ದೇಶದ ಸಬ್‌ ಏರ್‌ ಸಿಸ್ಟಮ್ ಹೊಂದಿರುವ ಏಕೈಕ ಕ್ರೀಡಾಂಗಣ

    ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಆರ್​ಸಿಬಿ ಮಧೈ ಮೆಗಾ ಫೈಟ್

ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಪ್ಲೇ-ಆಫ್ ದೃಷ್ಟಿಯಿಂದ ಎರಡೂ ತಂಡಗಳಿಗೂ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಇವತ್ತಿನ ಪಂದ್ಯವನ್ನು ಗೆದ್ದು ಬೀಗಲು ಆರ್​ಸಿಬಿ ಎಲ್ಲ ಪ್ರಯತ್ನಗಳನ್ನು ಮಾಡ್ತಿದೆ. ಈ ಮಧ್ಯೆ ಮಳೆರಾಯನ ಆತಂಕ ಶುರುವಾಗಿದೆ.

ಇದನ್ನೂ ಓದಿ:ಸಂಜು ಸ್ಯಾಮ್ಸನ್​​ಗೆ ಧೋನಿ ಗ್ಯಾಂಗ್ ಮಾಸ್ಟರ್ ಸ್ಟ್ರೋಕ್​.. CSKಗೆ ಸಿಕ್ಕೇ ಬಿಟ್ಟ ಮತ್ತೊಬ್ಬ ಬೆಂಕಿ ಬೌಲರ್​​..!

ಈಗಾಗಲೇ ಬೆಂಗಳೂರಲ್ಲಿ ಮಳೆ ಬರುತ್ತಿದೆ. ಅಲ್ಲಲ್ಲಿ ಭಾರೀ ಮಳೆಯಾಗುತ್ತಿದ್ದು, ಪಂದ್ಯ ಆರಂಭವಾಗುವ ವೇಳೆ ಮಳೆ ಬಂದರೆ ಕತೆ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಒಂದು ವೇಳೆ ಮಳೆ ಬಂದು ಹೋದರೆ ಯಾವುದೇ ಸಮಸ್ಯೆ ಇಲ್ಲ. ಮಳೆ ನಿಂತ 15 ರಿಂದ 30 ನಿಮಿಷದಲ್ಲಿ ಪಂದ್ಯ ಆರಂಭ ಮಾಡುವ ತಾಕತ್ತು ಎಂ.ಚಿನ್ನಸ್ವಾಮಿ ಮೈದಾನಕ್ಕೆ ಇದೆ. ಅಂದರೆ ಚಿನ್ನಸ್ವಾಮಿ ಸ್ಟೇಡಿಯಂ ಅಷ್ಟು ಅಪ್​ಡೇಟ್ ಆಗಿದೆ.

ಹೌದು, ಮಳೆ ಬಂದ್ರೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅವಕಾಶ ಇದೆ. ಆರ್​ಸಿಬಿಗೆ ಸಬ್‌ ಏರ್‌ ಸಿಸ್ಟಮ್​ ವರದಾನವಾಗುತ್ತಾ ಎಂದು ಕಾದು ನೋಡಬೇಕು ಅಷ್ಟೇ. ಮಳೆ ನಿಂತರೆ 15ರಿಂದ 30 ನಿಮಿಷಗಳಲ್ಲಿ ಆರಂಭವಾಗಲಿದೆ. ದೇಶದಲ್ಲೇ ಸಬ್‌ ಏರ್‌ ಸಿಸ್ಟಮ್ ಹೊಂದಿರುವ ಏಕೈಕ ಕ್ರೀಡಾಂಗಣ ಅಂದರೆ ಅದು ಬೆಂಗಳೂರಿನ ಸ್ಟೇಡಿಯಂ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸ್ಫೋಟಕ ಟ್ವಿಸ್ಟ್.. ಮತ್ತೊಬ್ಬ ‘ಮಹಾನಾಯಕ’ನ ಹೆಸರು ಹೇಳಿದ ಆರೋಪಿ..

ಅರ್ಧದಿಂದ ಒಂದು ಅಡಿ ಆಳದಲ್ಲಿ ಕೊಳವೆಗಳನ್ನು ಅಳವಡಿಸಲಾಗಿದೆ. ಮಳೆ ಬಂದು ನಿಂತ ತಕ್ಷಣ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಕ್ರೀಡಾಂಗಣಕ್ಕೆ ರವಾನಿಸಬಹುದು. ಇದರಿಂದ ಮೈದಾನ ಕೆಲವೇ ನಿಮಿಷಗಳಲ್ಲಿ ಒಣಗಲಿದೆ.
ಇನ್ನು ಮಳೆ ಬಂದು ಪಂದ್ಯ ರದ್ದಾದ್ರೆ ಆರ್​ಸಿಬಿ ಕಥೆ ಗೋವಿಂದ. ಪ್ಲೇ-ಆಫ್ ಕನಸು ಇವತ್ತಿಗೆ ಅಂತ್ಯವಾಗಲಿದೆ. ಒಂದು ವೇಳೆ ಇಂದಿನ ಪಂದ್ಯ ರದ್ದಾದ್ರೆ ಆರ್​​ಸಿಬಿ ಖಾತೆಗೆ ಕೇವಲ 1 ಅಂಕ ಸಿಗಲಿದೆ. ಪ್ಲೇ ಆಫ್​ ದೃಷ್ಟಿಯಿಂದ ಗೆಲುವು ಆರ್​ಸಿಬಿಗೆ ಅಗತ್ಯ ಇದೆ.

ಇದನ್ನೂ ಓದಿ:RCB vs DC : ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ.. ಆರ್​ಸಿಬಿ ಪ್ಲೇ ಆಫ್​ ಕನಸಿಗೆ ಮಳೆ ಕಂಟಕ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB vs DC: ಮಳೆ ಬಂದರೂ ಫ್ಯಾನ್ಸ್ ಚಿಂತೆ ಮಾಡಬೇಕಾಗಿಲ್ಲ.. ಚಿನ್ನಸ್ವಾಮಿ ಸ್ಟೇಡಿಯಂ ವ್ಯವಸ್ಥೆ ಹಂಗಿದೆ..!

https://newsfirstlive.com/wp-content/uploads/2024/05/CHINNASWAMY-1.jpg

Load More