newsfirstkannada.com

×

ಬರೀ 4 ನಿಮಿಷದಲ್ಲಿ ಚಾರ್ಜ್​​ ಫುಲ್​.. 320w ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್​ಮಿ! ಎಷ್ಟು ಸುರಕ್ಷಿತ?

Share :

Published August 15, 2024 at 12:01pm

    320 ವ್ಯಾಟ್​​ ಅಡಾಪ್ಟರ್​ ಪರಿಚಯಿಸುತ್ತಿರೋ ರಿಯಲ್​ಮಿ

    ಸ್ಮಾರ್ಟ್​ಫೋನ್​ ಯುಗದಲ್ಲಿ ಫಾಸ್ಟ್​ ಚಾರ್ಜಿಂಗ್​ಗೆ ಪೈಪೋಟಿ

    4 ನಿಮಿಷದಲ್ಲಿ ಸಾಕು.. 0 ಯಿಂದ 100 ಪ್ರತಿಶತದಷ್ಟು ಚಾರ್ಜ್ ಆಗುತ್ತೆ

ಸ್ಮಾರ್ಟ್​ಫೋನ್​​ ಯುಗದಲ್ಲಿ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚುತ್ತಿದೆ. ನಾನಾ ವಿಶೇಷತೆಯುಳ್ಳ ಸ್ಮಾರ್ಟ್​ಫೋನ್​ಗಳು ಬರುತ್ತಿವೆ. ಒಂದಕ್ಕಿಂತ ಒಂದು ವಿಶೇಷತೆಯನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನ ಸೆಳೆಯುತ್ತಿವೆ. ಇದೀಗ ಜನಪ್ರಿಯ ಕಂಪನಿ ರಿಯಲ್​ಮಿ ಸ್ಮಾರ್ಟ್​ಫೋನ್​ ವೇಗದ ಚಾರ್ಜಿಂಗ್​ನತ್ತ ಚಿತ್ತಹರಿಸಿದ್ದು, 320 ವ್ಯಾಟ್​ ಚಾರ್ಜಿಂಗ್​​ ತಂತ್ರಜ್ಞಾನ ಹೊಂದುವ ಯೋಜನೆಯನ್ನ ಅಧಿಕೃತವಾಗಿ ಧೃಡಪಡಿಸಿದೆ.

ರಿಯಲ್​ಮಿ ಯಾವ ಫೋನ್​ನಲ್ಲಿ ಈ ವೈಶಿಷ್ಟ್ಯ ತರುವ ಬಗ್ಗೆ ಹೇಳಿಕೊಂಡಿಲ್ಲ. ಆದರೆ 4 ನಿಮಿಷದಲ್ಲಿ ಬ್ಯಾಟರಿಯು 0 ಯಿಂದ 100 ಪ್ರತಿಶತದಷ್ಟು ಚಾರ್ಜ್​ ಆಗುವ ವಿಶೇಷತೆಯನ್ನು ಹೊಂದಿದೆಯಂತೆ.

ಇದನ್ನೂ ಓದಿ: ‘ಗೃಹ ಆರೋಗ್ಯ’ ಯೋಜನೆ ಪ್ರಸ್ತಾಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್; ಗೃಹಲಕ್ಷ್ಮೀ ಬಗ್ಗೆಯೂ ಮಾತು

ವೇಗದ ಚಾರ್ಜಿಂಗ್​ ವೈಶಿಷ್ಟ್ಯ ಕೆಲವು ವರ್ಷಗಳ ಹಿಂದೆಯೇ ಬಂದಿದೆ. ಆದರೆ ರಿಯಲ್​ಮಿ ಮತ್ತು ಶಿಯೋಮಿಯ ಪೈಪೋಟಿಯಿಂದ ಕೊಂಚ ವೇಗ ಹೆಚ್ಚಾಗಿದೆ. ರಿಯಲ್​ಮಿ GT ಸರಣಿ ಸ್ಮಾರ್ಟ್​ಫೋನ್​ಗಳು 240 ವ್ಯಾಟ್​​ ಚಾರ್ಜಿಂಗ್ ಬೆಂಬಲವನ್ನು ಪರಿಚಯಿಸಿದೆ. ಆದರೀಗ 320 ವ್ಯಾಟ್​​ನತ್ತ ಚಿತ್ತ ಹರಿಸಿದೆ. ಸದ್ಯದಲ್ಲೇ ಯಾವ ಸಾಧನದಲ್ಲಿ ಈ ವೇಗದ ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸಲಿದೆ ಎಂದು ರಿಯಲ್​ಮಿ ಹೇಳಲಿದೆ.

ಇದನ್ನೂ ಓದಿ: ವಾರೆವ್ಹಾ! 5 ಡೋರ್​​ನ ಥಾರ್​​ ರೋಕ್ಸ್​ ಪರಿಚಯಿಸಿದ ಮಹೀಂದ್ರಾ.. ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿದ್ಯಾ?

ರಿಯಲ್​ಮಿ 240 ವ್ಯಾಟ್​​ ಚಾರ್ಜಿಂಗ್​ ವೈಶಿಷ್ಟ್ಯದಂತೆ 320 ವ್ಯಾಟ್​ ವೇಗದ ಚಾರ್ಜಿಂಗ್​​ ಸೌಲಭ್ಯವನ್ನ ಬೆಂಬಲಿಸಲಿದೆ. ಅಡಾಪ್ಟರ್​​ ಗಾತ್ರವನ್ನು ಹೆಚ್ಚಿಸದೆ ವೈಶಿಷ್ಟ್ಯವನ್ನು ಪರಿಚಯಿಸಲಿದೆ.

ಸದ್ಯ ಡೆಮೊ ವಿಡಿಯೋದಲ್ಲಿ ರಿಯಲ್​ಮಿ 320 ವ್ಯಾಟ್​ ಅಡಾಪ್ಟರ್​​ ಬಳಸಿಕೊಂಡು 4420mAh ಬ್ಯಾಟರಿಯೊಂದಿಗೆ ಚಾರ್ಜ್​ ಮಾಡುತ್ತದೆ. 4 ನಿಮಿಷ 3 ಸೆಕೆಂಡುಗಳಲ್ಲಿ ಸಂಪೂರ್ಣ ಚಾರ್ಜ್​ ಆಗುತ್ತದೆ.

ಇದನ್ನೂ ಓದಿ: ಬೆಚ್ಚಿಬಿದ್ದ ಧಾರವಾಡ! 3 ವರ್ಷಗಳ ಬಳಿಕ ಮನೆಯಲ್ಲಿ ಸಿಕ್ತು ಮೃತದೇಹ.. ಕೊಳೆತು ಅಸ್ಥಿಪಂಜರವಾಗಿತ್ತು ದೇಹ!

ಸದ್ಯ ಸ್ಮಾರ್ಟ್​ಫೋನ್​ ಯುಗದಲ್ಲಿ ವೇಗದ ಚಾರ್ಜಿಂಗ್​ ಬಳಕೆಯಲ್ಲಿದೆ. ಆದರೆ ಸ್ಮಾರ್ಟ್​ಫೋನ್​ ಬಿಡುಗಡೆಗೊಂಡಂತೆ ವೇಗವಾಗಿ ಚಾರ್ಜ್​ ಮಾಡುವ ವಿಶೇಷತೆಯನ್ನು ಕಂಪನಿಗಳು ಪರಿಚಯಿಸುತ್ತಿವೆ. ಆದರೆ ಇದು ಎಷ್ಟರಮಟ್ಟಿಗೆ ಸುರಕ್ಷಿತವಾಗಿರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 4 ನಿಮಿಷದಲ್ಲಿ ಚಾರ್ಜ್​​ ಫುಲ್​.. 320w ಚಾರ್ಜಿಂಗ್​ ವೈಶಿಷ್ಟ್ಯ ಪರಿಚಯಿಸುತ್ತಿದೆ ರಿಯಲ್​ಮಿ! ಎಷ್ಟು ಸುರಕ್ಷಿತ?

https://newsfirstlive.com/wp-content/uploads/2024/08/realme.jpg

Load More