newsfirstkannada.com

RCBvsMI: ಆಕಾಶ್​ ಅಂಬಾನಿ ಕಾರಿನಲ್ಲಿ ವಾಂಖೆಡೆಗೆ ಬಂದಿಳಿದ ರೋಹಿತ್​ ಶರ್ಮಾ!

Share :

Published April 11, 2024 at 7:03pm

  ಆಕಾಶ್​​- ರೋಹಿತ್​ ನಡುವೆ ನಾಯಕತ್ವದ ಕುರಿತಾಗಿ ನಡೆಯುತ್ತಿದೆಯಾ ಚರ್ಚೆ?

  ಮುಂಬೈ ತಂಡದ ಮಾಲೀಕನ ಜೊತೆಗೆ ವಾಂಖೆಡೆಯತ್ತ ಬಂದ ರೋಹಿತ್​ ಶರ್ಮಾ

  ರೋಹಿತ್​ ಶರ್ಮಾ ಐಪಿಎಲ್​ನಿಂದ ಹೊರಗುಳಿಯುವ ಬಗ್ಗೆ ಮಾತುಕತೆ ನಡೆಸಿದ್ರಾ?

ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಜಿದ್ದಾಜಿದ್ದಿಗೆ ಕ್ಷಣಗಣನೆ. ಅಭಿಮಾನಿಗಳಂತೂ ಇವೆರಡು ತಂಡಗಳ ಫೈಟ್​ ನೋಡಲು ಕಾದುಕುಳಿತ್ತಿದ್ದಾರೆ. ಹೀಗಿರುವಾಗ ಮುಂಬೈ ತಂಡದ ಮಾಲೀಕ ಆಕಾಶ್​ ಅಂಬಾನಿ ಕಾರಿನಲ್ಲಿ ರೋಹಿತ್​ ಶರ್ಮಾ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಇಬ್ಬರು ವಾಂಖೆಡೆ ಮೈದಾನದತ್ತ ಬಂದಿದ್ದಾರೆ.

ಅಂದಹಾಗೆಯೇ ಇದು ನಿನ್ನೆ ನಡೆದ ಘಟನೆಯಾಗಿದೆ. ಮುಂಬೈ ತಂಡ ವಾಂಖೆಡೆಯಲ್ಲಿ ಅಭ್ಯಾಸನಿರತವಾಗಿತ್ತು. ಈ ವೇಳೆ ಆಕಾಶ್​ ಅಂಬಾನಿಯವರು ರೋಹಿತ್​ ಶರ್ಮಾರನ್ನು ತಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಂಡು ಕರೆತಂದಿದ್ದಾರೆ. ಸದ್ಯ ಈ ದೃಶ್ಯದ ಕುರಿತು ಫ್ಯಾನ್ಸ್​ ಚರ್ಚೆ ಮಾಡುತ್ತಿದ್ದಾರೆ.

ನಿರಂತರ ಸೋಲು ಅಥವಾ ನಾಯಕತ್ವದ ಕುರಿತಾಗಿ ಆಕಾಶ್​ ಅಂಬಾನಿ ಮತ್ತು ರೋಹಿತ್​ ಚರ್ಚೆ ಮಾಡಿರಬಹುದು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಇದರ ಜೊತೆಗೆ ಮುಂದಿನ ವರ್ಷ ರೋಹಿತ್​ ಶರ್ಮಾ ಐಪಿಎಲ್​ನಿಂದ ಹೊರಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು. ಈ ಬಗ್ಗೆ ಯೂ ಚರ್ಚೆ ನಡೆದಿರಬಹುದು ಎಂಬುದು ಫ್ಯಾನ್ಸ್​ಗಳು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: RCBvsMI: ಫಾಫ್​ ಬದಲು ಕೊಹ್ಲಿ ನಾಯಕ? ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

ಇನ್ನು ಇಂದು ನಡೆಯುವ ಇತ್ತಂಡಗಳ ಸಾಮರ್ಥ್ಯ ಮತ್ತು ಸಾಧನೆಯನ್ನು ಗಮನಿಸುವುದಾದರೆ ಮುಂಬೈ ತಂಡ ನಾಲ್ಕು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇತ್ತ ಆರ್​ಸಿಬಿ ಐದು ಪಂದ್ಯವನ್ನು ಆಡಿದೆ. ಅದರಲ್ಲಿ ಒಂದು ಪಂದ್ಯವನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದ ಮೇಲೆ ಎಲ್ಲರ ಗಮನವಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBvsMI: ಆಕಾಶ್​ ಅಂಬಾನಿ ಕಾರಿನಲ್ಲಿ ವಾಂಖೆಡೆಗೆ ಬಂದಿಳಿದ ರೋಹಿತ್​ ಶರ್ಮಾ!

https://newsfirstlive.com/wp-content/uploads/2024/04/Rohit-sharma.jpg

Load More