newsfirstkannada.com

×

ಮ್ಯಾಕ್ಸಿ, ಯುವಿ.. ಆರ್​​ಸಿಬಿಯ ಐವರು ದುಬಾರಿ ಆಟಗಾರರು ಇವರೇ..!

Share :

Published September 24, 2024 at 8:59am

    RCB ಹಣೆಗೆ ಅಂಟಿರುವ ಕಳಂಕ ಈ ಬಾರಿ ಕಳಚುತ್ತಾ?

    ಮೆಗಾ ಹರಾಜಿಗೆ ತಯಾರಿ ನಡೆಸಿರುವ ಬೆಂಗಳೂರು ಫ್ರಾಂಚೈಸಿ

    ಇಬ್ಬರು ದುಬಾರಿ ಆಟಗಾರರನ್ನು ಈ ಸಲ ಕೈಬಿಡುವ ಸಾಧ್ಯತೆ

ಇಲ್ಲಿಯವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿ ಗೆಲ್ಲದ 4 ತಂಡಗಳಲ್ಲಿ ಆರ್​ಸಿಬಿ ಕೂಡ ಒಂದು. ಐಪಿಎಲ್-2025ರಲ್ಲಿ ಈ ಕಳಂಕವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳಚಿಕೊಳ್ಳಲಿದೆಯಾ ಎಂಬ ಪ್ರಶ್ನೆ ಇದೆ. ಐಪಿಎಲ್​ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಅದಕ್ಕಾಗಿ ಫ್ರಾಂಚೈಸಿ ತಯಾರಿ ನಡೆಸಿದೆ.

ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ಆಟಗಾರರನ್ನು ಖರೀದಿಸುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಜೊತೆಗೆ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ? ಅನ್ನೋದು ಕೂಡ ನಿಗೂಢವಾಗಿದೆ. ಐಪಿಎಲ್ ಇತಿಹಾಸದಲ್ಲಿ RCB ಖರೀದಿಸಿದ 5 ಅತ್ಯಂತ ದುಬಾರಿ ಆಟಗಾರರು ಇಲ್ಲಿದ್ದಾರೆ.

ಇದನ್ನೂ ಓದಿ:ಲೆಬನಾನ್ ಮೇಲೆ ಇಸ್ರೇಲ್ ಭಯಂಕರ ದಾಳಿ; ನಿನ್ನೆ ಒಂದೇ ದಿನ 492 ಜನರು ಸಾವು

ಕ್ಯಾಮರನ್ ಗ್ರೀನ್
ಆರ್​ಸಿಬಿ ಸೇರುವುದಕ್ಕೂ ಮೊದಲು ಗ್ರೀನ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. 2024ರಲ್ಲಿ ಆರ್​ಸಿಬಿ ಅವರನ್ನು 17.5 ಕೋಟಿಗೆ ಖರೀದಿಸಿ ಅಚ್ಚರಿ ಮೂಡಿಸಿತ್ತು. ಐಪಿಎಲ್ ಇತಿಹಾಸದಲ್ಲೇ ಆರ್​ಸಿಬಿ ಇಷ್ಟೊಂದು ಮೊತ್ತ ನೀಡಿ ಖರೀದಿಸಿದ ಏಕೈಕ ಆಟಗಾರ ಗ್ರೀನ್. 2024ರ ಐಪಿಎಲ್​ನಲ್ಲಿ ಅವರ ಪ್ರದರ್ಶನ ನೀರಸವಾಗಿತ್ತು. ಈ ಬಾರಿ ಅವರನ್ನು ಕೈಬಿಟ್ಟರೂ ಅಚ್ಚರಿ ಇಲ್ಲ.

ಕೈಲ್ ಜೇಮಿಸನ್ (Kyle Jamieson)
ಐಪಿಎಲ್ ಹರಾಜು 2021ರಲ್ಲಿ ಆರ್​ಸಿಬಿ ನ್ಯೂಜಿಲೆಂಡ್​ನ ಜೇಮಿಸನ್ ಮೇಲೆ ಹಣದ ಸುರಿಮಳೆಗೈದಿತ್ತು. ಆರ್​ಸಿಬಿ ಇವರನ್ನು 15 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದಾಗ್ಯೂ ಅವರ ಪ್ರದರ್ಶನವು ನಿರಾಶಾದಾಯಕವಾಗಿತ್ತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೇಮ್ಸನ್ ಅವರನ್ನು ಬಿಡುಗಡೆ ಮಾಡಿತು.

ಇದನ್ನೂ ಓದಿ:ಟೀಮ್ ಇಂಡಿಯಾ ಗೆಲುವಿಗೆ ಮುಖ್ಯ ಕಾರಣ ರಿವೀಲ್; ತೆರೆ ಹಿಂದಿನ ಈ ವ್ಯಕ್ತಿಗೆ ಗೌರವ ಸಿಗಬೇಕು

ಗ್ಲೆನ್ ಮ್ಯಾಕ್ಸ್​ವೆಲ್​
ಐಪಿಎಲ್ ಹರಾಜು 2021ರಲ್ಲಿ ಆರ್​ಸಿಬಿ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ರೂ.ಗೆ ಖರೀದಿಸಿತು. ಈ ಮೂಲಕ ಮ್ಯಾಕ್ಸ್‌ವೆಲ್ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂರನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಈ ಬಾರಿ ಮೆಗಾ ಹರಾಜಿಗೆ ಮೊದಲು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬಿಡುಗಡೆ ಮಾಡಬಹುದು.

ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಲ್ಕನೇ ಅತ್ಯಂತ ದುಬಾರಿ ಆಟಗಾರ. 2014ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವರಾಜ್ ಸಿಂಗ್ ಅವರನ್ನು 14 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿತ್ತು. ಆ ಸಮಯದಲ್ಲಿ ಯುವರಾಜ್ ಸಿಂಗ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು.

ಇದನ್ನೂ ಓದಿ:ಇಂಗ್ಲೆಂಡ್​ನ ಸ್ಟಾರ್ ಆಟಗಾರನ ಮೇಲೆ ಕಣ್ಣಿಟ್ಟ ಆರ್​ಸಿಬಿ; ಇವರು ಬಂದರೆ ಒಂದೇ ಕಲ್ಲಲ್ಲಿ 2 ಹಕ್ಕಿ..!

ಎಬಿ ಡಿವಿಲಿಯರ್ಸ್
ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ದೀರ್ಘಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಈ ಬ್ಯಾಟ್ಸ್‌ಮನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸಾಕಷ್ಟು ರನ್ ಗಳಿಸಿದರು. 2011ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಬಿ ಡಿವಿಲಿಯರ್ಸ್ ಅವರನ್ನು 11 ಕೋಟಿ ರೂ.ಗೆ ಖರೀದಿಸಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮ್ಯಾಕ್ಸಿ, ಯುವಿ.. ಆರ್​​ಸಿಬಿಯ ಐವರು ದುಬಾರಿ ಆಟಗಾರರು ಇವರೇ..!

https://newsfirstlive.com/wp-content/uploads/2024/09/YUVARAJ-SINGH.jpg

Load More