newsfirstkannada.com

ಜೈಲಿಂದ ರಿಲೀಸಾದ ಮೇಲೆ ಖಿನ್ನತೆಗೆ ಒಳಗಾದ್ರಾ ಸೋನು ಗೌಡ? ಸೆರೆವಾಸದ ಅನುಭವ ಬಿಚ್ಚಿಟ್ಟ ರೀಲ್ಸ್​ ರಾಣಿ!

Share :

Published April 14, 2024 at 6:14am

    ಮತ್ತೊಮ್ಮೆ ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳಬಾರದು ಎಂದ ರೀಲ್ಸ್​ ರಾಣಿ

    ಸೋಷಿಯಲ್ ಮೀಡಿಯಾದಲ್ಲಿ ಸೋನು ಶ್ರೀನಿವಾಸ್ ಗೌಡ ಬಗ್ಗೆಯೇ ಚರ್ಚೆ

    ಇಷ್ಟು ಚಿಕ್ಕ ವಯಸ್ಸಿಗೆ ನಾನು ಜೈಲಿಗೆ ಬರಬೇಕಾಯ್ತಲ್ಲಾ ಅಂತಾ ಕೊರಗಿದ್ದ ಸೋನು!

ಸೋನು ಶ್ರೀನಿವಾಸ ಗೌಡ ಜೈಲಿಗೆ ಹೋಗಿ ಬಂದ್ಮೇಲೆ ತುಂಬಾ ಡಿಪ್ರೆಸ್ ಆಗ್ಬಿಟ್ಟಿದ್ದಾರಾ? ಹೀಗೊಂದು ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿತ್ತು. ಆದ್ರೆ, ಸೋನು ಗೌಡರನ್ನ ನೋಡಿದ ಮೇಲೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಬಿಟ್ಟಿದೆ. ಆಗಿದ್ದು ಆಗಿದೇ ಯಾಕೆ ಕೊರಗಿಕೊಂಡು ಕೂರಬೇಕು ಅನ್ನೋ ಮನಸ್ಥಿತಿಗೆ ಬಂದಂಗೆ ಇದೆ ಸೋನು. ಸದ್ಯಕ್ಕೆ ಎಲ್ಲರಿಗೂ ಇರೋ ಕುತೂಹಲವೆಂದರೇ, ಸೋನು ಜೈಲಿನಲ್ಲಿ ಹೇಗಿದ್ದರು? ಅವರಿಗಾದ ಅನುಭವಗಳೇನು ಅನ್ನೋದರ ಬಗ್ಗೆ ನಿಜಕ್ಕೂ ಕ್ಯೂರಿಯಾಸಿಟಿ ಇದೆ. ಇದಕ್ಕೆ ಸದ್ಯ ಸೋನುನೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: VIDEO: ಆರ್​​​ಸಿಬಿ ಅಭಿಮಾನಿಗಳ ಕ್ಲಬ್​ ಸೇರಿದ 6 ತಿಂಗಳು ಮಗು; ಏನಿದು ಸ್ಟೋರಿ?

ಅಕ್ರಮ ದತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನುಗೌಡ ಪೊಲೀಸ್‌ ಸ್ಟೇಷನ್‌ನಲ್ಲಿ ವಿಚಾರಣೆ ಒಳಪಟ್ಟಿದ್ದಾಗ, ಪಾಸಿಟಿವ್‌ ಹಾಗೂ ನೆಗೆಟಿವ್‌ ಕಮೆಂಟ್ಸ್ ಬಂದಿದ್ದು ನಿಜ. ಆದ್ರೆ, ಅದೇ ಸೋನುಗೌಡರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದಾಗ ನಿಜಕ್ಕೂ ಮರುಗಿದರವೇ ಹೆಚ್ಚು. ಹೌದು, ಏನೋ ಮಾಡಲು ಹೋಗಿ, ಸೋನು ಏನೋ ಮಾಡಿಕೊಂಡಳು ಅಂತಾ ಜನರು ಬೇಸರವಾಗಿದ್ದು ನಿಜ. ಹೋಗಲಿ ಕೆಲವರು, ಈ ಕಾನೂನಿನ ಬಗ್ಗೆ ಮೊದಲು ಅರಿವು ಮೂಡಿಸಬೇಕು ಅಂತಿದ್ದು ಇದೆ. ಇಷ್ಟೆಲ್ಲಾದರ ನಡುವೆ, ಸೋನು ಜೈಲಿನಲ್ಲಿ ಹೇಗಿದ್ದಾರೆ? ಹೇಗಿದೆ ಅವರ ಮನಸ್ಥಿತಿ ಅಂತಾ ತಿಳಿದುಕೊಳ್ಳಲು ಕೆಲವರು ಯತ್ನಿಸಿದ್ದು ಉಂಟು. ಈಗ ಇದಕ್ಕೆಲ್ಲಾ ಸ್ವತಃ ಸೋನುಗೌಡ ಉತ್ತರ ಕೊಟ್ಟಿದ್ದಾರೆ.

ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದ್ದರು. ಪೊಲೀಸ್​​ ಸ್ಟೇಷನ್​​ ಬಳಿಕ ಕೋರ್ಟ್​ನಲ್ಲಿ ನನ್ನನ್ನು ಸೆಂಟ್ರೆಲ್ ಜೈಲಿನಲ್ಲಿ 4 ಗೋಡೆಗಳ ಮಧ್ಯೆ ಹಾಕಿದ್ದರು. ಆ 4 ದಿನ ಕಳೆದಾಗ ನನಗೆ ಇದೆಲ್ಲಾ ಬೇಕಿತ್ತಾ ಎಂದು ಅನಿಸಿತು. ನನ್ನ ಕೇಸ್​​ನಂತೆ ಬೇರೆ ಬೇರೆ ಪ್ರಕರಣದವರು ಕೂಡ ಅಲ್ಲಿ ಇದ್ದರು. ಫುಲ್ ಮರ್ಡರ್, ಹಾಫ್​ ಮರ್ಡರ್ ಮಾಡಿದವರೆಲ್ಲಾ ಇದ್ರು. ಹಲವು ರೀತಿಯ ಜನಗಳ ಜೊತೆ ಇರೋದು ನನಗೆ ಕಷ್ಟ ಅನಿಸಿತು. ಜೈಲಿನಲ್ಲಿ 3 ದಿನಕ್ಕೆ ಒಮ್ಮೆ ಫೋನ್ ಕೊಡುತ್ತಿದ್ದರು. 3-4 ನಿಮಿಷ ಮಾತಾಡಲು ಮೂರು ದಿನ ಕಾಯಬೇಕಿತ್ತು. ಇದರಿಂದ ನನಗೆ ವ್ಯಕ್ತಿಯ ಬೆಲೆ ಗೊತ್ತಾಯ್ತು. ಜೈಲಿನ 4 ಗೋಡೆ ಮಧ್ಯೆ ಇದ್ದು ಅನೇಕ ವಿಚಾರ ಕಲಿತುಕೊಂಡೆ ಅಂತಾ ಹೇಳಿಕೊಂಡಿದ್ದಾರೆ. ಇನ್ನೊಂದು ವಿಚಾರ ಅಂದ್ರೆ, ಜೈಲಿನಲ್ಲಿ ತುಂಬಾನೇ ಸೊಳ್ಳೆ ಕಾಟ ಇತ್ತು. ನಾನು ಫ್ಯಾನ್​ ಇಲ್ಲದೇ ಇರೋದಿಲ್ಲ. ಅಲ್ಲೂ ಫ್ಯಾನ್​ ಇತ್ತು. ಆದ್ರೆ, ನಮ್ಮ ಲೈಫ್​ ಸ್ಟೈಲ್ ಬೇರೆ, ಅಲ್ಲಿ ಇರುವವರ ಜೀವನ ಬೇರೆನೆ ಇದೆ. 24ನೇ ವಯಸ್ಸಿಗೆ ನಾನು ಜೈಲು ನೋಡಿದೆ ಅನ್ನೋದೇ ನನಗೆ ಬೇಸರದ ವಿಚಾರ.ನಾಲ್ಕು ಗೋಡೆ ನಡುವೆ ಇದ್ದಾಗ ಯಾಕೆ ಈ ರೀತಿ ಆಯ್ತು ಎಂದು ಯೋಚಿಸಿದೆ. ನನ್ನ ಜೀವನ ಮತ್ತೆ ನೆಗೆಟಿವ್ ಆಗಿ ಹೋಯ್ತು ಅಂತ ತುಂಬಾ ಬೇಸರವಾಯ್ತು. ನನ್ನವರು ಅಂತ ಯಾರು ಇಲ್ಲ. ಅದಕ್ಕಾಗಿ ನನಗೆ ತುಂಬಾ ಬೇಸರ ಆಯ್ತು. ಇದರಲ್ಲಿ ಖುಷಿ ವಿಚಾರ ಅಂದ್ರೆ. ಟ್ರೋಲ್ ಪೇಜ್​ಗಳು ನನ್ನನ್ನು ಸಪೋರ್ಟ್ ಮಾಡಿದ್ದಾರೆ. ಇದನ್ನು ನೋಡಿ ನನಗೆ ಖುಷಿ ಆಯ್ತು. ಜೈಲಿನಿಂದ ಬಂದ ಮೊದಲ ದಿನ ನಾನು ಫೋನ್ ನೋಡಿಲ್ಲ. ನಂತರ ನೋಡಿದೆ. ನನ್ನದು ಸಣ್ಣ ಸರ್ಕಲ್, ನನ್ನ ಅಣ್ಣ, ನಮ್ಮ ಮನೆಯವರು, ರಾಕೇಶ್​ ಅಡಿಗ ಎಲ್ಲರು ನನ್ನ ಜೊತೆ ಇದ್ದರು. ಈ ಕೇಸ್​ ಬಗ್ಗೆ ನಾನು ಹೆಚ್ಚು ಮಾತಾಡುವಂತಿಲ್ಲ. ಆದ್ರೆ ಇನ್ಮುಂದೆ ನಾನು ಎಂದಿನಂತೆ ವಿಡಿಯೋ ಮಾಡುವೆ, ನಿಮ್ಮ ಸಪೋರ್ಟ್ ಬೇಕು.

– ಸೋನು ಶ್ರೀನಿವಾಸ್ ಗೌಡ

ಇದನ್ನೂ ಓದಿ: ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಹೊಸ ಬಾಂಬ್​ ಸಿಡಿಸಿದ ಸೋನು ಗೌಡ; ಏನದು?

ಸೋನುಗೌಡಗೆ ನ್ಯಾಯಾಂಗ ಬಂಧನ ಅಂತಾ ಕೋರ್ಟ್‌ ಆದೇಶ ಪಾಸ್ ಮಾಡಿದ ದಿನವೇ ಸೋನುಗೌಡ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಹೋದರು. ಮೊಟ್ಟ ಮೊದಲ ದಿನ ಸೋನುಗೆ ಬೇಸರ ಆಗಿತ್ತಂತೆ. ಇಷ್ಟು ಚಿಕ್ಕ ವಯಸ್ಸಿಗೆ ನಾನು ಜೈಲಿಗೆ ಬರಬೇಕಾಯ್ತಲ್ಲಾ ಅಂತಾ ಕೊರಗಿದರಂತೆ. ಜೊತೆಗೆ ಇದೆಲ್ಲಾ ನನಗೆ ಬೇಕಿತ್ತಾ ಅಂತಾ ಭಾವುಕರಾದರಂತೆ. ಈ ವಿಚಾರವಂತೂ ಓಪನ್ ಸೀಕ್ರೆಟ್. ಎಲ್ಲರಿಗೂ ಗೊತ್ತಿರುವಂತದ್ದೇ. ಅದೇನಂದ್ರೆ, ಜೈಲಿನಲ್ಲಿ ಮಾತನಾಡೋಕೆ ಮೊಬೈಲ್‌ ಸಿಗುತ್ತೆ ಅನ್ನೋದು ಜಗಜ್ಜಾಹೀರಾಗಿದೆ. ಇನ್‌ಫ್ಯಾಕ್ಟ್ ಸೋನುಗೌಡಗೂ, ಮೊಬೈಲ್ ಕೊಟ್ಟಿದ್ದರಂತೆ. ಆದ್ರೆ, ಸೋನು ಯಾರ ಜೊತೆಯೂ ಮಾತನಾಡಲಿಲ್ಲವಂತೆ. ಈಗಂತಾ ಸ್ವತಃ ಸೋನುಗೌಡನೇ ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಸೋದು ಕಾನೂನುಬಾಹಿರವೇ. ಆದರೂ ಅಲ್ಲಿನವರು ಬಳಸುತ್ತಿದ್ದಾರೆ ಅನ್ನೋದನ್ನ ಅಲ್ಲಿದ ಸೋನುಗೌಡ ಅವರೇ ಹೇಳಿಬಿಟ್ಟಿದ್ದಾರೆ. ಸಹಜ ಜೀವನದಲ್ಲಿದ್ದುಕೊಂಡು, ನಮಗೆ ಇಷ್ಟ ಬಂದಂತೆ ಬದುಕಿದ್ದೋರಿಗೆ ಜೈಲು ವಾಸ ನಿಜಕ್ಕೂ ಕಠಿಣವೇ. ನಮಗೆ ಬೇಕಿದ್ದು ಸಿಗೋಲ್ಲ. ಬೇಕಾದವರು ಅಕ್ಕಪಕ್ಕ ಇರೋದಿಲ್ಲ. ನಾವು ಮಾಡಬೇಕು ಏನೂ ಮಾಡಬಾರದು ಅನ್ನೋದಕ್ಕೆಲ್ಲಾ ನಿಯಮಗಳು ಬೇರೇ.

ಹೀಗಾಗಿ, ಜೈಲು ವಾಸ ಅಂತೂ ಸುಲಭ ಅಲ್ಲವೇ ಅಲ್ಲ. ಇನ್ನೂ, ಯಾವ ಮಗುವನ್ನ ಇಷ್ಟಪಟ್ಟು, ದತ್ತು ಪಡೆಯುತ್ತೇನೆ ಎಂದು ಹೇಳಿದ್ದ ಸೋನು, ಸದ್ಯ ಆ ಮಗುವಿನ ಬಗ್ಗೆ ಏನೂ ಹೇಳಲು ಇಚ್ಚಿಸುತ್ತಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳಿಂದ ಸಿಕ್ಕಿರುವ ನಿರ್ದೇಶನ. ಮತ್ತೊಮ್ಮೆ ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳಬಾರದು ಎಂಬ ಮುನ್ನೆಚ್ಚರಿಕೆ. ಇಷ್ಟೆಲ್ಲಾ ಮಾತನಾಡಿದ ಸೋನುಗೌಡ, ಹಲವರು ಕೇಳಿರುವ ಪ್ರಶ್ನೆಗಳಿಗೆ ಕ್ಲಾರಿಟಿ ಕೊಟ್ಟೇ ಕೊಡ್ತೀನಿ ಅಂತಾ ಹೇಳೋದನ್ನ ಮರೆಯಲಿಲ್ಲ. ಒಂದಲ್ಲ ಒಂದು ದಿನ ಪಕ್ಕಾ ಎಲ್ಲದ್ದಕ್ಕೂ ಕ್ಲಾರಿಟಿ ಕೊಡ್ತೀನಿ ಅಂತಾ ಸೋನುಗೌಡ ಹೇಳಿದ್ದಾರೆ. ಜೈಲಿಂದ ಹೊರಬಂದಿರೋ ಸೋನುಗೌಡ, ಫ್ಯಾಮಲಿ ಜೊತೆ ಆರಾಮಾಗಿ ಇದ್ದಾರೆ. ಅವರನ್ನ ನೋಡಿದ್ರೆ, ಲೆಟ್ಸ್ ಮೂವ್ ಆನ್‌ ಮೈಂಡ್‌ಸೆಟ್‌ನಲ್ಲಿ ಇರೋದಥರಾ ಕಾಣ್ತಿದ್ದಾರೆ. ಇದು ಪರ್ಫೆಕ್ಟ್ ಕೂಡ. ಆಗಿರೋದರ ಬಗ್ಗೆ ಯೋಚಿಸೋದಕ್ಕಿಂತ ಮುಂದೆ ಏನ್ ಮಾಡ್ಬೇಕು? ಏನ್ ಮಿಸ್ಟೇಕ್ ಮಾಡಬಾರ್ದು ಅನ್ನೋದರ ಬಗ್ಗೆ ಚಿಂತಿಸೋದು ಲೇಸು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿಂದ ರಿಲೀಸಾದ ಮೇಲೆ ಖಿನ್ನತೆಗೆ ಒಳಗಾದ್ರಾ ಸೋನು ಗೌಡ? ಸೆರೆವಾಸದ ಅನುಭವ ಬಿಚ್ಚಿಟ್ಟ ರೀಲ್ಸ್​ ರಾಣಿ!

https://newsfirstlive.com/wp-content/uploads/2024/04/sonu-gowda6.jpg

Load More