newsfirstkannada.com

ಕೊಹ್ಲಿ, ದಿನೇಶ್​​​ ಕಾರ್ತಿಕ್​​ ಅಬ್ಬರದ ಬ್ಯಾಟಿಂಗ್​​.. ಪಂಜಾಬ್​​ ವಿರುದ್ಧ ಆರ್​​ಸಿಬಿಗೆ ರೋಚಕ ಗೆಲುವು

Share :

Published March 25, 2024 at 11:20pm

Update March 25, 2024 at 11:21pm

    ಪಂಜಾಬ್​​ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ವಿರಾಟ್​​ ಕೊಹ್ಲಿ, ದಿನೇಶ್​ ಕಾರ್ತಿಕ್​​, ಮಹಿಪಾಲ್​​ ಬ್ಯಾಟಿಂಗ್​ನಲ್ಲಿ ಆರ್ಭಟ

    ತವರಿನಲ್ಲೇ ಪಂಜಾಬ್​ ತಂಡವನ್ನು ಮಣಿಸಿದ ಫಾಫ್​​ ಡುಪ್ಲೆಸಿಸ್​ ಪಡೆ..!

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ.

ಪಂಜಾಬ್​ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಬರೋಬ್ಬರಿ 1 ಗಂಟೆಗೂ ಹೆಚ್ಚು ಕಾಲ ಕ್ರೀಸ್​ನಲ್ಲೇ 16 ಓವರ್​​ಗಳವರೆಗೂ ಇದ್ದರು. ತಾನು ಆಡಿದ 49 ಬಾಲ್​ಗಳಲ್ಲಿ 2 ಸಿಕ್ಸರ್​​, 11 ಫೋರ್​ ಸಮೇತ ಕೊಹ್ಲಿ 77 ರನ್​ ಚಚ್ಚಿದ್ರು. ಈ ಮೂಲಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್​​​ಸಿಬಿಗೆ ಆಸರೆಯಾದರು.

ಇನ್ನು, ಹರ್ಷಲ್​​​ ಬೌಲಿಂಗ್​ನಲ್ಲಿ ಬ್ಯಾಕ್​ ಟು ಬ್ಯಾಕ್​​​ ಬೌಂಡರಿ ಸಿಡಿಸಿದ ಕೊಹ್ಲಿ ಸಿಕ್ಸ್​ ಹೊಡೆಯಲು ಮುಂದಾದ್ರು. ಈ ಸಂದರ್ಭದಲ್ಲಿ ಕೊಹ್ಲಿಗೆ ಬಾಲ್​ ಸರಿಯಾಗಿ ಕನೆಕ್ಟ್​ ಆಗದೆ ಕ್ಯಾಚ್​ ಹೋಗಿದೆ. ಪಂದ್ಯ ಗೆಲ್ಲಿಸುತ್ತಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಔಟ್​ ಆಗಿ ಕೊಹ್ಲಿ ನಿರಾಸೆ ಮೂಡಿಸಿದ್ರು.

ರಜತ್​ ಪಾಟಿದಾರ್​​ 18, ಅನೂಜ್​ ರಾವತ್​​ 11, ಫಾಫ್​​, ಕ್ಯಾಮೆರಾನ್ ಗ್ರೀನ್​ ಮತ್ತು ಮ್ಯಾಕ್ಸಿ ತಲಾ 3 ರನ್​ ಗಳಿಸಿದ್ರು.
ಕೊನೆಗೆ ಬಂದ ಮಹಿಪಾಲ್​​ 1 ಸಿಕ್ಸರ್​​, 2 ಫೋರ್​​ ಸಮೇತ 18 ರನ್​​, ದಿನೇಶ್​ ಕಾರ್ತಿಕ್​ ಕೇವಲ 10 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 28 ರನ್​ ಗಳಿಸಿ ಆರ್​​ಸಿಬಿಯನ್ನು ಗೆಲ್ಲಿಸಿದ್ರು.

ಪಂಜಾಬ್​ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಶಿಖರ್​ ಧವನ್​​ 37 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 45 ರನ್​ ಚಚ್ಚಿದ್ರು. ಬಳಿಕ ಬಂದ ಪ್ರಭುಸಿಮ್ರಾನ್​ 2 ಸಿಕ್ಸರ್​​, 2 ಫೋರ್​ ಸಮೇತ 25 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು.

ಇದನ್ನೂ ಓದಿ: ಬರೋಬ್ಬರಿ 2 ಸಿಕ್ಸರ್​​.. 11 ಫೋರ್​​.. 77 ರನ್​ ಚಚ್ಚಿ ಅಬ್ಬರಿಸಿದ ವಿರಾಟ್​ ಕೊಹ್ಲಿ!

ಇನ್ನು, ಲಿಯಮ್​ ಲಿವಿಂಗ್​ಸ್ಟೋನ್​ 1 ಸಿಕ್ಸ್​, 1 ಫೋರ್​ ಜತೆ 17 ರನ್​, ಸ್ಯಾಮ್​ ಕರನ್​ 3 ಫೋರ್​ನೊಂದಿಗೆ 23 ರನ್​ ಸಿಡಿಸಿದ್ರು. ಜಿತೇಶ್​ ಶರ್ಮಾ 2 ಸಿಕ್ಸರ್​​, 1 ಫೋರ್​ನೊಂದಿಗೆ 27 ರನ್​ ಪೇರಿಸಿದ್ರು. ಶಶಾಂಕ್​​ 21 ರನ್​ ಸಹಾಯದಿಂದ ಪಂಜಾಬ್​​ 6 ವಿಕೆಟ್​ ನಷ್ಟಕ್ಕೆ 177 ರನ್​ ಪೇರಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ದಿನೇಶ್​​​ ಕಾರ್ತಿಕ್​​ ಅಬ್ಬರದ ಬ್ಯಾಟಿಂಗ್​​.. ಪಂಜಾಬ್​​ ವಿರುದ್ಧ ಆರ್​​ಸಿಬಿಗೆ ರೋಚಕ ಗೆಲುವು

https://newsfirstlive.com/wp-content/uploads/2024/03/Dinesh-Karthik_RCB.jpg

Load More