newsfirstkannada.com

ಲಕ್ನೋದ ಯಂಗ್​ ಪ್ಲೇಯರ್​​ ಬೌಲಿಂಗ್ ಎದುರಿಸೋಕೆ RCBಗೆ ಧಮ್ ಬೇಕಾ.. ಯಾರು ಈ ಮಯಾಂಕ್ ಯಾದವ್​?​

Share :

Published April 2, 2024 at 3:39pm

    RCBಗೆ ಟಕ್ಕರ್ ಕೊಡೋ ಬೌಲರ್​ ಲಕ್ನೋ ಟೀಮ್​ನಲ್ಲಿನಿದ್ದಾನೆ

    ಮಯಾಂಕ್​ ಯಾದವ್ ಬೌಲಿಂಗ್​ನ ಸ್ಪೀಡ್​ ಎಷ್ಟು ಇದೆ ಗೊತ್ತಾ?

    ವಿಶ್ವ ಕ್ರಿಕೆಟ್​ ಶ್ರೇಷ್ಟ ದಿಗ್ಗಜರ ಬಾಯಲ್ಲೂ ಮಯಾಂಕ್​ನದ್ದೆ ಮಾತು

ಈತ ಕೇಳಿದ್ದು ವೆಸ್ಟ್​ ಇಂಡೀಸ್​​ ದಿಗ್ಗಜ ಕರ್ಟ್ಲಿ ಅಂಬ್ರೋಸ್​ ಕಥೆಯನ್ನ. ಆರಾಧಿಸಿದ್ದು ಸೌತ್​ ಆಫ್ರಿಕಾ ವೇಗಿ ಡೇಲ್​​ ಸ್ಟೇನ್​ ಅನ್ನ. ಕೊನೆಯಲ್ಲಿ ಆಗಿದ್ದು ತಲೆಗೆ ಹೊಡೆಯೋ ಬೌಲರ್​​. 21 ವರ್ಷದ ಯಂಗ್​ಗನ್​​ ಸದ್ಯ ಕ್ರಿಕೆಟ್​ ಲೋಕದ ಸೆನ್ಸೇಷನ್​. ಅಭಿಮಾನಿಗಳಿಂದ ಹಿಡಿದು ವಿಶ್ವ ಕ್ರಿಕೆಟ್​ ಲೋಕ ಕಂಡ ಶ್ರೇಷ್ಟ ದಿಗ್ಗಜರವರೆಗೆ ಎಲ್ಲರ ಬಾಯಲ್ಲೂ ಈತನದ್ದೇ ಮಾತು.. ಈತನದ್ದೇ ಚರ್ಚೆ.

ಆಡಿರೋದು ಮೊದಲ ಐಪಿಎಲ್​​ ಪಂದ್ಯ. ಹಾಕಿರೋದು 4 ಓವರ್​ ಮಾತ್ರ. ಆದ್ರೆ ಈತನ ಹೆಸರು ಸಪ್ತ ಸಾಗರದಾಚೆ ಸೌಂಡ್​ ಮಾಡ್ತಿದೆ. ಅಬ್ಬಬ್ಬಾ.. ಏನ್​ ಪರ್ಫಾಮೆನ್ಸ್​ ಅಂತೀರಾ, ಕ್ರಿಕೆಟ್​​ ಕಂಡ ದಿಗ್ಗಜರೇ ವಾರೆವ್ಹಾ ಅಂತಿದ್ದಾರೆ. ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲೇ ಸೆನ್ಸೇಷನಲ್​​​ ಪ್ರದರ್ಶನ ನೀಡಿರುವ ಯುವ ವೇಗಿ ಮಯಾಂಕ್​ ಯಾದವ್​ ಇಂದು ಆರ್​​ಸಿಬಿಗೆ ರಾಯಲ್​ ಚಾಲೆಂಜ್​ ಹಾಕಲು ಸಜ್ಜಾಗಿದ್ದಾರೆ.

‘ಡೆಲ್ಲಿ ಎಕ್ಸ್​ಪ್ರೆಸ್’​​ ವೇಗಕ್ಕೆ ಕ್ರಿಕೆಟ್​ ಲೋಕವೇ ದಂಗು.!

ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಯುವ ವೇಗಿ ಮಯಾಂಕ್​ ಯಾದವ್​ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮಾಡಿದ್ದು ಪ್ಯೂರ್​ ಮ್ಯಾಜಿಕ್​. 21 ವರ್ಷದ ಈ ಹುಡುಗ ಬಾಲ್​ ಹಿಡಿದು ದಾಳಿಗಿಳಿದಾಗ ಯಾರೂ ವಿಶೇಷವಾದ ಗಮನ ಕೊಡಲಿಲ್ಲ. ಆದ್ರೆ, 2ನೇ ಓವರ್​​ನಲ್ಲಿ ಮೊದಲ ಎಸೆತ ಎಸೆದಿದ್ದೇ ತಡ ಇಡೀ ಕ್ರಿಕೆಟ್​​ ದಂಗಾಗಿ ಬಿಡ್ತು.

2ನೇ ಓವರ್​​ನಲ್ಲಿ ಮೊದಲ ಎಸೆತಕ್ಕೆ ಇಡೀ ವಿಶ್ವವೇ ಮಾತಾಡ್ತಿದೆ

ಇದೇ ಬಿರುಗಾಳಿಯಂತಾ ಎಸೆತಕ್ಕೆ ಕ್ರಿಕೆಟ್​ ಲೋಕ ಕ್ಲೀನ್​ ಬೋಲ್ಡ್​​ ಆಗಿರೋದು. ಗಂಟೆಗೆ ಬರೋಬ್ಬರಿ 155.8 ಕಿಲೋ ಮೀಟರ್​​ ವೇಗದಲ್ಲಿ ಎಸೆತ ಎದುರಾಗುತ್ತೆ ಅಂತಾ ಬಹುಷಃ ಶಿಖರ್​​ ಧವನ್​ ಕನಸಲ್ಲೂ ಎಣೆಸಿರಲಿಲ್ಲ ಅನ್ಸುತ್ತೆ. ಈ ಬಾರಿ ಐಪಿಎಲ್​ನಲ್ಲಿ ಕ್ರಿಕೆಟ್​​ ಲೋಕದ ಶ್ರೇಷ್ಟ ವೇಗಿಗಳು ಆಡ್ತಿದ್ದಾರೆ. ಅನುಭವಿಗಳ ದಂಡೇ ಇದೆ. ಕೋಟಿ ಕೋಟಿ ಕಮಾಯ್​ ಮಾಡಿದವರೂ ಇದ್ದಾರೆ. ಇರ್ವರ್ಯಾರೂ ಮಾಡದ ಸಾಧನೆಯನ್ನ ಆ ಒಂದು ಎಸೆತದಲ್ಲೇ ಮಯಾಂಕ್​ ಮಾಡಿದ. ವೇಗದ ಎಸೆತ ಅಂದ್ರೆ ಇದು ಅಂತಾ ತೋರಿಸಿಬಿಟ್ಟ.

2024ರ ಐಪಿಎಲ್​ನಲ್ಲಿ ವೇಗದ ಬೌಲಿಂಗ್​

ಮಯಾಂಕ್​ ಯಾದವ್​ ಗಂಟೆಗೆ 155.8 ಕಿಲೋ ಮೀಟರ್​​ ವೇಗದಲ್ಲಿ ಎಸೆದ ಎಸೆತ ಈ ಸೀಸನ್​ನಲ್ಲಿ ದಾಖಲಾದ ಅತ್ಯಂತ ವೇಗದ ಎಸೆತವಾಗಿದೆ. ಇದನ್ನ ಹೊರತುಪಡಿಸಿದ್ರೆ, ನಾಂಡ್ರೆ ಬರ್ಗರ್​​ 153, ಗೆರಾಲ್ಡ್ ಕೋಟ್ಜಿ 152.3, ಅಲ್ಜಾರಿ ಜೋಸೆಫ್​ 151.2 ಹಾಗೂ ಮಥಿಶಾ ಪತಿರಣ 150.9 ವೇಗದಲ್ಲಿ ಬೌಲಿಂಗ್​ ಹಾಕಿದ್ದಾರೆ.

ಬಿರುಗಾಳಿಯಂಥಾ ಬೌಲಿಂಗ್​ಗೆ ಲೆಜೆಂಡ್ಸ್​ ಕ್ಲೀನ್​ಬೋಲ್ಡ್​.!

ಇದೊಂದು ಎಸೆತ ಮಾತ್ರವಲ್ಲ.. ಡೆಬ್ಯೂ ಪಂದ್ಯದಲ್ಲಿ ಮಯಾಂಕ್​ ಯಾದವ್​ ಬೌಲಿಂಗ್​ ವೇಗ ಕಡಿಮೆಯಾಗಲೇ ಇಲ್ಲ. ಕನ್ಸಿಸ್ಟೆಂಟ್​ ಆಗಿ 150 ಸರಾಸರಿಯಲ್ಲಿ ಸ್ಪೆಲ್​ ಹಾಕಿದ್ರು. ಈ ಕನ್ಸಿಸ್ಟೆಂಟ್​ ವೇಗಕ್ಕೆ ಲೆಜೆಂಡ್ಸ್​ ದಂಗಾಗಿದ್ದಾರೆ. ಡೇಲ್​ ಸ್ಟೇನ್​, ಬ್ರೇಟ್​ ಲೀ, ಟಾಮ್​ ಮೂಡಿ, ಇರ್ಫಾನ್​ ಪಠಾಣ್​, ಹರ್ಭಜನ್​ ಸಿಂಗ್​ ಸೇರಿದಂತೆ ಎಲ್ರೂ ಸಲಾಂ ಅಂತಿದ್ದಾರೆ.

ಟ್ಯಾಲೆಂಟ್​ ಇದ್ರೂ ಚಾನ್ಸ್​ಗಾಗಿ ಕಾದಿದ್ದು 2 ವರ್ಷ.!

ಆರಂಭದಲ್ಲಿ ಮಯಾಂಕ್​ ಟ್ಯಾಲೆಂಟ್​ ಗುರುತಿಸಿದ್ದು, ಲಕ್ನೋ ತಂಡದ ಸಹಾಯಕ ಕೋಚ್​​ ಆಗಿದ್ದ ವಿಜಯ್​ ದಹಿಯಾ. ಡೊಮೆಸ್ಟಿಕ್​ ಸರ್ಕ್ಯೂಟ್​ನಲ್ಲಿ ಮಯಾಂಕ್​ ಯಾದವ್​ ಪ್ರದರ್ಶನ ನೋಡಿ ಇಂಪ್ರೆಸ್​ ಆಗಿದ್ದ. ದಹಿಯಾ 2022ರ ಮೆಗಾ ಆಕ್ಷನ್​​ನಲ್ಲಿ ತಂಡ ಖರೀದಿಸುವಂತೆ ಮಾಡಿದ್ರು. 20 ಲಕ್ಷಕ್ಕೆ ಲಕ್ನೋ ಸೇರಿದ ಯುವ ವೇಗಿಗೆ ಮೊದಲ ಸೀಸನ್​ನಲ್ಲಿ ಬೆಂಚ್​ ಸೀಮಿತವಾಗಿದ್ರು.

ಇದನ್ನೂ ಓದಿ: RCB vs LSG; ನೆನಪಿರಲಿ, ಇಂದು ಲಕ್ನೋ ವಿರುದ್ಧ ಸೇಡಿನ ಸಮರ.. ಅಂದಿನ ಬೆಂಕಿ ಇಂದು ಧಗಧಗಿಸುತ್ತಾ?

ಕರಿಯರ್​ ಬಚಾವ್​ ಮಾಡಿದ್ದು ಕನ್ನಡಿಗ ರಾಹುಲ್​.!

ಕಳೆದ ಸೀಸನ್​​ನ ಐಪಿಎಲ್​ಗೂ ಮುನ್ನ ಇಂಜುರಿಗೆ ತುತ್ತಾದ ಮಯಾಂಕ್​ ಟೂರ್ನಿಯಿಂದ ಹೊರ ಬಿದ್ರು. ಇದೇ ವೇಳೆ ಲಕ್ನೋ ಫ್ರಾಂಚೈಸಿ ಮಯಾಂಕ್​ನ ತಂಡದಿಂದಲೇ ರಿಲೀಸ್​ ಮಾಡೋ ನಿರ್ಧಾರ ಮಾಡಿತ್ತು. ಆದ್ರೆ, ಕ್ಯಾಪ್ಟನ್​ ರಾಹುಲ್​ ಮಯಾಂಕ್​ ಬೆಂಬಲಕ್ಕೆ ನಿಂತು, ತಂಡದಲ್ಲೇ ಇರುವಂತೆ ನೋಡಿಕೊಂಡ್ರು. ಈ ಸೀಸನ್​ನಲ್ಲಿ ​ಚಾನ್ಸ್​ ಕೊಟ್ರು. ಸಿಕ್ಕ ಗೋಲ್ಡನ್​ ಅವಕಾಶವನ್ನ ಬಾಚಿಕೊಂಡ ಮಯಾಂಕ್​, ಮೊದಲ ಪಂದ್ಯದಲ್ಲೇ ನಂಬಿಕೆ ಉಳಿಸಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಮಿಂಚಿನ ಪರ್ಫಾಮೆನ್ಸ್​ ನೀಡಿರುವ ಈ ಮಯಾಂಕ್​ ಇಂದು ಆರ್​​ಸಿಬಿ ಎದುರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಟ್ರ್ಯಾಕ್​ಗೆ ಬರಲು ಪರದಾಡ್ತಿರೋ ಆರ್​​ಸಿಬಿ ಬ್ಯಾಟರ್ಸ್​ ಮಯಾಂಕ್​ ಯಾದವ್​ ಬೌಲಿಂಗ್​ ನಿಜಕ್ಕೂ ಚಾಲೆಂಜಿಗ್​ ಆಗಲಿದೆ. ಈ ಸವಾಲನ್ನ ಆರ್​​ಸಿಬಿ ಬ್ಯಾಟರ್ಸ್​​ ಮೀರ್ತಾರಾ.? ಕಾದು ನೋಡೋಣ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಲಕ್ನೋದ ಯಂಗ್​ ಪ್ಲೇಯರ್​​ ಬೌಲಿಂಗ್ ಎದುರಿಸೋಕೆ RCBಗೆ ಧಮ್ ಬೇಕಾ.. ಯಾರು ಈ ಮಯಾಂಕ್ ಯಾದವ್​?​

https://newsfirstlive.com/wp-content/uploads/2024/04/VIRATKOHLI_MAYANKA_YADAV.jpg

Load More