newsfirstkannada.com

RCBvsMI: ಫಾಫ್​ ಬದಲು ಕೊಹ್ಲಿ ನಾಯಕ? ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

Share :

Published April 11, 2024 at 6:31pm

Update April 11, 2024 at 6:46pm

    ಆರ್​ಸಿಬಿ ಮತ್ತು ಮುಂಬೈ ನಡುವಿನ ಪಂದ್ಯ ಪ್ರಾರಂಭಕ್ಕೆ ಕ್ಷಣಗಣನೆ

    ನಿಜವಾಗಲೂ ಇಂದು ಆರ್​ಬಿಸಿ ಮುನ್ನಡೆಸೋದು ಕೊಹ್ಲಿನಾ?

    ಇತ್ತಂಡಗಳ ಸಂಭಾವ್ಯ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ

ಇಂದು ಕ್ರಿಕೆಟ್​ ಫ್ಯಾನ್ಸ್​ ಮುಂಬೈ ವಾಂಖೆಡೆ ಮೈದಾನವನ್ನು ಎದುರು ನೋಡುತ್ತಿದ್ದಾರೆ. ಕಾರಣ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್​ ಜಟಾಪಟಿಗೆ ಈ ಮೈದಾನ ಸಾಕ್ಷಿಯಾಗಲಿದೆ. ಹಾಗಾಗಿ ಇತ್ತಂಡಗಳ ಫ್ಯಾನ್ಸ್​ ನಡುವೆ ಕುತೂಹಲ ಜಾಸ್ತಿಯಾಗಿದೆ.

ಇಂಥಾ ಕುತೂಹಲ ಸಂಗತಿ ನಡುವೆ ಇಂದಿನ ಪಂದ್ಯದಲ್ಲಿ ಆರ್​ಸಿಬಿ ತಂಡದಲ್ಲಿ ನಾಯಕನ ಬದಲಾವಣೆ ಮಾಡಲಾಗಿದೆ ಎಂಬ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ ನಾಯಕ ಫಾಫ್​​ಗೆ ಇಂಜುರಿಯಾದ ಕಾರಣ ಅವರ ಸ್ಥಾನವನ್ನು ಕೊಹ್ಲಿ ನಿರ್ವಹಿಸುತ್ತಾರೆ ಎಂಬ ಸಂಗತಿಯೂ ಹರಿದಾಡುತ್ತಿದೆ. ಅದಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳು ವೈರಲ್​ ಆಗುತ್ತಿವೆ.

ಆದರೆ ಮಾಹಿತಿ ಪ್ರಕಾರ ಇದೊಂದು ಗಾಳಿ ಸುದ್ದಿ ಎಂದು ಹೇಳಲಾಗುತ್ತಿದೆ. ಫಾಫ್​ ಇಂದು ಆರ್​ಸಿಬಿ ತಂಡವನ್ನು ಎಂದಿನಂತೆ ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ ಮುಂಬೈ ಮೈದಾನದಲ್ಲಿ ಗೆಲುವು ಸಾಧಿಸಲು ಪಣ ತೊಟ್ಟಿದ್ದಾರೆ.

ಇತ್ತಂಡಗಳ ಸಾಮರ್ಥ್ಯ ಮತ್ತು ಸಾಧನೆಯನ್ನು ಗಮನಿಸುವುದಾದರೆ ಮುಂಬೈ ತಂಡ ನಾಲ್ಕು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇತ್ತ ಆರ್​ಸಿಬಿ ಐದು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಎಲ್ಲರ ಗಮನವಿದೆ.

ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 150 ಬಾರಿ ತಿರಸ್ಕಾರ.. Dream 11 ಕಟ್ಟಿ ಬೆಳೆಸಿದ ಹರ್ಷ್​ ಜೈನ್​ ಸಾಹಸಗಾಥೆ ಬಗ್ಗೆ ಓದಲೇಬೇಕು

ಮುಂಬೈ ಇಂಡಿಯನ್ಸ್ ಸಂಭಾವ್ಯ ಆಟಗಾರರು: ರೋಹಿತ್ ಶರ್ಮಾ, ಇಶಾನ್ ಕಿಶನ್ (WK), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (c), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಟಗಾರರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಮಯಾಂಕ್ ದಾಗರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBvsMI: ಫಾಫ್​ ಬದಲು ಕೊಹ್ಲಿ ನಾಯಕ? ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

https://newsfirstlive.com/wp-content/uploads/2024/04/RCB-2.jpg

Load More