/newsfirstlive-kannada/media/post_attachments/wp-content/uploads/2024/06/Kidnap-car-2.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್​ ಮಾಡಿದ ಸ್ಥಳದಿಂದ ಹಿಡಿದು ಆತನ ಮೃತದೇಹ ಸಿಕ್ಕ ಸ್ಥಳದವರೆಗೂ ಪ್ರತಿ ಜಾಗವನ್ನೂ ಜಾಲಾಡಿದ್ದಾರೆ. ಈ ಹೊತ್ತಲ್ಲಿ ಕೊಲೆ ಕೇಸ್‌ನ 8ನೇ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಆದ್ರೀಗ ಸರೆಂಡರ್ ಆಗಿರೋ ರವಿ ಹತ್ಯೆಯಲ್ಲಿ ಶಾಮೀಲಾಗಿಲ್ಲ ಎಂಬ ಮಾತು ಕೇಳಿಬರ್ತಿದೆ.
/newsfirstlive-kannada/media/post_attachments/wp-content/uploads/2024/06/darshan21.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದರ ನಡುವೆ, ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ಕೆಲ ಆರೋಪಿಗಳ ಕಥೆಯನ್ನು ಕೇಳ್ತಿದ್ರೆ, ನಿಜಕ್ಕೂ ಶಾಕ್​ ಆಗುತ್ತೆ. ನೆಚ್ಚಿನ ನಟನಿಗೆ ಸಹಾಯ ಮಾಡಲು ಹೋಗಿ ಬಹುತೇಕ ಆರೋಪಿಗಳು ತಗ್ಲಾಕಿಕೊಂಡಿದ್ದಾರೆ. ಆದ್ರೀಗ ಪ್ರಕರಣದ 8ನೇ ಆರೋಪಿ ಕಾರ್ ಬಾಡಿಗೆ ಕೊಟ್ಟು ಲಾಕ್ ಆಗಿದ್ದಾನೆ.
/newsfirstlive-kannada/media/post_attachments/wp-content/uploads/2024/06/Kidnap-car.jpg)
ಪ್ರಕರಣದ 8ನೇ ಆರೋಪಿ ಚಿತ್ರದುರ್ಗದಲ್ಲಿ ಸರೆಂಡರ್!
ರೇಣುಕಾಸ್ವಾಮಿ ಕೊಲೆ ಕೇಸ್‌ನ 8ನೇ ಆರೋಪಿಯಾಗಿರೋ ರವಿ ಚಿತ್ರದುರ್ಗದಲ್ಲಿ ಡಿವೈಎಸ್‌ಪಿ ಕಚೇರಿಗೆ ಬಂದು ಶರಣಾಗಿದ್ದಾನೆ. ಈತ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡೋಕೆ ಬಳಸಿದ್ದ ಟೊಯೋಟಾ ಇಟಿಯಸ್ ಗಾಡಿಯ ಡ್ರೈವರ್. ಬಾಡಿಗೆ ಇದೆ ಎಂದು ರವಿಗೆ ನಂಬಿಸಿದ್ದ ರಘು ಅಂಡ್ ಟೀಂ ರವಿಯನ್ನ ಕರೆದೊಯ್ದಿತ್ತಂತೆ. ಹೀಗೆ ಕರೆದೊಯ್ದಿರೋ ದೃಶ್ಯ ಬಂಕ್‌ವೊಂದರಲ್ಲಿ ಸೆರೆಯಾಗಿದೆ.. ಇದೀಗ ಕಾರು ಬಾಡಿಗೆಗೆ ಹೋಗಿ ರವಿ ಪ್ರಕರಣದಲ್ಲಿ ಸಿಕ್ಕಾಕಿಕೊಂಡಿದ್ದಾನೆ ಅನ್ನೋದು ಈತನನ್ನ ಸರೆಂಡರ್ ಮಾಡಿಸಿದ ಸ್ನೇಹಿತ ಮೋಹನ್ ಮಾತು.
/newsfirstlive-kannada/media/post_attachments/wp-content/uploads/2024/06/Kidnap-car-1.jpg)
ಉಪಹಾರದ ಬಿಲ್‌ನ ರೇಣುಕಾಸ್ವಾಮಿಯೇ ಕಟ್ಟಿದ್ದನಂತೆ
ಇನ್ನೂ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕರೆದೊಯ್ಯುವಾಗ ತುಮಕೂರು ಬಳಿ ಉಪಹಾರ ಸೇವಿಸಿದ್ರಂತೆ. ಆಗ ಆರೋಪಿಗಳಾದ ರಘು, ಜಗ್ಗು, ಅನು ತಿಂದಿದ್ದ ಉಪಹಾರದ ಬಿಲ್‌ನ ರೇಣುಕಾಸ್ವಾಮಿಯೇ ಕಟ್ಟಿದ್ದನಂತೆ.
ಇದನ್ನೂ ಓದಿ: ‘ಯಾರಿಗೂ ಕೊಲೆ ಮಾಡುವ ಹಕ್ಕಿಲ್ಲ..’- ದರ್ಶನ್​ ವಿರುದ್ಧ ರಮ್ಯಾ ಮತ್ತೆ ಕಿಡಿ!
ಇನ್ನೂ ಚಿತ್ರದುರ್ಗದಿಂದ ನೇರವಾಗಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಇಟಿಯಸ್‌ನಲ್ಲೇ ರೇಣುಕಾಸ್ವಾಮಿಯನ್ನ ರಘು ಅಂಡ್ ಟೀಂ ಕರೆದೊಯ್ದಿದೆ. ಅಲ್ಲಿ ರವಿ, ಜಗ್ಗು, ಅನುನ ಹೊರಗೆ ನಿಲ್ಲಿಸಿ ರೇಣುಕಾಸ್ವಾಮಿಯನ್ನ ರಘು ಪಟ್ಟಣಗೆರೆಯ ಶೆಡ್ ಒಳಗೆ ಕರೆದೊಯ್ದಿದ್ರಂತೆ.. ಈ ವೇಳೆ ಡ್ರೈವರ್ ರವಿಯನ್ನ ಕೇಸ್‌ನಲ್ಲಿ ಫಿಟ್ ಮಾಡಲು ನೋಡಿತ್ತಂತೆ ಕೊಲೆಪಾತಕ ಡಿ ಗ್ಯಾಂಗ್.
ಇದನ್ನೂ ಓದಿ: ಗಂಡ, ಹೆಂಡತಿ ಮಧ್ಯೆ ಜಗಳ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ
ಒಟ್ಟಾರೆ, ಪ್ರಕರಣ ಬಯಲಾಗುತ್ತಿದ್ದಂತೆ ಗಾಬರಿಗೊಂಡಿದ್ದ ಚಾಲಕ ರವಿ ಈಗ ಪೊಲೀಸರಿಗೆ ಶರಣಾಗಿದ್ದಾನೆ.. ಅದೇನೆ ಇರ್ಲಿ, ದರ್ಶನ್ ಮೇಲಿನ ಅಭಿಮಾನದಿಂದ ಕೆಲವರು ಕೇಸ್‌ನಲ್ಲಿ ಫಿಟ್ ಆಗಿದ್ರೆ, ಇನ್ನೂ ಕೆಲವ್ರು ಏನೂ ಗೊತ್ತಿಲ್ಲದೇ ಪೊಲೀಸರ ಅತಿಥಿ ಆಗ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us