ನಿರ್ಣಾಯಕ ಕದನಕ್ಕೂ ಮುನ್ನ RCBಗೆ ಬಿಗ್ ಶಾಕ್..!
ಜಾಕ್ಸ್ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆ ಆಗುತ್ತಾ..?
ಜಾಕ್ಸ್ ಜೊತೆ ವೇಗಿ ರೀಸಿ ಟಾಪ್ಲೆ ಕೂಡ ಗೈರು..!
ಆರ್ಸಿಬಿಯ ಪ್ಲೇಆಫ್ ಲೆಕ್ಕಾಚಾರ ಜೋರಾಗಿದೆ. ಶನಿವಾರದ ವಾರ್ ಗೆದ್ದು ಬಿಟ್ರೆ ಧಮಾಕ ನಡೆಯಲಿದೆ. ಆರ್ಸಿಬಿ ಅಭಿಮಾನಿಗಳ ಮಹಾದಾಸೆ ಕೂಡ ಅದೇ. ಇಂಥಾ ಟೈಮಲ್ಲೆ ಬರಸಿಡಿಲಿನ ಸುದ್ದಿ ಅಪ್ಪಳಿಸಿದೆ. ಈ ಶಾಕಿಂಗ್ ಸುದ್ದಿ ಕೇಳಿ ಫ್ಯಾನ್ಸ್, ಶಾಕ್ ಆಗಿದ್ದಾರೆ. ತಮ್ಮ ತಂಡ ಗುರಿ ಮುಟ್ಟುತ್ತೋ, ಇಲ್ವೋ ಅಂತ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ.
ಆರ್ಸಿಬಿ ಸೋಲಿನ ಸರಪಳಿ ಕಳಚಿಟ್ಟಿದೆ. ಫಿನಿಕ್ಸ್ನಂತೆ ಮೇಲೆದ್ದು ಸತತ ಐದು ಪಂದ್ಯ ಗೆದ್ದಾಗಿದೆ. ಪ್ಲೇಆಫ್ ಆಸೆಯು ಜೀವಂತವಾಗಿಸಿಕೊಂಡಿದೆ. ರೆಡ್ ಆರ್ಮಿ ನೆಕ್ಸ್ಟ್ ಟಾರ್ಗೆಟ್ ಮೇ 18.. ಮೇ 18 ರಂದು ನಡೆಯುವ ಐಪಿಎಲ್ ಧಮಾಕದಲ್ಲಿ ಆರ್ಸಿಬಿ ಹಾಗೂ ಹಾಲಿ ಚಾಂಪಿಯನ್ ಸಿಎಸ್ಕೆ ತಂಡಗಳು ಗುಟುರು ಹಾಕಲಿವೆ. ನಿರ್ಣಾಯಕ ಪಂದ್ಯದಲ್ಲಿ ಡುಪ್ಲೆಸಿ ಬಳಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂತಹ ಕ್ರೂಷಿಯಲ್ ಟೈಮಲ್ಲಿ ಆರ್ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. 6 ಮಂದಿ ಸಜೀವ ದಹನ.. 32 ಪ್ರಯಾಣಿಕರಿಗೆ ಗಾಯ.. ಮತ್ತಷ್ಟು ಸಾವು ನೋವಿನ ಆತಂಕ
ನಿರ್ಣಾಯಕ ಕದನಕ್ಕೂ ಮುನ್ನ RCBಗೆ ಬಿಗ್ ಶಾಕ್
ಇದು ಅಚ್ಚರಿ ಅನ್ನಿಸಿದ್ರೂ ಸತ್ಯ, ಸತ್ಯ. ಸುದ್ದಿ ಕೇಳಲು ಕಹಿಯಾದ್ರೂ ವಿಧಿಯಿಲ್ಲದೇ ಒಪ್ಪಿಕೊಳ್ಳಲೇಬೇಕು. ಆರ್ಸಿಬಿ ಸ್ಫೋಟಕ ದಾಂಡಿಗ ವಿಲ್ ಜಾಕ್ಸ್ ಐಪಿಎಲ್ ತೊರೆದು ತವರಿಗೆ ವಾಪಾಸಾಗಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ರಾಷ್ಟ್ರೀ ಸೇವೆ ನಿಮಿತ್ತ ಇಂಗ್ಲೆಂಡ್ಗೆ ಹಿಂತಿರುಗಿದ್ದಾರೆ. ಮೇ 22 ರಿಂದ ಆರಂಭಗೊಳ್ಳಲಿರುವ ಪಾಕಿಸ್ತಾನ ವಿರುದ್ಧದ ಟಿ20 ಸರಣಿಗಾಗಿ ಶೀಘ್ರದಲ್ಲೇ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದು ಭಾನುವಾರ ನಡೆಯುವ ಸಿಎಸ್ಕೆ ಎದುರಿನ ನಿರ್ಣಾಯಕ ಪಂದ್ಯಕ್ಕೆ ಗೈರಾಗಲಿದ್ದಾರೆ. ಇದರಿಂದ ಆರ್ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ.
IPL ಕ್ಷಣಗಳು ಅದ್ಭುತವಾಗಿತ್ತು. ಇದಕ್ಕೆ ಅಭಿಮಾನಿಗಳಿಗೆ ಕಾರಣಿಭೂತರು. ಈ ರಾತ್ರಿ ನನಗೆ ವಿಶೇಷ. ಬೆಂಗಳೂರು ನಗರವನ್ನು ತುಂಬಾನೇ ಪ್ರೀತಿಸುತ್ತೇನೆ. ಅದ್ಭುತ ಅನುಭವವನ್ನ ಜೊತೆಗೆ ಕೊಂಡೊಯ್ಯುತ್ತಿದ್ದೇನೆ. ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್ ಜೊತೆಗಿದ್ರು. ಅವರಿಂದ ತುಂಬಾನೇ ಕಲಿತಿದ್ದೇನೆ. ಉತ್ತಮ ವಾತಾವರಣವನ್ನು ನಿರ್ಮಿಸಿದ್ದು, ಇಂತಹ ಪ್ರದರ್ಶನ ನೀಡಲು ಸಾಧ್ಯವಾಗಿದೆ-ವಿಲ್ ಜಾಕ್ಸ್, ಆರ್ಸಿಬಿ ಆಟಗಾರ
ಇದನ್ನೂ ಓದಿ:ಆರ್ಸಿಬಿಗೆ ಬಿಗ್ ಶಾಕ್ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್.. ಪಾಯಿಂಟ್ಸ್ ಟೇಬಲ್ನಲ್ಲಿ ಭಾರೀ ಬದಲಾವಣೆ..!
ಜಾಕ್ಸ್ ಅಲಭ್ಯತೆ.. ತಂಡಕ್ಕೆ ದೊಡ್ಡ ಹಿನ್ನಡೆ ಆಗುತ್ತಾ?
ಫ್ಲೇ ಆಫ್ ಸನಿಹದಲ್ಲಿ ಆರ್ಸಿಬಿ ಗೇಮ್ ಚೇಂಜರ್ ವಿಲ್ ಜಾಕ್ಸ್ ಸೇವೆಯನ್ನು ಕಳೆದುಕೊಳ್ಳಲಿದೆ. ಇದರಿಂದ ತಂಡದ ರಿಸಲ್ಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಯಾಕಂದ್ರೆ ಜಾಕ್ಸ್ ಈ ಐಪಿಎಲ್ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಆಡಿದ 8 ಪಂದ್ಯಗಳಲ್ಲಿ 230 ರನ್ ಗಳಿಸಿದ್ರು. 1 ಶತಕ ಹಾಗೂ 1 ಅರ್ಧಶತಕ ಗಳಿಸಿ ಬ್ಯಾಟಿಂಗ್ ಶಕ್ತಿಯಾಗಿದ್ರು. ಗುಜರಾತ್ ವಿರುದ್ಧ ಸ್ಫೋಟಕ ಸೆಂಚುರಿ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವಿನ ಗಿಫ್ಟ್ ನೀಡಿದ್ರು. ಸದ್ಯ ಜಾಕ್ಸ್ ಗೈರು, ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬರೀ ವಿಲ್ ಜಾಕ್ಸ್ ಅಷ್ಟೆ ಅಲ್ಲ.. ಸ್ಟಾರ್ ಬೌಲರ್ ರೀಸಿ ಟಾಪ್ಲೆ ಕೂಡ ಇಂಗ್ಲೆಂಡ್ ಫ್ಲೈಟ್ ಏರಿದ್ದಾರೆ. ಇದರಿಂದಾಗಿ ಆರ್ಸಿಬಿ ಬೌಲಿಂಗ್ ವಿಭಾಗಕ್ಕೆ ಪೆಟ್ಟು ಬಿದ್ದಿದೆ. ಟಾಪ್ಲೆ ಪ್ರಸಕ್ತ ಐಪಿಎಲ್ನಲ್ಲಿ ಆಡಿದ 4 ಪಂದ್ಯಲ್ಲಿ 4 ವಿಕೆಟ್ ಕಬಳಿಸಿ ಶೈನ್ ಆಗಿದ್ರು. ಇದೀಗ ಟಾಪ್ಲೆ ಹೊರನಡೆದಿದ್ದು, ಇವರ ಜವಾಬ್ದಾರಿ ಯಾರು ಹೊರಲಿದ್ದಾರೆ ಅನ್ನೋ ಹೊಸ ಟೆನ್ಷನ್ ಶುರುವಾಗಿದೆ.
ಇದು ಅದ್ಭುತ ವರ್ಷವಾಗಿತ್ತು. ಎಲ್ಲರಿಗೂ ಧನ್ಯವಾದ. ತಂಡ ಉತ್ತಮವಾಗಿ ಆಡುತ್ತಿದೆ. ಪ್ಲೇ ಆಫ್ ತಲುಪಲಿ ಎಂದು ಹಾರೈಸುತ್ತೇನೆ-ರೀಸಿ ಟಾಪ್ಲೆ, ಆರ್ಸಿಬಿ ಆಟಗಾರ
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!
ಕೆಕೆಆರ್, ರಾಜಸ್ಥಾನ ತಂಡದಿಂದ ಸ್ಟಾರ್ ಪ್ಲೇಯರ್ಸ್ ಔಟ್..!
ಆರ್ಸಿಬಿ ಜೊತೆ ಈಗಾಗ್ಲೇ ಪ್ಲೇಆಫ್ ತಲುಪಿರೋ ಕೆಕೆಆರ್ ಹಾಗೂ ಸನಿಹದಲ್ಲಿರೋ ರಾಜಸ್ಥಾನ ತಂಡಕ್ಕೆ ಇಂಗ್ಲೆಂಡ್ ಸ್ಟಾರ್ ಆಟಗಾರರ ಅಲಭ್ಯತೆಯ ಬಿಸಿ ತಟ್ಟಿದೆ. ಕೆಕೆಆರ್ನ ಫಿಲ್ ಸಾಲ್ಟ್, ರಾಜಸ್ಥಾನದ ಜೋಶ್ ಬಟ್ಲರ್ ಮುಂದಿನ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇವರಷ್ಟೇ ಅಲ್ಲದೇ ಚೆನ್ನೈಗೆ ಮೊಯೀನ್ ಅಲಿ, ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಯಾಮ್ ಕರನ್, ಜಾನಿ ಬೇರ್ಸ್ಟೋವ್ ಹಾಗೂ ಲೀವಿಂಗ್ಸ್ಟೋನ್ ಗೈರು ಕಾಡಲಿದೆ. ಒಟ್ಟಿನಲ್ಲಿ ಲೀಗ್ ಹಂತ ಹಾಗೂ ನಾಕೌಟ್ ಪಂದ್ಯಗಳಿಗೆ ಇಂಗ್ಲೆಂಡ್ ಸ್ಟಾರ್ ಪ್ಲೇಯರ್ಸ್ ಗೈರಾಗಲಿದ್ದು, ಇವರ ನಂಬಿ ಕೋಟಿ ಕೋಟಿ ಹಣ ಸುರಿದ ಫ್ರಾಂಚೈಸಿಗಳು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್