/newsfirstlive-kannada/media/post_attachments/wp-content/uploads/2024/06/renukaswami2.jpg)
ರೇಣುಕಾಸ್ವಾಮಿ ಸಾಯೋಕು ಮೊದಲು ಅನುಭವಿಸಿದ್ದು ಅಕ್ಷರಶಃ ನರಕಯಾತನೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ರೇಣುಕಾ ಮೇಲೆ ಡಿ ಗ್ಯಾಂಗ್ ನಡೆಸಿರೋ ಕೌರ್ಯ ಬಯಲಾಗಿದೆ. ನರರಾಕ್ಷಸರಂತೆ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಅಟ್ಟಹಾಸ ಮೆರೆದಿರೋದು ವರದಿ ಬಿಚ್ಚಿಟ್ಟಿದೆ. ರಿಪೋರ್ಟ್ನಲ್ಲಿರೋ ಅಂಶಗಳನ್ನ ನೋಡಿದ್ರೆ ಬೆಚ್ಚಿ ಬೀಳ್ತೀರಾ.
ಇದನ್ನೂ ಓದಿ: ದರ್ಶನ್ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್ ಸೇರಿಸಿದ ಪೊಲೀಸರು.. ಯಾವ್ಯಾವ ಸೆಕ್ಷನ್‌ಗೆ ಎಷ್ಟು ವರ್ಷ ಶಿಕ್ಷೆ?
ಬೆನ್ನಿನ ಮೇಲೆ ಬಾಸುಂಡೆಗಳು. ಎದೆ ಮೇಲೆ ಗಾಯಗಳು. ಕಾಲಲ್ಲಿ ಗಾಯಗಳು. ಕೈಗೆ ಕರೆಂಟ್ ಶಾಕ್ ಕೊಟ್ಟಿರೋ ಗುರುತು. ಇಷ್ಟೇ ಅಲ್ಲ ಕೆಲ ಅಂಗಾಂಗದ ಮೇಲೆ ತೋರಿಸೋಕು ಆಗದಿರುವಷ್ಟು ಕ್ರೂರವಾಗಿ ಗಾಯಗಳಾಗಿವೆ. ರೇಣುಕಾಸ್ವಾಮಿ ಮೇಲೆ ಅಟ್ಟಹಾಸ ಮೆರೆದವರು ಮನುಷ್ಯರಂತೂ ಅಲ್ಲವೇ ಅಲ್ಲ ಬಿಡಿ, ಇವ್ರನ್ನೆಲ್ಲಾ ನರ ರಾಕ್ಷಸರು ಅಂದ್ರೂ ತಪ್ಪಾಗಲ್ಲ. ಅಷ್ಟರಮಟ್ಟಿಗೆ ಆತನ ಮೇಲೆ ಕೌರ್ಯ ಮೆರೆದಿದ್ದಾರೆ. ಫೋಟೋ ಜೊತೆಗೆ ಪೋಸ್ಟ್ ಮಾರ್ಟಮ್ ವರದಿ ಕೂಡ ಆರೋಪಿಗಳ ರಕ್ಕಸಿತನವನ್ನ ಬಯಲು ಮಾಡಿದೆ.
ಜೂನ್ 8. ಪಟ್ಟಣಗೆರೆ ಶೆಡ್ ರಕ್ತಸಿಕ್ತ ಅಧ್ಯಾಯಕ್ಕೆ ರೆಡಿಯಾಗಿತ್ತು. ರೇಣುಕಾಸ್ವಾಮಿ ಎಂಬ ಚಿತ್ರದುರ್ಗದ ಯುವಕನ ಪಾಲಿನ ನರಕ ಅಲ್ಲಿ ಸಿದ್ಧವಾಗಿತ್ತು. ಜೀವಂತವಾಗಿ ಶೆಡ್ ಒಳ ಹೋದವ ಹೊರ ಬಂದಿದ್ದು, ಶವವಾಗಿ. ಡಿ ಗ್ಯಾಂಗ್ನ ಅಟ್ಟಹಾಸಕ್ಕೆ, ಚಿತ್ರ ಹಿಂಸೆ ತಾಳಲಾರದೆ ರೇಣುಕಾಸ್ವಾಮಿ ಶೆಡ್ ಒಳಗೆ ಉಸಿರು ನಿಲ್ಲಿಸಿದ್ದ. ಆ ನರಕ ಕೂಪದಲ್ಲಿ ಆತ ಅನುಭವಿಸಿದ ಯಾತನೆಯನ್ನ ಮೃತದೇಹದ ಮೇಲಿನ ಗಾಯಗಳು ಸಾಕ್ಷಿ ಹೇಳಿದ್ದವು. ಇದೀಗ ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲೂ ಆರೋಪಿಗಳ ಕೌರ್ಯ ಬಯಲಾಗಿದೆ.
ಡಿ ಗ್ಯಾಂಗ್ ‘ನರಕ’
- ರೇಣುಕಾಸ್ವಾಮಿ ಮೂಗಿನ ಮೂಳೆ ಮುರಿದುಹೋಗಿದೆ
- ರೇಣುಕಾಸ್ವಾಮಿ ಬೆನ್ನಿನ ಮೇಲೆ 18 ರಕ್ತ ಸಿಕ್ತ ಗಾಯ
- ರೇಣುಕಾಸ್ವಾಮಿ ಎಡಗೈಗೆ ಮೆಗ್ಗರ್ನಿಂದ ಕರೆಂಟ್ ಶಾಕ್
- ಕಬ್ಬಿಣದಿಂದ ಹಲ್ಲೆ, ತಲೆಯಲ್ಲಿ ಗಂಭಿರವಾದ ಹೋಲ್
- ಒಡೆದು ಹೋಗಿರೋ ರೇಣುಕಾಸ್ವಾಮಿ ತಲೆಯ ಹಿಂಭಾಗ
- ತಲೆಯಲ್ಲಿ ರಕ್ತಸ್ರಾವ, ಎದೆಯಲ್ಲಿ 8 ರಕ್ತ ಸಿಕ್ತ ಗಾಯಗಳು
- ಎಡ ಭಾಗದ ರಿಬ್ ಕಟ್, ಎದೆಗೂ ಮೆಗ್ಗರ್ನಿಂದ ಶಾಕ್
ಪೋಸ್ಟ್ ಮಾರ್ಟಮ್ನಲ್ಲಿ ಏನಿದೆ?
ಮೃತ ರೇಣುಕಾಸ್ವಾಮಿ ಮೈ ಮೇಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 39 ರಕ್ತಸಿಕ್ತ ಗಾಯಗಳಿರೋದಾಗಿ ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಉಲ್ಲೇಖವಾಗಿದೆ. ಅಷ್ಟೇ ಅಲ್ಲ, ದೇಹದ 8 ಕಡೆ ಎಲೆಕ್ಟ್ರಿಕ್ ಶಾಕ್ ನೀಡಲಾಗಿದ್ದು, ಅದರ ತೀವ್ರತೆಗೆ ಮಾಂಸ ಖಂಡ 30 ಪರ್ಸೆಂಟ್ ಸುಟ್ಟು ಹೋಗಿದೆ. ಡಿ ಗ್ಯಾಂಗ್ ಮಾಡಿರೋ ಭಯಾನಕ ಹಲ್ಲೆಗೆ ದೇಹದ 7 ಕಡೆ ಮೂಳೆಗಳು ಮುರಿದು ಹೋಗಿದ್ರೆ, 13 ಕಡೆ ಮೂಳೆ ಏರ್ ಕ್ರಾಕ್ ಅಗಿರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ, ರೇಣುಕಾಸ್ವಾಮಿಗೆ ಕಬ್ಬಿಣ, ಮರದ ವಸ್ತುಗಳಿಂದ ಹಲ್ಲೆ ಮಾಡಿರೋದು ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಬಯಲಾಗಿದೆ. ಡಿ ಗ್ಯಾಂಗ್ನ ಹೊಡೆತಕ್ಕೆ ರೇಣುಕಾಸ್ವಾಮಿ ಮೂಗಿನ ಮೂಳೆಯೇ ಮುರಿದುಹೋಗಿದೆ.
ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!
ಇನ್ನೂ, ರೇಣುಕಾಸ್ವಾಮಿ ಬೆನ್ನಿನ ಮೇಲೆ 18 ರಕ್ತ ಸಿಕ್ತ ಗಾಯಗಳು ಪತ್ತೆಯಾಗಿದ್ರೆ, ಎಡಗೈಗೆ ಮೆಗ್ಗರ್ನಿಂದ ಕರೆಂಟ್ ಶಾಕ್ ಕೊಡಲಾಗಿದೆ. ತಲೆಗೆ ಕಬ್ಬಿಣದಿಂದ ಹಲ್ಲೆ ಮಾಡಲಾಗಿದ್ದು, ತಲೆಯಲ್ಲಿ ಒಂದು ಕಾಯಿನ್ ಅಷ್ಟು ಅಗಲವಾದ ಹೋಲ್ ಆಗಿದೆ. ರಾಡ್ ಏಟಿಗೆ ರೇಣುಕಾಸ್ವಾಮಿ ತಲೆಯ ಹಿಂಭಾಗ ಒಡೆದು ಹೋಗಿದೆ. ತಲೆಯಲ್ಲಿ ರಕ್ತಸ್ರಾವವಾಗಿದ್ರೆ, ಎದೆಯಲ್ಲಿ 8 ರಕ್ತ ಸಿಕ್ತ ಗಾಯಗಳಾಗಿದೆ. ಅಷ್ಟೇ ಅಲ್ಲ, ಎಡ ಭಾಗದ ರಿಬ್ ಕಟ್ ಆಗಿದ್ದು, ಎದೆಗೂ ಮೆಗ್ಗರ್ನಿಂದ ಶಾಕ್ ಕೊಟ್ಟಿರೋದು ಪತ್ತೆಯಾಗಿದೆ. ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ಮೆರೆದಿರೋ ದರ್ಪವನ್ನ ಕೇಳ್ತಿದ್ರೆನೆ ಎದೆ ನಡುಗುತ್ತೆ. ಇನ್ನೂ ಇದನ್ನ ರೇಣುಕಾಸ್ವಾಮಿ ಹೇಗೆ ಅನುಭವಿಸಿರಬೇಕು ಅಲ್ವಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ