ಆರ್​​ಸಿಬಿ ಪ್ರೀತಿಯಿಂದ ಕೊಟ್ಟಾಗ ಬೇಡ ಎನ್ನಲಿಲ್ಲ ಧೋನಿ.. ಈ ವಿಡಿಯೋ ನೋಡಿದ್ರೆ ನೀಮಗೂ ಖುಷಿ ಆಗಿತ್ತೆ..!

author-image
Ganesh
Updated On
ಆರ್​​ಸಿಬಿ ಪ್ರೀತಿಯಿಂದ ಕೊಟ್ಟಾಗ ಬೇಡ ಎನ್ನಲಿಲ್ಲ ಧೋನಿ.. ಈ ವಿಡಿಯೋ ನೋಡಿದ್ರೆ ನೀಮಗೂ ಖುಷಿ ಆಗಿತ್ತೆ..!
Advertisment
  • ನಾಳೆ CSK-RCB ಮಧ್ಯೆ ಹೈವೋಲ್ಟೇಜ್ ಪಂದ್ಯ
  • ನಾಳೆ ಗೆದ್ದವರಿಗೆ ಪ್ಲೇ-ಆಫ್ ಚಾನ್ಸ್ ಪಕ್ಕಾ ಆಗುತ್ತೆ
  • ಧೋನಿಯನ್ನು ಆರ್​ಸಿಬಿ ವೆಲ್ಕಮ್ ಮಾಡಿದ್ದು ಹೇಗೆ?

ನಾಳೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪ್ಲೇ ಆಫ್ ಡಿಸೈಡರ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ತಂಡ ಬೆಂಗಳೂರು ತಲುಪಿದ್ದು, ನೆಟ್ ಪ್ರಾಕ್ಟೀಸ್​ನಲ್ಲಿ ಬೆವರಿಳಿಸಿದೆ. ಬೆಂಗಳೂರು ಮತ್ತು ಚೆನ್ನೈ ತಂಡಗಳು ಪ್ಲೇ ಆಫ್‌ಗೆ ಪ್ರವೇಶಿಸಲು ವಿಶೇಷ ಪಂದ್ಯವಾಗಿದೆ.

ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಆರ್​ಸಿಬಿ ಕ್ಯಾಂಪ್​ ಎಂಎಸ್ ಧೋನಿಗೆ ಚಹಾ ನೀಡುವ ಮೂಲಕ ಆತ್ಮೀಯ ಸ್ವಾಗತ ನೀಡಿದೆ.
42 ವರ್ಷದ ಎಂಎಸ್ ಧೋನಿ ನೆಟ್ ಅಭ್ಯಾಸದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್‌ನ ಡ್ರೆಸ್ಸಿಂಗ್ ರೂಂಗೆ ತಲುಪಿದ್ದರು. ಈ ವೇಳೆ ಅವರು ನಗತ್ತಿರೋದನ್ನು ಗಮನಿಸಬಹುದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ತರಬೇತಿ ಜೆರ್ಸಿಯನ್ನು ಧರಿಸಿದ್ದರು. ಬೆಂಗಳೂರು ತಂಡದ ಸಿಬ್ಬಂದಿ ಮಾಹಿಗೆ ಬಿಸಿಬಿಸಿ ಚಹಾ ನೀಡಿದ್ದು, ಚಹಾ ಹೀರುತ್ತಾ ಧೋನಿ ಹಸ್ತಲಾಘವ ಮಾಡಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:CSK vs RCB ಪಂದ್ಯಕ್ಕೆ ಇದೆ ಒಂದು ಭಾವನಾತ್ಮಕ ಟಚ್.. ಕೆಲವು ಆರ್​ಸಿಬಿ ಫ್ಯಾನ್ಸ್​ ಮನದಾಳ ಇದು..!

publive-image

ರಾಯಲ್ ಚಾಲೆಂಜರ್ಸ್:

ಬೆಂಗಳೂರು 12 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಸತತ 5 ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಪ್ಲೇಆಫ್ ರೇಸ್​ನಲ್ಲಿದೆ. ಲೀಗ್ ಹಂತದಲ್ಲಿ ಆರ್​ಸಿಬಿಗೆ ನಾಳೆ ಕೊನೆಯ ಪಂದ್ಯ. ಪ್ಲೇ ಆಫ್‌ಗೆ ಪ್ರವೇಶಿಸಲು, ಬೆಂಗಳೂರು 18 ರನ್‌ಗಳಿಗಿಂತ ಹೆಚ್ಚು ಅಥವಾ 18.1 ಓವರ್‌ಗಳಲ್ಲಿ ಗುರಿ ಮುಟ್ಟಬೇಕು.

ಚೆನ್ನೈ ಸೂಪರ್ ಕಿಂಗ್ಸ್ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಚೆನ್ನೈ ಪ್ಲೇ ಆಫ್‌ಗೆ ಪ್ರವೇಶಿಸಬಹುದು. ಒಂದು ವೇಳೆ ಚೆನ್ನೈ ಸೋತರೆ ಕಡಿಮೆ ಅಂತರದಲ್ಲಿ ಸೋಲನುಭವಿಸಿ ಉತ್ತಮ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ. ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಲಿದೆ.

ಇದನ್ನೂ ಓದಿ:ಇವತ್ತು ಮುಂಬೈ ವಿರುದ್ಧ ಲಕ್ನೋ ಗೆದ್ದರೆ RCB ಪ್ಲೇ ಆಫ್ ಹಾದಿಗೆ ಪೆಟ್ಟು ಬೀಳುತ್ತಾ..?


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment