ಆಕಾಶ್- ರೋಹಿತ್ ನಡುವೆ ನಾಯಕತ್ವದ ಕುರಿತಾಗಿ ನಡೆಯುತ್ತಿದೆಯಾ ಚರ್ಚೆ?
ಮುಂಬೈ ತಂಡದ ಮಾಲೀಕನ ಜೊತೆಗೆ ವಾಂಖೆಡೆಯತ್ತ ಬಂದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಐಪಿಎಲ್ನಿಂದ ಹೊರಗುಳಿಯುವ ಬಗ್ಗೆ ಮಾತುಕತೆ ನಡೆಸಿದ್ರಾ?
ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಜಿದ್ದಾಜಿದ್ದಿಗೆ ಕ್ಷಣಗಣನೆ. ಅಭಿಮಾನಿಗಳಂತೂ ಇವೆರಡು ತಂಡಗಳ ಫೈಟ್ ನೋಡಲು ಕಾದುಕುಳಿತ್ತಿದ್ದಾರೆ. ಹೀಗಿರುವಾಗ ಮುಂಬೈ ತಂಡದ ಮಾಲೀಕ ಆಕಾಶ್ ಅಂಬಾನಿ ಕಾರಿನಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಇಬ್ಬರು ವಾಂಖೆಡೆ ಮೈದಾನದತ್ತ ಬಂದಿದ್ದಾರೆ.
ಅಂದಹಾಗೆಯೇ ಇದು ನಿನ್ನೆ ನಡೆದ ಘಟನೆಯಾಗಿದೆ. ಮುಂಬೈ ತಂಡ ವಾಂಖೆಡೆಯಲ್ಲಿ ಅಭ್ಯಾಸನಿರತವಾಗಿತ್ತು. ಈ ವೇಳೆ ಆಕಾಶ್ ಅಂಬಾನಿಯವರು ರೋಹಿತ್ ಶರ್ಮಾರನ್ನು ತಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಂಡು ಕರೆತಂದಿದ್ದಾರೆ. ಸದ್ಯ ಈ ದೃಶ್ಯದ ಕುರಿತು ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ.
ನಿರಂತರ ಸೋಲು ಅಥವಾ ನಾಯಕತ್ವದ ಕುರಿತಾಗಿ ಆಕಾಶ್ ಅಂಬಾನಿ ಮತ್ತು ರೋಹಿತ್ ಚರ್ಚೆ ಮಾಡಿರಬಹುದು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಇದರ ಜೊತೆಗೆ ಮುಂದಿನ ವರ್ಷ ರೋಹಿತ್ ಶರ್ಮಾ ಐಪಿಎಲ್ನಿಂದ ಹೊರಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು. ಈ ಬಗ್ಗೆ ಯೂ ಚರ್ಚೆ ನಡೆದಿರಬಹುದು ಎಂಬುದು ಫ್ಯಾನ್ಸ್ಗಳು ಮಾತನಾಡುತ್ತಿದ್ದಾರೆ.
Akash Ambani driving for captain Rohit Sharma
When you’re big, you’re big 🔥🐐
pic.twitter.com/riQ06Ou7Kg— Nisha (@NishaRo45_) April 10, 2024
ಇದನ್ನೂ ಓದಿ: RCBvsMI: ಫಾಫ್ ಬದಲು ಕೊಹ್ಲಿ ನಾಯಕ? ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ
ಇನ್ನು ಇಂದು ನಡೆಯುವ ಇತ್ತಂಡಗಳ ಸಾಮರ್ಥ್ಯ ಮತ್ತು ಸಾಧನೆಯನ್ನು ಗಮನಿಸುವುದಾದರೆ ಮುಂಬೈ ತಂಡ ನಾಲ್ಕು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇತ್ತ ಆರ್ಸಿಬಿ ಐದು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಎಲ್ಲರ ಗಮನವಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ