/newsfirstlive-kannada/media/post_attachments/wp-content/uploads/2024/10/Jiobharat.jpg)
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಳೆದ ವರ್ಷ ಜಿಯೋಭಾರತ್ V2 ಹೆಸರಿನಲ್ಲಿ ಫೋನ್ ಪರಿಚಯಿಸಿ ಸಕ್ಸಸ್ ಕಂಡಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಜಿಯೋಭಾರತ್ ಸಿರೀಸ್ ಪರಿಚಯಿಸಿದೆ.
ಜಿಯೋಭಾರತ್ ವಿ3 ಮತ್ತು ವಿ4 ಹೆಸರಿನಲ್ಲಿ ಹೊಸ ಫೋನ್ ಪರಿಚಯಿಸಿದೆ. ನೂತನ ಫೋನ್ ಕೈಗೆಟಕುವ ದರದಲ್ಲಿ ಸಿಗುತ್ತಿದೆ. 4G ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಎರಡು ಫೋನ್ಗಳು ಆತ್ಯಾಧುನಿಕತೆ ಸ್ಪರ್ಶವನ್ನು ಹೊಂದಿದೆ.
ಇದನ್ನೂ ಓದಿ: Blinkit: ಬರೀ 10 ನಿಮಿಷದಲ್ಲಿ ರಿಟರ್ನ್ ಮತ್ತು ಎಕ್ಸ್ಚೇಂಜ್ ಮಾಡುವ ಅವಕಾಶ.. ಬ್ಲಿಂಕ್ಇಟ್ ತೆರೆದಿಟ್ಟಿದೆ ಹೊಸ ವೈಶಿಷ್ಟ್ಯ
ಜಿಯೋಭಾರತ್ ವಿ3 ಮತ್ತು ವಿ4 ವಿಶೇಷ ಡಿಜಿಟಲ್ ಸೇವೆಗಳ ಸೂಟ್ನೊಂದಿಗೆ ಪರಿಚಯಿಸಲಾಗಿದೆ. ಕರೆ ಮಾಡಲು, ಮನರಂಜನೆ, ಹಣ ವರ್ಗಾವಣೆಯಂತಹ ಆನ್ಲೈನ್ ಪಾವತಿ ಸೇವೆ ಹೀಗೆ ಹಲವು ಪ್ರಮುಖ ಸೇವೆಯನ್ನು ಇದು ಒದಗಿಸುತ್ತಿದೆ. ಅಂದಹಾಗೆಯೇ ಇದರಲ್ಲಿ ಏನೇನಿದೆ ಎಂದು ನೋಡುವುದಾದರೆ..
- JioTV: ನೂತನ ಫೋನ್ನಲ್ಲಿ 455ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್, ಬಳಕೆದಾರರ ನೆಚ್ಚಿನ ಕಾರ್ಯಕ್ರಮ, ಸುದ್ದಿ ಮತ್ತು ಕ್ರೀಡೆಗಳನ್ನು ನೇರವಾಗಿ ವೀಕ್ಷಿಸಬಹುದು.
- JioCinema: ಕ್ರೀಡೆಗಳು ಮಾತ್ರವಲ್ಲ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ವಿವಿಧ ಮನರಂಜನಾ ಆಯ್ಕೆಗಳನ್ನು ನೀಡುತ್ತಿದೆ.
- JioPay: ನೂತನ ಫೋನ್ನಲ್ಲಿ ಯುಪಿಐ ಸೇವೆಯನ್ನು ಒದಗಿಸಲಾಗಿದೆ. ಜಿಯೋಪೇ ಡಿಜಿಟಲ್ ವಹಿವಾಟನ್ನು ಸರಳಗೊಳಿಸಿದೆ.
- JioChat: ಅನಿಯಮಿತ ಧ್ವನಿ ಸಂದೇಶ, ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳಬಹುದಾಗಿದೆ. ಗ್ರೂಪ್ ಚಾಟ್ಗಳನ್ನು ಇದರ ಮೂಲಕ ಮಾಡಬಹುದಾಗಿದೆ.
ಇದನ್ನೂ ಓದಿ:Security Alert: ಆ್ಯಂಡ್ರಾಯ್ಡ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ.. ಕೂಡಲೇ ಹೀಗೆ ಮಾಡಿ
ಎರಡೂ ಮಾದರಿಯಲ್ಲಿ 1000mAh ಬ್ಯಾಟರಿ ಪರಿಚಯಿಸಲಾಗಿದೆ. ಒಂದು ದಿನ ಪೂರ್ತಿ ಬಳಸಬಹುದಾಗಿದೆ. ಜೊತೆಗೆ ಇದರಲ್ಲಿ ಸಂಗ್ರಹಣ ಸಾಮರ್ಥ್ಯವನ್ನು ವಿಸ್ತರಿಸಲಾಗಿದೆ. ಅಪ್ಲಿಕೇಶನ್, ವಿಡಿಯೋ ಮತ್ತು ಫೋಟೋಗಳಿಗೆ ಅವಕಾಶವಿದೆ. ಮತ್ತೊಂದು ಸಂಗತಿ ಎಂದರೆ 23 ಭಾಷೆಯನ್ನು ಇದು ಬೆಂಬಲಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ