newsfirstkannada.com

ಈ ಮೂವರು ಲಯಕ್ಕೆ ಮರಳಿದ್ರೆ ಇಂದು RCBನ ಟಚ್​​ ಮಾಡೋದು ಕಷ್ಟ; KKRಗೆ ಸೋಲಿನ ದರ್ಶನ ಪಕ್ಕಾ!

Share :

Published March 29, 2024 at 11:43am

  ಹೊಸ ಅಧ್ಯಾಯ ಶುರು ಮಾಡಿರೋ ಆರ್​​ಸಿಬಿಗೆ ಹೊಸ ಟೆನ್ಷನ್

  ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರೂ 40 ಕೋಟಿ ವೀರರು ಸೈಲೆಂಟ್

  ಹೋಮ್​ ಗ್ರೌಂಡ್​ನಲ್ಲಿ ಕೆಕೆಆರ್ ವಿರುದ್ಧ ಆರ್​ಸಿಬಿ ಘರ್ಜಿಸುತ್ತಾ.?

ಕೆಕೆಆರ್​ ವಿರುದ್ಧದ ಪಂದ್ಯಕ್ಕೆ ಆರ್​​ಸಿಬಿ ಸಜ್ಜಾಗಿದೆ. 2ನೇ ಪಂದ್ಯ ಗೆದ್ದ ಆತ್ಮವಿಶ್ವಾಸವಿದ್ರೂ, ತಂಡಕ್ಕೆ ಒಂದು ಆತಂಕ ಕಾಡ್ತಿದೆ. ಆ 40 ಕೋಟಿ ವೀರರು ತಂಡಕ್ಕೆ ಟೆನ್ಶನ್​ ತಂದಿಟ್ಟಿದ್ದಾರೆ. 40 ಕೋಟಿ ಕುಬೇರರು ಯಾರು.? ಏನ್ ಮಾಡಿದ್ರು ಅಂತೀರಾ?.

ಹೋಮ್​​ಗ್ರೌಂಡ್​ನಲ್ಲಿ ಪಂಜಾಬ್​​ ಕಿಂಗ್ಸ್​​​​ ತಂಡವನ್ನ ಮಣಿಸಿದ ಆರ್​ಸಿಬಿ ಪಾಳಯ ಇದೀಗ ಮತ್ತೊಂದು ಸಮರಕ್ಕೆ ಸಜ್ಜಾಗಿದೆ. ಇಂದು ಕೊಲ್ಕತ್ತಾ ನೈಟ್​​ ರೈಡರ್ಸ್​ ಎದುರು ಆರ್​​ಸಿಬಿ ಹೋಮ್​​ಗ್ರೌಂಡ್​ನಲ್ಲಿ 2ನೇ ಪಂದ್ಯವನ್ನಾಡಲಿದೆ. ಗೆದ್ದು ಹೊಸ ಅಧ್ಯಾಯ ಶುರು ಮಾಡಿರೋ ಆರ್​​ಸಿಬಿಗೆ ಇದೀಗ ಹೊಸ ಟೆನ್ಷನ್​ಗೆ ಶುರುವಾಗಿದೆ.

ಕಿಂಗ್ ಕೊಹ್ಲಿ- ಡಿಕೆ ಸಾಹೇಬ್​​ ಫಾರ್ಮ್​ಗೆ ಬಂದಾಯ್ತು.!

ಕೊನೆಗೂ ಐಪಿಎಲ್ ರಾಜ ವಿರಾಟ್ ಕೊಹ್ಲಿ ಫಾರ್ಮ್​ ಕಂಡುಕೊಂಡಿದ್ದಾರೆ. ಫಿನಿಶರ್ ದಿನೇಶ್ ಕಾರ್ತಿಕ್ ಬ್ಯಾಟ್​​​ ಕೂಡ ಸದ್ದು ಮಾಡ್ತಿದೆ. ಇಷ್ಟಕ್ಕೆ ಆರ್​ಸಿಬಿ ಫ್ಯಾನ್ಸ್​ ಖುಷಿ ಪಡಬೇಕಿಲ್ಲ. ಯಾಕಂದ್ರೆ ಕೊಹ್ಲಿ-ಡಿಕೆ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರೂ 40 ಕೋಟಿ ವೀರರು ಸೈಲೆಂಟಾಗಿದ್ದಾರೆ. ಆ 40 ಕೋಟಿ ಕುಬೇರರು ಆರ್ಭಟಿಸೋದ್ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.

ಮ್ಯಾಕ್ಸ್​ವೆಲ್​​​ ‘ಮ್ಯಾಕ್ಸಿಮಮ್’​​​ ಆಟ ಆಡೋದ್ಯಾವಾಗ..?

ಗೇಮ್ ಚೇಂಜರ್​​​​ ಗ್ಲೆನ್ ಮ್ಯಾಕ್ಸ್​​​ವೆಲ್​ ನಿರಾಸೆ ಮೂಡಿಸಿದ್ದಾರೆ. ಆಡಿದ 2 ಪಂದ್ಯಗಳಲ್ಲಿ ಜಸ್ಟ್​​​​​ 3 ರನ್​​ ಗಳಿಸಿ ಟೀಮ್ ಮ್ಯಾನೆಜ್​​ಮೆಂಟ್​ ಟೆನ್ಷನ್ ಹೆಚ್ಚಿಸಿದ್ದಾರೆ. ಇದರ ಜೊತೆ ಬೌಲಿಂಗ್​​​​​ನಲ್ಲಿ ಮೊನಚು ಕಳೆದುಕೊಂಡಿದ್ದು, ಇಂದಿನ ಪಂದ್ಯದಲ್ಲಿ ಮ್ಯಾಕ್ಸಿ ಮ್ಯಾಕ್ಸಿಮಮ್​ ಆಟ ಆಡಲೇಬೇಕಿದೆ.

17.5 ಕೋಟಿ ಒಡೆಯ ಗ್ರೀನ್​​ರ ಅಸಲಿ ಖದರ್​ ಮಾಯ..!

ಇನ್ನೂ ಮ್ಯಾಕ್ಸ್​ವೆಲ್​ ಜೊತೆ ಆಲ್​ರೌಂಡರ್​ ಕ್ಯಾಮರೂನ್ ಗ್ರೀನ್​​ ಕೂಡ ದುಡ್ಡಿಗೆ ತಕ್ಕಂತೆ ಆಟವಾಡ್ತಿಲ್ಲ. 17.5 ಕೋಟಿ ಕುಬೇರ ಆಡಿದ ಎರಡು ಪಂದ್ಯದಲ್ಲಿ ಬರೀ 21 ರನ್ ಗಳಿಸಿದ್ದಾರೆ. ಬೌಲಿಂಗ್​​ನಲ್ಲಿ 9.20 ಎಕಾನಮಿಯಲ್ಲಿ 2 ವಿಕೆಟ್ ಪಡೆದು ದುಬಾರಿಯಾಗಿದ್ದಾರೆ. ಗ್ರೀನ್​ರ ಅಸಲಿ ಆಟವನ್ನ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

ಇದನ್ನೂ ಓದಿ: ಗ್ಯಾಂಗ್​ಸ್ಟಾರ್ ಆಗಿದ್ದ ಮುಖ್ತಾರ್ ಅನ್ಸಾರಿ ರಾಜಕಾರಣಿ ಆಗಿದ್ದೇಗೆ.. ಇದು ಹಾರ್ಟ್​ ಅಟ್ಯಾಕ್, ಕೊಲೆನಾ?

ಟೆನ್ಷನ್ ತಂದೊಡ್ಡಿದ ಪಟಿದಾರ್ ಬ್ಯಾಡ್​​ಫಾರ್ಮ್​​​​.!

ಇನ್ನು ನಂಬಿಕೆ ಇಟ್ಟು ಆರ್​ಸಿಬಿ ಫ್ರಾಂಚೈಸಿ ರಜತ್ ಪಟಿದಾರ್​ರನ್ನ ರಿಟೇನ್​ ಮಾಡಿಕೊಂಡಿತ್ತು. ಆದ್ರೆ ಮಧ್ಯಪ್ರದೇಶದ ಬ್ಯಾಟರ್​​​​ ನಂಬಿಕೆಗೆ ನ್ಯಾಯ ಒದಗಿಸ್ತಿಲ್ಲ. ಮೊದಲೆರಡು ಪಂದ್ಯಗಳಿಂದ ಜಸ್ಟ್​​ 18 ರನ್​ ಗಳಿಸಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತ್ರಿಮೂರ್ತಿಗಳು ಸಿಡಿದೆದ್ರೆ ಎದುರಾಳಿ ಗುಹೆ ಸೇರೋದು ಪಕ್ಕಾ..!

ಗ್ಲೆನ್ ಮ್ಯಾಕ್ಸ್​ವೆಲ್​​, ಕ್ಯಾಮರೂನ್ ಗ್ರೀನ್ ಹಾಗೂ ರಜತ್ ಪಟೀದಾರ್​​​ ಅಸಲಿ ಆಟ ಆಡುವಲ್ಲಿ ಸೋತಿದ್ದಾರೆ. ಇವರ ಕಮ್​ಬ್ಯಾಕ್​​​​​​ ತಂಡಕ್ಕೆ ಅತ್ಯಗತ್ಯ. ಈಗಿನ್ನೂ ಎರಡು ಪಂದ್ಯ ಮುಗಿದಿದ್ದು, ತಪ್ಪನ್ನ ತಿದ್ದಿಕೊಳ್ಳುವತ್ತ ಮೂವರು ಗಮನ ಹರಿಸಬೇಕಿದೆ. ಹಾಗೊಂದು ವೇಳೆ ತ್ರಿಮೂರ್ತಿಗಳು ಇಂದು ಫಾರ್ಮ್​ ಕಂಡುಕೊಂಡಿದ್ದೆ ಆದ್ರೆ ಆರ್​ಸಿಬಿಯನ್ನ ಟಚ್​ ಮಾಡೋದೆ ಕಷ್ಟ. ಬ್ಯಾಟಿಂಗ್ ವಿಭಾಗ ಫುಲ್​ ಸ್ಟ್ರಾಂಗ್ ಆಗಲಿದ್ದು, ಕೆಕೆಆರ್​ಗೆ ಸೋಲಿನ ದರ್ಶನ ಆಗೋದು ಪಕ್ಕಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಈ ಮೂವರು ಲಯಕ್ಕೆ ಮರಳಿದ್ರೆ ಇಂದು RCBನ ಟಚ್​​ ಮಾಡೋದು ಕಷ್ಟ; KKRಗೆ ಸೋಲಿನ ದರ್ಶನ ಪಕ್ಕಾ!

https://newsfirstlive.com/wp-content/uploads/2024/03/MAXWELL.jpg

Load More