newsfirstkannada.com

×

ರೆಡ್​​ಮಿ ವಾಚ್​ 5 ಲೈಟ್​​ ರಿಲೀಸ್​​.. ಫೀಚರ್ಸ್​​ ಅದ್ಭುತ! ಒಂದು ಬಾರಿ ಚಾರ್ಜ್​ ಮಾಡಿದ್ರೆ 15 ದಿನ ಬರುತ್ತೆ

Share :

Published September 26, 2024 at 2:54pm

Update September 26, 2024 at 3:00pm

    ಭಾರತದಲ್ಲಿ ಬಿಡುಗಡೆಗೊಂಡ ಹೊಸ ಸ್ಮಾರ್ಟ್​​ವಾಚ್​

    ಫಿಟ್‌ನೆಸ್ ಉತ್ಸಾಹಿಗಳಿಗೆ ಈ ಸ್ಮಾರ್ಟ್​ವಾಚ್​ ಬೆಸ್ಟ್​​

    ನೀರಿನಲ್ಲೂ ಬಳಸಬಹುದಾದ ರೆಡ್​ಮಿ ವಾಚ್​​ 5 ಲೈಟ್

ಚೀನಾ ಮೂಲದ ಶಿಯೋಮಿ ಭಾರತದಲ್ಲಿ ಹೊಸ ರೆಡ್​ಮಿ ವಾಚ್​​ 5 ಲೈಟ್​ (Redmi Watch 5 Lite) ಪರಿಚಯಿಸಿದೆ. ಇದು ಸುಧಾರಿತ ಫಿಟ್ನೆಸ್ ವೈಶಿಷ್ಟ್ಯಗಳು, GPS ಮತ್ತು ರೋಮಾಂಚಕ AMOLED ಡಿಸ್​​ಪ್ಲೇಯೊಂದಿಗೆ ಬಿಡುಗಡೆಗೊಂಡಿದೆ.

ನೂತನ ಸ್ಮಾರ್ಟ್​ವಾಚ್​ ಫಿಟ್‌ನೆಸ್ ಉತ್ಸಾಹಿಗಳಿಗೆ ಮತ್ತು ವೃತ್ತಿಪರರಿಗೆ ವಿನ್ಯಾಸಗೊಳಿಸಲಾಗಿದೆ. ದೈನಂದಿನ ಬಳಕೆಗೆ ಸೂಕ್ತವಾದಂತೆ ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ.

ರೆಡ್​ಮಿ ವಾಚ್​​ 5 ಲೈಟ್ ವಿಶೇಷತೆಗಳು:

ಹೊಸ ಸ್ಮಾರ್ಟ್ ವಾಚ್ 1.96-ಇಂಚಿನ ಅಮೋಲ್ಡ್​ ಡಿಸ್​​ಪ್ಲೇ ಹೊಂದಿದೆ. ಬಳಕೆದಾರರು ಸುಲಭವಾಗಿ ಅಧಿಸೂಚನೆಗಳನ್ನು ವೀಕ್ಷಿಸಬಹುದಾಗಿದೆ. ಫಿಟ್‌ನೆಸ್ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡುವ ವೈಶಿಷ್ಟ್ಯ ಇದರಲ್ಲಿದೆ. ಅಪ್ಲಿಕೇಶನ್‌ ಮೂಲಕವೂ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Amazon ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​.. 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​ಗಳು​

ಟ್ರ್ಯಾಕಿಂಗ್‌ ಮತ್ತು GPS

ಅಂದಹಾಗೆಯೇ ಇದರಲ್ಲಿ 5-ಸಿಸ್ಟಮ್ GPS ಅಳವಡಿಸಲಾಗಿದೆ. ನಿಖರವಾದ ಟ್ರ್ಯಾಕಿಂಗ್ ವೈಶಿಷ್ಟ್ಯವಿದೆ. ಫಿಟ್ನೆಸ್ ಉತ್ಸಾಹಿಗಳಿಗೆ ಸೂಕ್ತವೆಂಬಂತೆ ಸಿದ್ಧಪಡಿಸಲಾಗಿದೆ. ಓಟ, ಸೈಕ್ಲಿಂಗ್, ಜಾಗಿಂಗ್​ ಹೀಗೆ 200ಕ್ಕೂ ಅಧಿಕ ಕ್ರೀಡಾ ವಿಧಾನಗಳು ಮತ್ತು 5 ATM ನೀರಿನ ಪ್ರತಿರೋಧವನ್ನು ಎದುರಿಸುತ್ತದೆ. ಈಜುವಾಗಲೂ ಬಳಸಬಹುದಾಗಿದೆ. ಇದಲ್ಲದೆ, ಫೋನ್​ ಕರೆ ಆಲಿಸಲು, ಸಂದೇಶಗಳಿಗೆ ಮರು ಪ್ರತಿಕ್ರಿಯೆ ನಿಡುವ ವೈಶಿಷ್ಟಯವಿದೆ.

ಇದನ್ನೂ ಓದಿ: Flipkart: ಐಫೋನ್​ 15 ಮೇಲೆ ಭರ್ಜರಿ ಆಫರ್​.. ಇದಕ್ಕಿಂತ ಕಡಿಮೆ ಬೆಲೆಗೆ ಸಿಗೋದೆ ಡೌಟ್​!

ಬ್ಯಾಟರಿ

ಶಿಯೋಮಿ HyperOS ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್​ವಾಚ್​ ಒಂದು ಬಾರಿ ಚಾರ್ಜ್​ ಮಾಡಿದರೆ 18 ದಿನಗಳ ಕಾಲ ಬಾಳ್ವಿಕೆ ಬರುತ್ತಿದೆ.

ಬೆಲೆ ಮತ್ತು ಲಭ್ಯತೆ

ರೆಡ್​ಮಿ ವಾಚ್​​ 5 ಲೈಟ್ ಗ್ರಾಹಕರಿಗಾಗಿ 3,499 ರೂಪಾಯಿಗೆ ಸಿಗಲಿದೆ. ಗ್ರಾಹಕರಿಗಾಗಿ ಕಪ್ಪು, ಬೂದು ಬಣ್ಣದಲ್ಲಿ ಸಿಗುತ್ತಿದೆ. ಟೆಕ್​ ಪ್ರಿಯರು ಅಥವಾ ಗ್ರಾಹಕರು ಅಧಿಕೃತ ವೆಬ್‌ಸೈಟ್​ಗಳಾದ mi.com, Amazon ಮತ್ತು Xiaomi ಚಿಲ್ಲರೆ ಪಾಲುದಾರರಿಂದ ಖರೀದಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೆಡ್​​ಮಿ ವಾಚ್​ 5 ಲೈಟ್​​ ರಿಲೀಸ್​​.. ಫೀಚರ್ಸ್​​ ಅದ್ಭುತ! ಒಂದು ಬಾರಿ ಚಾರ್ಜ್​ ಮಾಡಿದ್ರೆ 15 ದಿನ ಬರುತ್ತೆ

https://newsfirstlive.com/wp-content/uploads/2024/09/Redmi.jpg

Load More