VIDEO: ಕನ್ನಡಿಗರ ಮೇಲೂ ಬಿತ್ತು ರಣಚಂಡಿ ಚಂಡಮಾರುತದ ಕರಿನೆರಳು.. ಸಂಕಷ್ಟಕ್ಕೆ ಸಿಲುಕಿದ್ದಾರೆ 180 ಜನರು!

author-image
AS Harshith
Updated On
VIDEO: ಕನ್ನಡಿಗರ ಮೇಲೂ ಬಿತ್ತು ರಣಚಂಡಿ ಚಂಡಮಾರುತದ ಕರಿನೆರಳು.. ಸಂಕಷ್ಟಕ್ಕೆ ಸಿಲುಕಿದ್ದಾರೆ 180 ಜನರು!
Advertisment
  • ಕನ್ನಡಿಗರ ಮೇಲೂ ಬಿತ್ತು ‘ರೆಮಲ್’ ಚಂಡಮಾರುತದ ಎಫೆಕ್ಟ್
  • ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯ ಹಸ್ತ ಚಾಚುವಂತೆ ಮನವಿ
  • ಸಂಕಷ್ಟದಲ್ಲಿ 180 ಮಂದಿ.. ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಮನವಿ

ಪಶ್ಚಿಮ ಬಂಗಾಳ ಸೇರಿದಂತೆ ಈಶಾನ್ಯ ರಾಜ್ಯಗಳನ್ನ ಕಾಡ್ತಿರೋ ರೆಮಲ್ ಚಂಡಮಾರುತ ಕನ್ನಡಿಗರಿಗೂ ಸಂಕಷ್ಟ ತಂದಿಟ್ಟಿದೆ. ಅಂಡಮಾನ್ ನಿಕೋಬಾರ್​ಗೆ ತೆರಳಿದ್ದ ರಾಜ್ಯದ ಜನರು ಊಟ, ನೀರಿಲ್ಲದೆ ಪರದಾಡುವಂತಾಗಿದೆ.

ಅಂಡಮಾನ್ ನಿಕೋಬಾರ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಮೈಸೂರು, ದಾವಣಗೆರೆ ಸೇರಿ ವಿವಿಧೆಡೆಯಿಂದ ಅಂಡಮಾನ್ ನಿಕೋಬಾರ್​ಗೆ ಕನ್ನಡಿಗರು ತೆರಳಿದ್ದರು. ಆದರೆ ರೆಮಲ್ ಚಂಡಮಾರುತ ಹಿನ್ನೆಲೆ ವಿಸ್ತಾರ ವಿಮಾನ ಯಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಬೆಳಗ್ಗೆ 11ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 180 ಜನ ಸಂಜೆಯಾದರೂ ವಿಮಾನವಿಲ್ಲದ ಕಾರಣ ಕಂಗಾಲಾಗುವಂತೆ ಮಾಡಿತ್ತು. ಆಹಾರ, ನೀರು ಸಹ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇನ್ನು, ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತಾ ಅಲ್ಲೇ ಸಿಲುಕಿರೋ ಮೈಸೂರು ಮೂಲದ ನಿವೃತ್ತ ಪ್ರಾಂಶುಪಾಲರು ಪರಮೇಶ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವಿಮಾನಗಳ ವ್ಯತ್ಯಯದಿಂದ ಆಕ್ರೋಶ ವ್ಯಕ್ತಪಡಿಸಿದ ಪ್ರವಾಸಿಗರು

ಮೇ 22 ರಂದು ಅಂಡಮಾನ್​ಗೆ ಪ್ರಯಾಣ ಬೆಳಸಿದ್ದ ಕನ್ನಡಿಗರು, ಇದೀಗ ವಾಪಸ್ ಬರಲಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆನ್ನೈನಿಂದ ಬಂದಿದ್ದ ವಿಮಾನ ಹವಾಮಾನ ವೈಪರೀತ್ಯದಿಂದ ವಾಪಸ್ ಆಗಿದ್ದು ಸಂಕಷ್ಟ ಎದುರಾಗಿದೆ. ವಿಮಾನಗಳ ವ್ಯತ್ಯಯದಿಂದ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿ ಜತೆ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ವಾಗ್ವಾದ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಾಪಸ್ ಕರೆತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

publive-image

ಇದನ್ನೂ ಓದಿ: ಎಚ್ಚರದಿಂದಿರಿ! ಗಂಟೆಗೆ 135 ಕಿಮೀ ವೇಗ.. ರೆಮಲ್ ಸೈಕ್ಲೋನ್​ಗೆ 16 ಜನರು ಬಲಿ

ಸದ್ಯ, ಅಂಡಮಾನ್​ ನಿಕೋಬಾರ್​ನಲ್ಲಿ ಸಿಲುಕಿರೋ ಪರಮೇಶ್ ಮಾಹಿತಿಯ ಪ್ರಕಾರ 180 ಮಂದಿ ಅಲ್ಲಿದ್ದಾರೆ. ಹೀಗಾಗಿ ಇವರನ್ನ ಸುರಕ್ಷಿತವಾಗಿ ವಾಪಸ್ ಕರೆತರೋ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment