newsfirstkannada.com

RCB vs LSG; ನೆನಪಿರಲಿ, ಇಂದು ಲಕ್ನೋ ವಿರುದ್ಧ ಸೇಡಿನ ಸಮರ.. ಅಂದಿನ ಬೆಂಕಿ ಇಂದು ಧಗಧಗಿಸುತ್ತಾ?

Share :

Published April 2, 2024 at 3:07pm

    ಲಕ್ನೋ ಪ್ಲೇಯರ್ಸ್​ ಚಿನ್ನಸ್ವಾಮಿಯಲ್ಲಿ ಅತಿರೇಕವಾಗಿ ವರ್ತಿಸಿದ್ದರು

    ಆವೇಶ್​​ ಎಲ್ಮೆಟ್ ಎಸೆದ್ರೆ, ರವಿ ಬಿಷ್ಣೋಯಿ ವಿಶ್ವ ಗೆದ್ದಂತೆ ವರ್ತಿಸಿದ್ರು

    ಕೈ ಸೆನ್ನೆ ಮಾಡಿ RCB ಫ್ಯಾನ್ಸ್​ಗಳನ್ನ ಕಿಚಾಯಿಸಿದ್ದ ಗೌತಮ್ ಗಂಭೀರ್

ಲಕ್ನೋ ಸೂಪರ್​ ಜೈಂಟ್ಸ್​ VS ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಇಂದಿನ ಪಂದ್ಯ, ಕೇವಲ ಪಂದ್ಯ ಮಾತ್ರವಲ್ಲ, ಇದೊಂದು ಸೇಡಿನ ಸಮರ. ರಾಹುಲ್​ ಬಳಗದ ಎದುರು ಸೇಡು ತೀರಿಸಿಕೊಳ್ಳಲು ಕಿಂಗ್​​​ ಕೊಹ್ಲಿ ತೊಡೆ ತಟ್ಟಿ ಸಜ್ಜಾಗಿದ್ದಾರೆ. ಹೀಗಾಗಿ ಹೋಮ್​​​ಗ್ರೌಂಡ್​​ನಲ್ಲಿ ವಿರಾಟರೂಪ ದರ್ಶನವಾಗೋದು ಪಕ್ಕಾ.

ಐಪಿಎಲ್​ ಟೂರ್ನಿಯ 15ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿಂದು ಮೆಗಾ ಕದನ ನಡೆಯಲಿದ್ದು ಆರ್​​ಸಿಬಿ -ಲಕ್ನೋ ತಂಡಗಳು ಮುಖಾಮುಖಿಯಾಗ್ತಿವೆ. ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ತುದಿಗಾಲಲ್ಲಿ ನಿಂತಿದ್ದಾರೆ. ಯಾಕಂದ್ರೆ, ಇದು ಸೇಡಿನ ಸಮರ. ರಣಕಣದಲ್ಲಿರೋದು ವಾರಿಯರ್​​ ವಿರಾಟ್​ ಕೊಹ್ಲಿ.

ಏಪ್ರಿಲ್​​ 10, 2023

ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರ ಅತಿರೇಕದ ಸಂಭ್ರಮಾಚರಣೆ

ಕಳೆದ ಸೀಸನ್​​ನ 15 ಪಂದ್ಯದಲ್ಲಿ ಲಕ್ನೋ- ಆರ್​​ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿ ಆಗಿದ್ವು. ಆರ್​​ಸಿಬಿ 212 ರನ್​ಗಳ ಬಿಗ್​ ಟಾರ್ಗೆಟ್​ ಸೆಟ್​ ಮಾಡಿತ್ತು. ಈ ಟಾರ್ಗೆಟ್​ ಅನ್ನ ರಣರೋಚಕ ರೀತಿಯಲ್ಲಿ ಬೆನ್ನತ್ತಿದ ಲಕ್ನೋ ಗೆಲುವಿನ ನಗಾರಿ ಬಾರಿಸಿತು.

ಗೆದ್ದು ಸುಮ್ಮನಾಗಿದ್ರೆ ಎಲ್ಲ ಸರಿ ಇರ್ತಾ ಇತ್ತು. ಆದ್ರೆ, ಲಕ್ನೋ ಆಟಗಾರರು ಅತಿರೇಕದ ಸಂಭ್ರಮಾಚರಣೆ ಮಾಡಿದ್ರು. ವೇಗಿ ಆವೇಶ್​​ ಎಲ್ಮೆಟ್ ಎಸೆದು ಸಂಭ್ರಮಿಸಿದ್ರೆ, ರವಿ ಬಿಷ್ಣೋಯಿ ವಿಶ್ವ ಗೆದ್ದವನಂತೆ ಎಗರಾಡಿದ್ದರು. ಇನ್ನೂ ಒಂದೆಜ್ಜೆ ಮುಂದೆ ಹೋದ ಅಂದಿನ ಲಕ್ನೋ ಮೆಂಟರ್ ಗೌತಮ್ ಗಂಭೀರ್, ಕೈ ಸೆನ್ನೆ ಮೂಲಕ ಆರ್​​ಸಿಬಿ ಅಭಿಮಾನಿಗಳನ್ನ ಕಿಚಾಯಿಸಿದ್ದರು.

ಲಕ್ನೋದಲ್ಲಿ ಜ್ವಾಲೆಯಾಗಿ ಉರಿದ ಚಿನ್ನಸ್ವಾಮಿಯಲ್ಲಿ ಹೊತ್ತಿದ ಕಿಡಿ

ಅಂದು ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರ ಅತಿರೇಕವನ್ನ ನೋಡಿಯು ನೋಡದಂತೆ​ ಕೊಹ್ಲಿ ಹಾಗೂ ಆರ್​ಸಿಬಿ ಆಟಗಾರರು ಸುಮ್ಮನಿದ್ದರು. ಆದ್ರೆ, ಸೀಸನ್​ನ 2ನೇ ಪಂದ್ಯವನ್ನಾಡಲು ಲಕ್ನೋಗೆ ಕಾಲಿಟ್ಟಾಗ ಬಡ್ಡಿ ಸಮೇತ ವಾಪಾಸ್​ ಕೊಟ್ಟಿದ್ರು. ಚಿನ್ನಸ್ವಾಮಿದಲ್ಲಿ ಹೊತ್ತಿದ್ದ ಕಿಡಿ ಲಕ್ನೋದಲ್ಲಿ ಜ್ವಾಲೆಯಾಗಿ ಉರಿದಿತ್ತು.

ಪಂದ್ಯದಲ್ಲಿ ಕೇವಲ 127 ರನ್​ಗಳ ಸಾಧಾರಣ ಟಾರ್ಗೆಟ್​ ಅನ್ನ ಆರ್​​ಸಿಬಿ ಅಚ್ಚರಿಯ ರೀತಿಯಲ್ಲಿ ಡಿಫೆಂಡ್​ ಮಾಡಿಕೊಳ್ತು. ಒಂದೊಂದು ವಿಕೆಟ್​ಗೂ ಕಿಂಗ್​ ಕೊಹ್ಲಿ ಅಗ್ರೆಸ್ಸೀವ್​ ಸೆಲಬ್ರೇಷನ್​ ಮಾಡಿದ್ರು. ಹೋಮ್​​ಗ್ರೌಂಡ್​​ನಲ್ಲಿ ಲಕ್ನೋ ಹೀನಾಯ ಸೋಲಿಗೆ ಗುರಿಯಾಯ್ತು. ಈ ಸೆಲಬ್ರೇಷನ್​​ ನೋಡಿ ಲಕ್ನೋ ಆಟಗಾರರು ಯಾವ ಮಟ್ಟಕ್ಕೆ ಹತಾಶರಾಗಿದ್ರು ಅಂದ್ರೆ, ವೇಗಿ ನವೀನ್​ ಉಲ್​ ಹಕ್,​ ಕೊಹ್ಲಿಯನ್ನ ಸುಖಾಸುಮ್ಮನೆ ಕೆಣಕಿದ್ರು. ಮೆಂಟರ್​ ಗೌತಮ್​ ಗಂಭೀರ್​ ಕಾಲ್ಕೆರೆದು ಜಗಳಕ್ಕೆ ಬಂದಿದ್ರು. ಕ್ರಿಕೆಟ್​ ಫೀಲ್ಡ್​ ವಾರ್​ ಫೀಲ್ಡ್​ ಆಗಿ ಬದಲಾಗಿತ್ತು.

ಇದನ್ನೂ ಓದಿ: ವೆಬ್​ಸೈಟ್ ಮೂಲಕ ಫೇಕ್​ IPL ಟಿಕೆಟ್​ ಮಾರಾಟ.. ಸೈಬರ್​ ಪೊಲೀಸರಿಂದ 7 ಆರೋಪಿಗಳು ಅರೆಸ್ಟ್

ಚಿನ್ನಸ್ವಾಮಿಯಲ್ಲಿಂದು ಸೇಡಿನ ಸಮರಕ್ಕೆ ಕೌಂಟ್​​ಡೌನ್​.!

ಕಳೆದ ಸೀಸನ್​ನಿಂದ ಈ ಸೀಸನ್​ಗೆ ಎಲ್ಲ ಬದಲಾಗಿದೆ. ಲಕ್ನೋ ಮೆಂಟರ್​​​ ಗೌತಮ್​ ಗಂಭೀರ್​​ ಕೆಕೆಆರ್​ ಸೇರಿದ್ದಾರೆ. ನವೀನ್​ ಉಲ್​ ಹಕ್​- ವಿರಾಟ್​​ ಕೊಹ್ಲಿ ದುಷ್ಮನಿ ಮರೆತು ಫ್ರೆಂಡ್ಸ್​ ಆಗಿದ್ದಾರೆ. ಆದ್ರೆ, ಆ ಗಾಯ ಮಾತ್ರ ಮಾಗಿಲ್ಲ. ತವರಿನ ಲಾಯಲ್​​ ಅಭಿಮಾನಿಗಳ ಎದುರಾದ ಅವಮಾನದ ನೋವು ಹಾಗೇ ಇದೆ. ಇಂದು ಆ ಅಪಮಾನದ ಸೇಡನ್ನ ತೀರಿಸಿಕೊಳ್ಳಲು ಕಿಂಗ್​​ ಕೊಹ್ಲಿ ಕಾತರರಾಗಿದ್ದಾರೆ.

ಒಂದೆಡೆ ಕೊಹ್ಲಿ ಕಳೆದ ಸೀಸನ್​ನ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ರೆ, ಇನ್ನೊಂದೆಡೆ ಕೆ.ಎಲ್​ ರಾಹುಲ್​ ಆಡಿ ಬೆಳೆದ ಸ್ಟೇಡಿಯಂನಲ್ಲಿ ಗೆದ್ದು ಬೀಗೋ ವಿಶ್ವಾಸದಲ್ಲಿದ್ದಾರೆ. ಈ ಹಿಂದಿನ ಇತಿಹಾಸ, ಆಟಗಾರರಲ್ಲಿರೋ ಜಿದ್ದು ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​ ನೀಡಿದೆ. ಬ್ಯಾಟಲ್​ ಪೀಲ್ಡ್​​ ಏನಾಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs LSG; ನೆನಪಿರಲಿ, ಇಂದು ಲಕ್ನೋ ವಿರುದ್ಧ ಸೇಡಿನ ಸಮರ.. ಅಂದಿನ ಬೆಂಕಿ ಇಂದು ಧಗಧಗಿಸುತ್ತಾ?

https://newsfirstlive.com/wp-content/uploads/2024/04/RCB_LSG.jpg

Load More