/newsfirstlive-kannada/media/post_attachments/wp-content/uploads/2024/05/Faf-Duplessis_RCB_1.jpg)
ಪಂಜಾಬ್ ಕಿಂಗ್ಸ್​ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಪ್ಲೇ-ಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ, ವಿರಾಟ್ ಕೊಹ್ಲಿ ಅವರ 92 ರನ್​ಗಳ ಸಹಾಯದಿಂದ 241 ರನ್​ಗಳಿಸಿತ್ತು.
ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ 181 ರನ್​ಗಳಿಸಿ ಆಲೌಟ್ ಆಯಿತು. ಪಂಜಾಬ್ ಆರ್​ಸಿಬಿಗೆ ಶರಣಾಗುವ ಮೂಲಕ ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ಡುಪ್ಲೆಸಿಸ್, ನಾವು ಇವತ್ತು ಚೆನ್ನಾಗಿ ಆಡಿದ್ದೇವೆ. ಕಳೆದ 5-6 ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ಸ್ಕೋರ್ ಮಾಡಿದ್ದೇವೆ. ನಮ್ಮ ಗೇಮ್ ಪ್ಲಾನ್ ಬದಲಾಯಿಸಿಕೊಳ್ಳಲು ಅದೆಷ್ಟೋ ಬಾರಿ ಚರ್ಚೆ ಮಾಡಿದ್ದೇವೆ. ಆದರೂ ಕೆಲವೊಮ್ಮೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದೇವೆ. ಆಕ್ರಮಣಕಾರಿ ಬ್ಯಾಟಿಂಗ್​ ಅಗತ್ಯ ಇತ್ತು. ಬೌಲಿಂಗ್ ಬಗ್ಗೆಯೂ ಚರ್ಚೆ ಆಗಿದೆ, ವಿಕೆಟ್ ಹೇಗೆ ಪಡೆಯಬಹುದು ಅನ್ನೋದ್ರ ಬಗ್ಗೆ ಮಾತನಾಡಿದ್ದೇವೆ ಎಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ನಮಗೆ 6-7 ಆಯ್ಕೆಗಳಿವೆ. ನಮಗೆ ಸ್ವಲ್ಪ ಅದೃಷ್ಟ ಬೇಕು. ಪಂದ್ಯಾವಳಿಯ ಆರಂಭದಲ್ಲಿ ನಮ್ಮ ಆಟಗಾರರು ರನ್​​ಗಾಗಿ, ವಿಕೆಟ್​ಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಅವರು ಸಕ್ಸಸ್ ಆಗಿದ್ದು, ಅವರ ಪಾತ್ರ ಏನು ಎಂದು ತೋರಿಸಿದ್ದಾರೆ. ಎಲ್ಲರೂ ರನ್ ಗಳಿಸುತ್ತಿದ್ದಾರೆ, ವಿಕೆಟ್ ಪಡೆಯುತ್ತಿದ್ದಾರೆ. ನಾವು ನಮ್ಮ ಮೇಲೆ ಕೇಂದ್ರೀಕರಿಸೋದು ಮುಖ್ಯ. ಉತ್ತಮವಾಗಿ ಆಡುವ ಶೈಲಿಗೆ ಅಂಟಿಕೊಳ್ಳೋದನ್ನು ನಾವು ಬಯಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಅಚ್ಚರಿ..!! ಬರಗಾಲದ ನಡುವೆಯೂ ರೈತನ ಪ್ರಾರ್ಥನೆಗೆ ಒಲಿದ ಗಂಗಾ ಮಾತೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ