/newsfirstlive-kannada/media/post_attachments/wp-content/uploads/2024/08/Onti-Kai-Venkatesh.jpg)
ಬೆಂಗಳೂರು: ರೌಡಿಶೀಟರ್​ನಿಂದ ಸ್ನೇಹಿತನ ಹತ್ಯೆ ನಡೆದಿದೆ. ಸಿದ್ಧಾಪುರದ ಅತಿಕ್ ಮಸೀದಿ ಬಳಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಸೈಯದ್ ಇಸಾಕ್ (31) ಎಂದು ಗುರುತಿಸಲಾಗಿದೆ.
ರೌಡಿಶೀಟರ್ ಒಂಟಿ ಕೈ ವೆಂಕಟೇಶ ಸೇರಿದಂತೆ ಇಬ್ಬರಿಂದ ಕೃತ್ಯ ನಡೆದಿದೆ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ನಡೆದಿರುವ ಘಟನೆ ಇದಾಗಿದೆ. ಆರೋಪಿಗಳು ಮಚ್ಚಿನಿಂದ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಶಾಸಕ ಚೆನ್ನಾರೆಡ್ಡಿ ಪಾಟೀಲ್ 30 ರಿಂದ 40 ಲಕ್ಷ ಹಣ ಕೇಳಿದ್ದಾರೆ.. PSI ಪರಶುರಾಮ ಪತ್ನಿಯಿಂದ ಗಂಭೀರ ಆರೋಪ
ಮೃತ ಸೈಯದ್ ಇಸಾಕ್ ಮತ್ತೊರ್ವ ಗೆಳೆಯನ ಪತ್ನಿ ಜೊತೆ ಸಂಬಂಧ ಹೊಂದಿದ್ದನು. ಇದೇ ವಿಚಾರದಲ್ಲಿ ಈ ಹಿಂದೆ ಮಿಸ್ಸಿಂಗ್ ಪ್ರಕರಣ ಸಹ ದಾಖಲಾಗಿತ್ತು. ಈ ವಿಚಾರವಾಗಿ ಒಂಟಿ ಕೈ ವೆಂಕಟೇಶ ಆತನಿಗೆ ಬುದ್ದಿಮಾತು ಹೇಳಿದ್ದನು.
ಹೇಳಿದ ಮಾತು ಕೇಳದೆ ಇಸಾಕ್​ ಅವಾಜ್ ಹಾಕಿದ್ದಾನೆ. ವೆಂಕಟೇಶನನ್ನೇ ಕೊಲೆ ಮಾಡೊದಾಗಿ ಹೇಳಿಕೊಂಡು ಓಡಾಡುತ್ತಿದ್ದನಂತೆ. ಇದೇ ವಿಚಾರವಾಗಿ ವೆಂಕಟೇಶ ರಾತ್ರಿ ಇಸಾಕ್​ನನ್ನು ಭೇಟಿಯಾಗಿದ್ದಾನೆ.
ಇದನ್ನೂ ಓದಿ: VIDEO: ರಸ್ತೆ ದಾಟುತ್ತಿದ್ದ ವಿಶೇಷ ಚೇತನ ವ್ಯಕ್ತಿ ಮೇಲೆ ಹರಿದ ಲಾರಿ.. ಕ್ಷಣಾರ್ಧದಲ್ಲೇ ಸಾವು
ಭೇಟಿ ವೇಳೆ ಇಬ್ಬರ ನಡುವೆ ಜಗಳ ಶುರರುವಾಗಿದೆ. ಕೊನೆಗೆ ಜಗಳ ತಾರಕಕ್ಕೇರಿ ಹಲ್ಲೆ ಮಾಡಿಕೊಂಡಿದ್ದಾರೆ. ಹಲ್ಲೆ ಬಳಿಕ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us