/newsfirstlive-kannada/media/post_attachments/wp-content/uploads/2024/10/JOB_KPSC.jpg)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (ಆರ್ಡಿಪಿಆರ್) ವತಿಯಿಂದ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅಧಿಕೃತ ಅಧಿಸೂಚನೆ ಅಕ್ಟೋಬರ್ 2024ರ ಮೂಲಕ ಜಿಲ್ಲಾ ಎಸ್ಎಂಹೆಚ್ಎಂ ಸಂಯೋಜಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹೀಗಾಗಿ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದು.
ಕರ್ನಾಟಕ ಸರ್ಕಾರದಡಿ ಕೆಲಸ ಹುಡುಕುತ್ತಿರುವವರು ಇದೊಂದು ಅವಕಾಶ ಆಗಿದ್ದು ಅಪ್ಲೇ ಮಾಡಬಹುದು. ಇನ್ನುಳಿದಂತೆ ಈ ಉದ್ಯೋಗಕ್ಕೆ ಸಂಬಂಧಿಸಿದಂತೆ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ರೆಸ್ಯೂಮ್ ಹಾಗೂ ನಿಮ್ಮ ಓದಿಗೆ, ಅನುಭವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಇಮೇಲ್ ಮೂಲಕ ಅಪ್ಲೇ ಮಾಡಿ. ಇಮೇಲ್- [email protected]
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (ಆರ್ಡಿಪಿಆರ್)
- ಪೋಸ್ಟ್ ಹೆಸರು- ಜಿಲ್ಲಾ ಎಸ್ಎಂಹೆಚ್ಎಂ ಸಂಯೋಜಕರು
- ಒಟ್ಟು ಹುದ್ದೆಗಳು 3 ಇವೆ
- ಕೆಲಸದ ಸ್ಥಳ- ಬಳ್ಳಾರಿ, ಕೊಪ್ಪಳ, ವಿಜಯನಗರ
- ತಿಂಗಳ ಸ್ಯಾಲರಿ- 45,000 ರೂಪಾಯಿ
ಇದನ್ನೂ ಓದಿ:ಮೆಟ್ರೋದಲ್ಲಿ ನುರಿತ ಅಭ್ಯರ್ಥಿಗಳಿಗೆ ಉದ್ಯೋಗ.. ಅರ್ಜಿ ಆಹ್ವಾನ ಮಾಡಿದ DMRCL
ವಯೋಮಿತಿ- ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು
ಶೈಕ್ಷಣಿಕ ಅರ್ಹತೆ- ಸ್ನಾತಕೋತ್ತರ ಪದವಿ
ಆಯ್ಕೆ ಪ್ರಕ್ರಿಯೆ ಹೇಗೆ..?
- ವಿದ್ಯಾರ್ಹತೆ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ
- ಅನುಭವ ಪರಿಗಣೆಗೆ ತೆಗೆದುಕೊಳ್ಳಲಾಗುತ್ತದೆ
- ಲಿಖಿತ ಪರೀಕ್ಷೆ ಇರುತ್ತದೆ
- ಸಂದರ್ಶನ
- ಇವೆಲ್ಲಕ್ಕೂ 100 ಅಂಕ ನಿಗದಿ ಮಾಡಲಾಗಿದೆ
ಕೊನೆ ದಿನಾಂಕ- 29 ಅಕ್ಟೋಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ